'ಭೈರತಿ ರಣಗಲ್' ಹತ್ತು ದಿನಗಳಲ್ಲಿ ಗಳಿಸಿದ್ದೆಷ್ಟು? ಶಿವಣ್ಣ-ನರ್ತನ್ ಕಾಂಬಿನೇಷನ್ ಹಿಟ್ ಆಯ್ತಾ? ಫ್ಲಾಪ್ ಆಯ್ತಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಭೈರತಿ ರಣಗಲ್' ಸ್ಯಾಂಡಲ್‌ವುಡ್‌ಗೆ ಪಾಸಿಟಿವ್ ಎನರ್ಜಿ ಕೊಟ್ಟಿತ್ತು. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. 'ಮಫ್ತಿ' ಬಳಿಕ ಶಿವಣ್ಣನನ್ನು ಮತ್ತೆ ಅದೇ ಗೆಟಪ್‌ನಲ್ಲಿ ನೋಡಿ ದೊಡ್ಮನೆ ಅಭಿಮಾನಿಗಳಂತೂ ಥ್ರಿಲ್ ಆಗಿದ್ದರು. ನವೆಂಬರ್ 15ರಂದು ತೆರೆಕಂಡಿದ್ದ ಈ ಸಿನಿಮಾಗೆ ಉತ್ತಮ ಮೌತ್ ಪಬ್ಲಿಸಿಟಿಯಂತೂ ಸಿಕ್ಕಿತ್ತು.
ಮೊದಲ ನಾಲ್ಕು ದಿನ 'ಭೈರತಿ ರಣಗಲ್' ಕಲೆಕ್ಷನ್ ಸೂಪರ್ ಆಗಿತ್ತು. ಬಳಿಕ ವೀಕ್ ಡೇಸ್‌ನಲ್ಲಿ ಸಿನಿಮಾದ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದ್ರೀಗ ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಸಖತ್ ಆಗಿಯೇ ಇದೆ. ಇತ್ತ ಅನಾರೋಗ್ಯದ ಹಿನ್ನೆಲೆಯಲ್ಲೂ ಸಿನಿಮಾದ ಪ್ರಚಾರದಲ್ಲಿ ಖುದ್ದಾಗಿ ಶಿವರಾಜ್‌ಕುಮಾರ್ ಥಿಯೇಟರ್ ವಿಸಿಟ್ ಹಾಕುತ್ತಿದ್ದಾರೆ.

ಸೋಲಿನ ಸುಳಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೆ 'ಭೈರತಿ ರಣಗಲ್' ಒಳ್ಳೆಯ ಬೂಸ್ಟ್ ಕೊಟ್ಟಿದೆ. ಅದರಲ್ಲೂ ಕಲೆಕ್ಷನ್ ಇನ್ನೇನು ಡ್ರಾಪ್ ಆಗುತ್ತೆ ಅಂದುಕೊಂಡವರಿಗೆ ಎರಡನೇ ವೀಕೆಂಡ್‌ನಲ್ಲಿ ಮತ್ತೆ ಕೋಟಿ ದಾಟಿದೆ. ಹಾಗಿದ್ದರೆ 10 ದಿನಗಳಲ್ಲಿ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ವೀಕೆಂಡ್‌ನಲ್ಲಿ 'ಭೈರತಿ ರಣಗಲ್' ಅಬ್ಬರಿಸಿದನೇ? ಸಿನಿಮಾ ಹಿಟ್ ಆಯ್ತಾ? ಫ್ಲಾಪ್ ಅಯ್ತಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
10ನೇ ದಿನ 'ಭೈರತಿ ರಣಗಲ್' ಗಳಿಸಿದ್ದೆಷ್ಟು?
ಬಿಡುಗಡೆಗೂ ಮುನ್ನವೇ 'ಭೈರತಿ ರಣಗಲ್' ಸಿನಿಮಾ ಕ್ರೇಜ್ ಹುಟ್ಟಾಗಿತ್ತು. ಅದಕ್ಕೆ ತಕ್ಕಂತೆ ರಿಸಲ್ಟ್ ಕೂಡ ಸಿಕ್ಕಿದೆ. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೆ ವರ್ಕ್‌ಔಟ್ ಆಗಿದೆ. ವೀಕ್‌ಡೇಸ್‌ನಲ್ಲಿ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡಿತ್ತು. ಆದರೆ, ವೀಕೆಂಡ್‌ನಲ್ಲಿ ಮತ್ತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. ನಿನ್ನೆ (ನವೆಂಬರ್ 24) 10ನೇ 'ಭೈರತಿ ರಣಗಲ್' 1.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರೀ ಟ್ರ್ಯಾಕರ್ sacnilk ವರದಿಯನ್ನು ಮಾಡಿದೆ. ವಿತರಕರ ವಲಯದಲ್ಲಿ ಹೆಚ್ಚು ಕಡಿಮೆ ಈ ಲೆಕ್ಕವನ್ನೇ ನೀಡಲಾಗಿದೆ.
10 ದಿನಗಳ ಒಟ್ಟು ಕಲೆಕ್ಷನ್ ಹೇಗಿದೆ?
'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಿ ನಿನ್ನೆಗೆ (ನವೆಂಬರ್ 24) 10 ದಿನಗಳು ಆಗಿವೆ. ಇಲ್ಲಿವರೆಗೂ ಕಲೆಕ್ಷನ್ ವಿಚಾರದಲ್ಲಿ ಮೋಸ ಮಾಡಿಲ್ಲ. ಶಿವಣ್ಣ ಮತ್ತೊಂದು ತಮ್ಮ ಲುಕ್ ಹಾಗೂ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ಗೆದ್ದಿದ್ದಾರೆ. ಹೀಗಾಗಿ 10 ದಿನಗಳ ಕಲೆಕ್ಷನ್ ಪಾಸಿಟಿವ್ ಆಗಿದೆ.

