ರಾಮ್ ಚರಣ್ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಾರಾ? ಇಲ್ವಾ? ತೆಲುಗು ನಟ ನಾನಿ ಜೊತೆ ನಟಿಸೋದ್ಯಾವಾಗ?

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪರಭಾಷೆಗಳಿಂದ ಶಿವಣ್ಣನಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ತಮಿಳು ಚಿತ್ರರಂಗದಿಂದಲೇ ಶಿವಣ್ಣನಿಗೆ ಹೆಚ್ಚು ಬೇಡಿಕೆ ಬರುತ್ತಿದೆ. 'ಘೋಸ್ಟ್' ಸಿನಿಮಾ ಬಿಡುಗಡೆ ವೇಳೆ ಸ್ವತ: ಶಿವಣ್ಣ ತಮಿಳಿನಿಂದ ಬಂದ ಆಫರ್ ಬಗ್ಗೆ ರಿವೀಲ್ ಮಾಡಿದ್ದರು.

ಕೆಲವು ದಿನಗಳ ಹಿಂದಷ್ಟೇ ಶಿವಣ್ಣ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆಂದು ಸುದ್ದಿಯಾಗಿತ್ತು. ತೆಲುಗು ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿದ್ದವು. ಆ ಬಗ್ಗೆ ಶಿವಣ್ಣ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

Shivarajkumar revealed details about acting with Mega Power Star Ram Charan

ಇತ್ತೀಚೆಗೆ 'ಘೋಸ್ಟ್' ಸಿನಿಮಾ ಜೀ 5 ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಿತ್ತು. ಕೆಲವೇ ದಿನಗಳಲ್ಲಿ ಈ ಸಿನಿಮಾ ಸುಮಾರು 200 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಇದೇ ಖುಷಿಯಲ್ಲಿ ಶಿವಣ್ಣ ಹಾಗೂ ನಿರ್ದೇಶಕ ಶ್ರೀನಿ ಜೊತೆ ಜೀ 5 ಪತ್ರಿಕಾಗೋಷ್ಠಿ ಕರೆದಿತ್ತು. ಆ ವೇಳೆ ರಾಮ್ ಚರಣ್, ನಾನಿ ಜೊತೆಗಿನ ಸಿನಿಮಾ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.

ಶಿವರಾಜ್‌ಕುಮಾರ್ ಓಟಿಟಿಯಲ್ಲೂ ಹ್ಯಾಟ್ರಿಕ್ ಹೀರೊ ಅಂತ ಸಾಬೀತಾಗಿದೆ. ಜೀ 5ನಲ್ಲಿ ಇವರ ಮೂರು ಸಿನಿಮಾಗಳು ರಿಲೀಸ್ ಆಗಿತ್ತು. 'ಭಜರಂಗಿ 2', 'ವೇದ' ಹಾಗೂ 'ಘೋಸ್ಟ್' ಈ ಮೂರು ಸಿನಿಮಾಗಳು 100 ಮಿಲಿಯನ್ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿದೆ. ಈ ಬಗ್ಗೆ ಸ್ವತ: ಶಿವಣ್ಣ ಖುಷಿ ವ್ಯಕ್ತಪಡಿಸಿದ್ದಾರೆ. "ಜೀ 5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರೋದ್ರಿಂದ ನಮಗೆ ಜೀ ಕನೆಕ್ಷನ್ ಜಾಸ್ತಿ ಇದೆ ಅಂತ ಅನಿಸುತ್ತೆ. ಕನ್ನಡ ಡಬ್ ಸಿನಿಮಾ ನೋಡುತ್ತಾರೆ. ಆದರೆ, ಕನ್ನಡ ಸಿನಿಮಾ ನೋಡೋದು ಕಡಿಮೆ. ಅದೇ ಈಗ ಹೆಚ್ಚಾಗಿದೆ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡಿದ್ದರು. ಅಲ್ಲೆಲ್ಲ ಚೆನ್ನಾಗಿಯೇ ರೆಸ್ಪಾನ್ಸ್ ಸಿಕ್ಕಿದೆ." ಎಂದು ಶಿವಣ್ಣ ಹೇಳಿದ್ದಾರೆ.

