ಶಿವಣ್ಣನಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ; ಅಲ್ಲಿನ ವೈದ್ಯರು ಸೆಂಚುರಿ ಸ್ಟಾರ್‌ಗೆ ಕೊಟ್ಟ ಭರವಸೆ ಏನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬಿಡುವಿಲ್ಲದೆ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್ 15) ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರೋಗ್ಯ ಸಮಸ್ಯೆ ಇದ್ಶಿದರೂ ಶಿವಣ್ಣ ಅದೆಲ್ಲವನ್ನೂ ಲೆಕ್ಕಿಸದೆ ಬಿಡುವು ಕೊಡದೆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇಂದು ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ರಿಲೀಸ್ ಆಗಿದ್ದು, 'ಭೈರತಿ ರಣಗಲ್' ಸಿನಿಮಾ ಯಶಸ್ಸು ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎಂಬ ನಂಬಿಕೆಯಲ್ಲಿದ್ದಾರೆ.

ಶಿವಣ್ಣ ಇರುವ ಸ್ಥಿತಿಯಲ್ಲಿ ಬಹುಶ: ಬೇರೆ ಯಾರೇ ಇದ್ದರೂ ಅದು ಅವರನ್ನು ಕುಗ್ಗಿಸಿಬಿಡುತ್ತಿತ್ತೋ ಏನೋ.. ಆದರೆ, ಶಿವಣ್ಣ ಧೈರ್ಯಕ್ಕೆ ಚಿತ್ರರಂಗ ಅಷ್ಟೇ ಅಲ್ಲ. ಅವರ ಅಭಿಮಾನಿಗಳೂ ಕೂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಶಿವಣ್ಣನಿಗೆ ಚಿಕಿತ್ಸೆ ನಡೆಯುತ್ತಿದೆ. ಈಗಾಗಲೇ ಅವರು ತಮ್ಮ ಅನಾರೋಗ್ಯದ ಬಗ್ಗೆ ಮಾತಾಡಿದ್ದು, ಚಿಕಿತ್ಸೆ ನಡೆಯುತ್ತಿರುವುದನ್ನು ಅವರೇ ಖಚಿತ ಪಡಿಸಿದ್ದಾರೆ.

Shivarajkumar revealed what a USA doctor says about his health condition and operation

