ಥಿಯೇಟರ್ ಮುಂದೆ ಡಾಲಿ ಡ್ಯಾನ್ಸ್; ನಟರಾಕ್ಷಸನ ಅಭಿಮಾನಕ್ಕೆ ಕರಗಿದ ಶಿವಣ್ಣ
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ರಿಲೀಸ್ ಆಗಿದೆ. ರಣಗಲ್ ಲುಕ್‌ನಲ್ಲಿ ಮತ್ತೊಮ್ಮೆ ಅಭಿಮಾನಿಗಳನ್ನು ಗೆದ್ದು ಬಿಟ್ಟಿದ್ದಾರೆ. ಮೊದಲ ದಿನವೇ ಕನ್ನಡ ಸಿನಿಮಾಗೆ ಇಂತಹ ರೆಸ್ಪಾನ್ಸ್ ಸಿಕ್ಕು ಅದೆಷ್ಟು ವರ್ಷಗಳಾಗಿತ್ತೋ. ಮತ್ತೆ ಥಿಯೇಟರ್ ಮುಂದೆ ಅದೇ ಫೀಲ್ ಬಂದಿದ್ದು 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆದ ದಿನವೇ.
ಈ ಸಂಭ್ರಮಕ್ಕೆ ಇನ್ನುಷ್ಟು ಜೋಷ್ ಕೊಟ್ಟಿದ್ದರು ಸ್ಯಾಂಡಲ್‌ವುಡ್ ನಟರಾಕ್ಷಸ ಡಾಲಿ ಧನಂಜಯ್. ಬೆಳ್ಳಬೆಳಗ್ಗೆನೇ 'ಭೈರತಿ ರಣಗಲ್' ಸಿನಿಮಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಥಿಯೇಟರ್ ಮುಂದೆ ಪಟಾಕಿ ಸಿಡಿಸಿ, ತಮಟೆ ಬಾರಿ ಸಂಭ್ರಮಿಸಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಡಾಲಿ ಧನಂಜಯ್ ಕೂಡ ಅಭಿಮಾನಿಗಳ ಜೊತೆ ಸೇರಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದರು.

ಡಾಲಿ ಡ್ಯಾನ್ಸ್ ಮಾಡುತ್ತಿದ್ದಂತೆ ಕ್ಷಣಾರ್ಥದಲ್ಲಿ ಆ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. 'ಭೈರತಿ ರಣಗಲ್' ಅವತಾರವೆತ್ತಿ ಥಿಯೇಟರ್‌ಗೆ ಬಂದಿದ್ದ ಡಾಲಿ ತನ್ನ ಸ್ಟಾರ್‌ಡಮ್ ಅನ್ನೂ ಮರೆತು ಹೆಜ್ಜೆ ಹಾಕಿದ್ದರು. ಶಿವಣ್ಣನ ಸಿನಿಮಾಗಾಗಿ ಅವರ ಅಭಿಮಾನಿಗಳ ಜೊತೆ ಟಪ್ಪಾಂಗುಚ್ಚಿ ಹೆಚ್ಚೆ ಹಾಕಿದ್ದರು. ಅದನ್ನು ನೋಡಿ ಶಿವಣ್ಣ ಕೂಡ ಕರಗಿ ನೀರಾಗಿ ಹೋಗಿದ್ದಾರೆ.
ಹೌದು, ಡಾಲಿ ಧನಂಜಯ್ ಹಾಗೂ ಶಿವಣ್ಣ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಹೀಗಾಗಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಅದರಲ್ಲೂ ಡಾಲಿ ಧನಂಜಯ್ ಸೆಂಚುರಿ ಸ್ಟಾರ್ ಶಿವಣ್ಣನನ್ನು ಕೇವಲ ಸಹ ನಟನಾಗಷ್ಟೇ ನೋಡುವುದಿಲ್ಲ. ಶಿವಣ್ಣನ ಮೇಲೆ ಅಭಿಮಾನವನ್ನೂ ಇಟ್ಟುಕೊಂಡಿದ್ದಾರೆ. ಹೀಗಾಗಿ ಶಿವಣ್ಣನ ಸಂಭ್ರಮದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಬೆಂಗಳೂರಿನ ನರ್ತಕಿ ಚಿತ್ರಮಂದಿರ ಮುಂದೆ ಡಾಲಿ ಧನಂಜಯ್ ಭರ್ಜರಿ ಸ್ಟೆಪ್ಸ್ ಹಾಕಿದ್ದಕ್ಕೆ ಶಿವರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಇರೋ ಒಂದು ಹೃದಯನಾ ಎಷ್ಟು ಸಾರಿ ಗೆಲ್ತೀರಾ?" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಡಾಲಿ ಧನಂಜಯ್ ಕೂಡ "ಲವ್ ಯು ಅಣ್ಣ" ಎಂದು ಮರು ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಆತ್ಮೀಯತೆಗೆ ಇಬ್ಬರ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.
ಇನ್ನು ಸಿನಿಮಾ ಕಡೆಗೆ ಬರೋದಾರೆ, 'ಭೈರತಿ ರಣಗಲ್' ಸಿನಿಮಾಗೆ ಮೊದಲ ದಿನ ರೆಸ್ಪಾನ್ಸ್ ಚೆನ್ನಾಗಿದೆ. ಸಂಜೆ ಹಾಗೂ ರಾತ್ರಿಯ ಶೋಗಳಿಗೆ ರಾಜ್ಯದ ಬಹುತೇಕ ಎಲ್ಲಾ ಕಡೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶಿವಣ್ಣ ಮತ್ತೊಮ್ಮೆ 'ಭೈರತಿ ರಣಗಲ್' ಅವತಾರದಲ್ಲಿ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಶಿವಣ್ಣನ ಮ್ಯಾನರಿಸಂ, ಮಾಸ್ ಅವತಾರಕ್ಕೆ ಮತ್ತೊಮ್ಮೆ ಫಿದಾ ಆಗಿದ್ದಾರೆ. ಶಿವಣ್ಣ ಅಭಿಮಾನಿಗಳಿಗೆ ಖುಷಿ ತಡೆಯೋಕೆ ಆಗುತ್ತಿಲ್ಲ.
ಶಿವಣ್ಣ ಕರಿಯರ್‌ಗೆ ಮತ್ತೊಂದು ಹಿಟ್ ಸಿನಿಮಾ ಸಿಕ್ಕಂತಾಗಿದೆ. ನರ್ತನ್ ಎರಡನೇ ಸಿನಿಮಾ ಕೂಡ ಥಿಯೇಟರ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿದರೆ, 'ಮಫ್ತಿ 2'ಗೆ ಶೀಘ್ರದಲ್ಲಿಯೇ ಚಾಲನೆ ಸಿಗಬಹುದು. ಯಾಕಂದ್ರೆ ಈಗಾಗಲೇ ಶಿವಣ್ಣ ಕೂಡ ಹಲವು ಸಂದರ್ಶನದಲ್ಲಿ 'ಮಫ್ತಿ 2' ಬರುತ್ತೆ ಅನ್ನೋದನ್ನು ಹೇಳಿದ್ದಾರೆ. ಅದಕ್ಕೆ ನರ್ತನ್ ಆದಷ್ಟು ಬೇಗ ಸ್ಕ್ರಿಪ್ಟ್ ಕೆಲಸ ಶುರು ಮಾಡಿರುವ ಸಾಧ್ಯತೆಯಿದೆ.


Click it and Unblock the Notifications