Shivarajkumar revealed details about acting with Mega Power Star Ram Charan

ವಿದೇಶದಲ್ಲಿ ಸೂಪರ್‌ರೆಸ್ಪಾನ್ಸ್

ಶಿವರಾಜ್‌ಕುಮಾರ್ ನಟಿಸಿದ 'ಘೋಸ್ಟ್' ಸಿನಿಮಾ ವಿದೇಶಗಳಲ್ಲೂ ಉತ್ತಮ ಗಳಿಕೆ ಕಂಡಿರೋ ಬಗ್ಗೆ ಶಿವಣ್ಣ ಹಾಗೂ ನಿರ್ದೇಶಕ ಶ್ರೀನಿ ಹೇಳಿದ್ದಾರೆ. "ಆಸ್ಟ್ರೇಲಿಯಾ, ಅಮೆರಿಕಾ, ಯುಕೆಯಲ್ಲಿ ಹೆಚ್ಚು ತುಂಬಾನೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂತು. ಆದರೂ, ಚೆನ್ನಾಗಿ ಹೋಯ್ತು" ಎಂದು ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ನಾನಿ ಭೇಟಿಯ ಗುಟ್ಟೇನು?

ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಇತ್ತೀಚೆಗೆ ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಬಹುದು ಎಂಬ ಗುಲ್ಲೆದ್ದಿತ್ತು. ಈ ಹಿಂದೆ ನಾನಿ ಜೊತೆಗೆ ಮಾಡಬೇಕಿದ್ದ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ. "ಯಾವುದೋ ಒಂದು ಸಿನಿಮಾಗೆ ಗೆಸ್ಟ್ ಅಪಿಯರೆನ್ಸ್ ಮಾಡಬೇಕು ಅಂತ ನಾನು ಫೋನ್ ಮಾಡಿದ್ದೆ. ತಕ್ಷಣ ಯೆಸ್ ಅಂತ ಹೇಳಿದ್ದರು. ನಾನೇ ಅಲ್ಲಿಗೆ ಬರುತ್ತೇನೆ ಅಂತ ಇಲ್ಲಾ ನಾನೇ ಅಲ್ಲಿಗೆ ಬರುತ್ತೇನೆ ಎಂದು ಹೇಳಿದ್ರು. ಆಮೇಲೆ ಅದು ಬೇಡ ಅಂತ ಅನಿಸಿತ್ತು. ಇನ್ನೊಮ್ಮೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡೋಣ ಅಂದುಕೊಂಡಿದ್ದೇವೆ." ಎಂದು ಶಿವಣ್ಣ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ರಾಮ್ ಚರಣ್ ಜೊತೆ ಸಿನಿಮಾ ಮಾಡ್ತಾರಾ?

ಎಲ್ಲಕ್ಕಿಂತ ಹಾಟ್ ಟಾಪಿಕ್ ಅಂದರೆ, ಶಿವಣ್ಣ ಹಾಗೂ ರಾಮ್ ಚರಣ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ. 'ಜೈಲರ್' ಬಳಿಕ ಶಿವಣ್ಣನಿಗೆ ಪರಭಾಷೆಗಳಿಂದ ಬೇಡಿಕೆ ಬರುತ್ತಿರೋದು ನಿಜ. ಹಾಗಾಗಿ ಇದು, ಸುಳ್ಳು ಸುದ್ದಿನಾ? ಅಥವಾ ನಿಜಾನಾ? ಅನ್ನೋ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು. "ನನಗೂ ಗೊತ್ತಿಲ್ಲ.. ಅಂತೆ ಕಂತೆ ಅಷ್ಟೇ.. ಇನ್ನೂ ಮಾತುಕತೆ ನಡೆದಿಲ್ಲ. ಸುಮ್ಮನೆ ರಿವೀಲ್ ಮಾಡಿದರೆ ಚೆನ್ನಾಗಿರೋದಿಲ್ಲ. ಆಮೇಲೆ ಸಿನಿಮಾ ಮಾಡದೇ ಹೋದರೆ ಕಷ್ಟ ಅಲ್ವಾ? ಉಪ್ಪೇನ ಸಿನಿಮಾ ಮಾಡಿರುವ ನಿರ್ದೇಶಕ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಬೇಕು ಅಂತ ಹೇಳಿದ್ದಾರೆ ಅಷ್ಟೇ." ಎಂದು ಇನ್ನೂ ಮಾತುಕತೆ ಆಗಬೇಕು ಎಂದು ಹೇಳಿದ್ದಾರೆ.

More from Filmibeat

English summary
Shivarajkumar movie with Telugu actor Ram Charan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X