Kabzaa:'ಕಬ್ಜ'ದಲ್ಲಿ ಶಿವಣ್ಣನ ಪಾತ್ರವನ್ನು ಆರ್ ಚಂದ್ರು ರಿವೀಲ್ ಮಾಡಿದ್ದು ಭಯದಿಂದಲಾ? ಉಪ್ಪಿ ಬಿಚ್ಚಿಟ್ಟ ಗುಟ್ಟೇನು?

ಸ್ಯಾಂಡಲ್‌ವುಡ್‌ನ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜಾ ರಿಲೀಸ್‌ಗೆ ಮುಂಚೆಯೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಚಿತ್ರತಂಡ ಕೂಡಾ ಪ್ರಚಾರದ ಕೆಲಸವನ್ನು ಜೋರಾಗೇ ಮಾಡ್ತಿರೋದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.ಇದರೆ ಜೊತೆ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಜೊತೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೇರಿ ಕನ್ನಡ ಚಿತ್ರರಂಗದ ಘಟಾನುಘಟಿ ಸ್ಟಾರ್‌ಗಳ ಅಪೂರ್ವ ಸಂಗಮದಂತೆ 'ಕಬ್ಜ' ಕಾಣ್ತಿದೆ. ಅಭಿಮಾನಿಗಳ ಪಾಲಿಗೆ ಇದಂತೂ ಹಬ್ಬವೇ.

ಪ್ರೇಕ್ಷಕರ ಮನಸ್ಸನ್ನು 'ಕಬ್ಜ' ಮಾಡೋಕೆ ಸಜ್ಜಾಗಿರೋ ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರ ಏನು ಅನ್ನೋ ಕುತೂಹಲ ಮಾತ್ರ ಜೋರಾಗೇ ಇದೆ. ಕೈಯಲ್ಲಿ ರೈಫಲ್ ಹಿಡಿದಿರೋ ಶಿವಣ್ಣನ ರಗಡ್ ಲುಕ್ ಭಾರೀ ಚರ್ಚೆಯಲ್ಲಿದೆ. ಅವ್ರೂ ಇದ್ರಲ್ಲಿ ಡಾನ್ ಪಾತ್ರ ಮಾಡ್ತಿದ್ದಾರಾ? ಉಪ್ಪಿ ಪಾತ್ರದ ಪರವಾದ ಪಾತ್ರವಾ? ಅಥವಾ ವಿರುದ್ಧವಾಗಿರೋದಾ? ಹೀಗೆಲ್ಲಾ ಅಭಿಮಾನಿಗಳು ಈಗಾಗಲೇ ಡಿಸ್ಕಶನ್ ಶುರು ಮಾಡ್ಬಿಟ್ಟಿದ್ದಾರೆ.

Shivarajkumar role in Kabzaa was a surprise but director chandru revealed out of fear explains Upendra

ಆದ್ರೆ, ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಶಿವಣ್ಣನದ್ದು ಇಲ್ಲಿ ಸರ್ಪ್ರೈಸ್ ಪಾತ್ರ ಅಂತ ಖುದ್ದು ಚಿತ್ರತಂಡವೇ ಹೇಳಿದೆ. ಅಂದ್ಮೇಲೆ, ಆ ಪಾತ್ರವನ್ನು ಜನ ಸರ್ಪ್ರೈಸ್ ಆಗಿ ಚಿತ್ರದಲ್ಲೇ ನೋಡ್ಬಹುದಿತ್ತಲ್ಲಾ? ಅದನ್ನು ರಿವೀಲ್ ಮಾಡಿ ಅಚ್ಚರಿಯನ್ನು ಹಾಳು ಮಾಡಿದ್ದೇಕೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರವನ್ನು 'ಕಬ್ಜ' ಸಿನಿಮಾದ ನಾಯಕ ರಿಯಲ್‌ಸ್ಟಾರ್ ಉಪ್ಪಿ ಕೊಟ್ಟಿದ್ದಾರೆ.

ಇದಕ್ಕೆಲ್ಲಾ ಕಾರಣ ನಿರ್ದೇಶಕ-ನಿರ್ಮಾಪಕ ಚಂದ್ರುಗೆ ಇದ್ದ ಭಯವಂತೆ! ಹೌದು, ಈ ವಿಚಾರವನ್ನು ಖುದ್ದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. "ಶಿವಣ್ಣನ ಪಾತ್ರ ಸರ್ಪ್ರೈಸ್ ನಿಜ. ಆದ್ರೆ, ಚಿತ್ರ ನೋಡಿಕೊಂಡು ಬಂದ ಅಭಿಮಾನಿಗಳು ಶಿವಣ್ಣನ ಕಟೌಟ್ ಯಾಕೆ ಹಾಕಿಲ್ಲ ಎಂದು ಗಲಾಟೆ ಮಾಡ್ಬಿಟ್ರೆ? ಅಷ್ಟಕ್ಕೂ ಎಲ್ಲಿ ತನಕ ಸರ್ಪ್ರೈಸ್ ಇಡೋಕೆ ಸಾಧ್ಯ? ಮೊದಲನೇ ಶೋ ತನಕ ಮಾತ್ರ. ಥಿಯೇಟರ್‌ನಿಂದ ಹೊರಗೆ ಬಂದ ಪ್ರೇಕ್ಷಕ, 'ಚಿತ್ರದ ಕೊನೆಯಲ್ಲಿ ಶಿವಣ್ಣ ಬರ್ತಾರೆ' ಅಂದ್ಬಿಟ್ರೆ ಆಯ್ತಲ್ಲ? ಅದಕ್ಕೆ, ರಿಸ್ಕ್ ಯಾಕೆ ಅಂತ ಚಂದ್ರು ಮೊದ್ಲೇ ರಿವೀಲ್ ಮಾಡ್ಬಿಟ್ರು" ಎಂದು ಉಪೇಂದ್ರ ನಿರ್ದೇಶಕ ಆರ್ ಚಂದ್ರು ಮೇಲೆ ಎತ್ತಾಕಿದ್ದಾರೆ.

Shivarajkumar role in Kabzaa was a surprise but director chandru revealed out of fear explains Upendra

ಇದೆಲ್ಲಾ ಲೆಕ್ಕಾಚಾರ ಏನೇ ಇದ್ರೂ ಇಷ್ಟೊಂದು ಜನರ ಪರಿಶ್ರಮ ಇರೋ ಬಿಗ್ ಬಜೆಟ್ ಚಿತ್ರ 'ಕಬ್ಜ' ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ. ಶಿವಣ್ಣ, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ 'ಕಬ್ಜ' ಸಖತ್ ಕಿಕ್ ಕೊಡುತ್ತೆ ಅನ್ನೋ ನಿರೀಕ್ಷೆಯಿದೆ.

More from Filmibeat

English summary
Shivarajkumar role in Kabzaa was a surprise but director chandru revealed out of fear explains Upendra, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X