ಇನ್ನೊಂದು ಕಡೆ ಅನಾರೋಗ್ಯ ಅಂತ ಸುಮ್ಮನೆ ಮನೆಯಲ್ಲಿ ಕೂತಿಲ್ಲ. ಶಿವಣ್ಣ ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಿದ್ದಾರೆ. ವಾಕಿಂಗ್, ಸಿನಿಮಾ ಆಕ್ಟಿವಿಟಿ ಎಲ್ಲವೂ ಸಹಜವಾಗಿಯೇ ನಡೆಯುತ್ತಿದೆ. ಅವರ ಕುಟುಂಬ ಬೆಂಬಲವಾಗಿ ನಿಂತಿದೆ. ಇದೇ ವೇಳೆ ಶಿವಣ್ಣ ಶಸ್ತ್ರ ಚಿಕಿತ್ಸೆ ಅಮೆರಿಕಗೆ ಹೋಗುವುದಾಗಿ ಹೇಳಿದ್ದರು. ಈಗ ಸಂದರ್ಶನವೊಂದರಲ್ಲಿ ಅಮೆರಿಕದ ವೈದ್ಯರು ಏನು ಹೇಳಿದ್ದಾರೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಸೆಂಚುರಿ ಸ್ಟಾರ್‌ಗೆ ಈಗಾಗಲೇ ಎರಡು ಹಂತದ ಚಿಕಿತ್ಸೆ ನಡೆದಿದೆ. ಇನ್ನೂ ಎರಡು ಹಂತದ ಚಿಕಿತ್ಸೆ ನಡೆಯುತ್ತಿದೆ. ಈ ಟ್ರೀಟ್ಮೆಂಟ್ ಮುಗಿಯುತ್ತಿದ್ದಂತೆ ಶಿವಣ್ಣ ಶಸ್ತ್ರ ಚಿಕಿತ್ರೆಗೆ ಅಮೆರಿಕಗೆ ಹೋಗುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಅಸಲಿಗೆ ಆರೋಗ್ಯದ ಬಗ್ಗೆ ಅಮೆರಿಕ ವೈದ್ಯರು ಶಿವಣ್ಣನಿಗೆ ಏನು ಹೇಳಿದ್ದಾರೆ? ಶಿವಣ್ಣನಿಗೆ ಕೊಟ್ಟಿರುವ ಭರವಸೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಿವರಾಜ್‌ಕುಮಾರ್ ಪ್ರತಿ ದಿನ 8 ರಿಂದ 10 ಕಿಲೋ ಮೀಟರ್ ವಾಕಿಂಗ್ ಮಾಡುತ್ತಿದ್ದಾರೆ. ಸದ್ಯ ಚಿಕಿತ್ಸೆಯ ಹಂತದಲ್ಲಿಯೂ ಶಿವಣ್ಣ ವಾಕಿಂಗ್ ಅನ್ನು ಬಿಟ್ಟಿಲ್ಲ. ಈಗಲೂ ಸ್ನೇಹಿತರೊಂದಿಗೆ ಏಳೆಂಟು ಕಿಲೋ ಮೀಟರ್ ವಾಕಿಂಗ್ ಮಾಡುತ್ತಾರೆ. ಸುಸ್ತಾಗುತ್ತಿದೆ ಅಂತ ಅನಿಸಿದಾಗ ಮತ್ತೆ ಶಿವಣ್ಣ ವಾಪಸ್ ಬಂದು ಬಿಡುತ್ತಾರೆ. ಇದು ಶಿವಣ್ಣನ ವಿಲ್ ಪವರ್ ಏನು ಅನ್ನೋದನ್ನು ತೋರಿಸುತ್ತೆ.

Shivarajkumar revealed what a USA doctor says about his health condition and operation

ಇಲ್ಲಿ ನಡೆಯುತ್ತಿರುವ ಚಿಕಿತ್ಸೆ ಹಾಗೂ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಅಮೆರಿಕ ವೈದ್ಯರೊಂದಿಗೆ ಮಾತಾಡಿದ್ದಾರೆ. ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ಬಗ್ಗೆ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಅಮೆರಿಕದ ವೈದ್ಯರೊಂದಿಗೆ ಮಾತಾಡಿದ್ದು, " ನೀವು ಆರೋಗ್ಯವಾಗಿ ವಾಪಸ್ ಬರುತ್ತೀರ" ಎಂದು ಹೇಳಿದ್ದಾರೆ ಎಂದು ಶಿವಣ್ಣ ಗಲಾಟ ಪ್ಲಸ್‌ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಡಾ.ಶಶಿಧರ್ ಹಾಗೂ ಡಾ.ಬಿಕೆ ಶ್ರೀನಿವಾಸ್ ಇಬ್ಬರು ವೈದ್ಯರು ಶಿವಣ್ಣನಿಗೆ ಚಿಕಿತ್ಸೆಯನ್ನು ನೀಡುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಈ ಮೂಲಕ ಆತಂಕದಲ್ಲಿರುವ ಶಿವಣ್ಣನ ಅಭಿಮಾನಿಗಳಿಗೆ ಕೊಂಚ ಧೈರ್ಯ ಬಂದಂತೆ ಆಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ಒಂದು ತಿಂಗಳು ವಿಶ್ರಾಂತಿ ಪಡೆದು ಫೆಬ್ರವರಿಯಿಂದ ಮತ್ತೆ ಸಿನಿಮಾ ಕಡೆಗೆ ಮರಳಲಿದ್ದಾರೆ.

More from Filmibeat

English summary
Shivarajkumar revealed what a USA doctor says about his health condition and operation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X