10 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ 2.10 ಕೋಟಿ ರೂ.
ಎರಡನೇ ದಿನ 2.30 ಕೋಟಿ ರೂ.
ಮೂರನೇ ದಿನ 3.40 ಕೋಟಿ ರೂ.
ನಾಲ್ಕನೇ ದಿನ 1.60 ಕೋಟಿ ರೂ.
ಐದನೇ ದಿನ 1.30 ಕೋಟಿ ರೂ.
ಆರನೇ ದಿನ 1.00 ಕೋಟಿ ರೂ.
ಏಳನೇ ದಿನ 0.90 ಕೋಟಿ ರೂ.
ಎಂಟನೇ ದಿನ 0.70 ಕೋಟಿ ರೂ.
ಒಂಬತ್ತನೇ ದಿನ 1.15 ಕೋಟಿ ರೂ.
ಹತ್ತನೇ ದಿನ 1.17 ಕೋಟಿ ರೂ.
ಒಟ್ಟು 15.62 ಕೋಟಿ ರೂ.
ಮುಂದಿನ ವಾರದ ಕಲೆಕ್ಷನ್ ಭವಿಷ್ಯವೇನು?
'ಭೈರತಿ ರಣಗಲ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಇನ್ನೂ ಒಂದು ವಾರ ಅವಕಾಶವಿದೆ. ಇನ್ನೊಂದು ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ ಹೀಗೆ ಕಲೆಕ್ಷನ್ ಮಾಡಿದರೆ, 20 ಕೋಟಿ ರೂಪಾಯಿ ಗಳಿಕೆ ಮಾಡಬಹುದು. ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ನೋಡಿದರೆ, ಇನ್ನೊಂದು ವಾರ ಆರಾಮಾಗಿ ಅದ್ಭುತ ಗಳಿಕೆ ಕಾಣುವ ಎಲ್ಲಾ ಸಾಧ್ಯತೆಗಳು ಇವೆ. ಹಾಗೇ ಶಿವಣ್ಣನೇ ಖುದ್ದಾಗಿ ಥಿಯೇಟರ್ ವಿಸಿಟ್ ಮಾಡುತ್ತಿರುವುದರಿಂದ ಈ ವಾರ ಜನರು ಚಿತ್ರಮಂದಿರಕ್ಕೆ ಬರಬಹುದು.
'ಪುಷ್ಪ 2'ಗೆ ಟಕ್ಕರ್ ಕೊಡುತ್ತಾ?
ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾ ಡಿಸೆಂಬರ್ 5ಕ್ಕೆ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ಹೀಗಾಗಿ 'ಭೈರತಿ ರಣಗಲ್'ಗೆ ಥಿಯೇಟರ್‌ಗಳು ಕಡಿಮೆ ಆಗುವ ಸಾಧ್ಯತೆಯಿದೆ. ಶಿವಣ್ಣನ ಮ್ಯಾನರಿಸಂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ನರ್ತನ್ ನಿರ್ದೇಶನ ಇಷ್ಟ ಆಗಿದೆ. ವರ್ಷದ ಕೊನೆಯಲ್ಲಿ ಈ ಸಿನಿಮಾ ಸ್ಯಾಂಡಲ್‌ವುಡ್‌ಗೆ ಹೊಸ ಹುರುಷು ಕೊಟ್ಟಿದ್ದಂತೂ ನಿಜ.


Click it and Unblock the Notifications











