Bhairathi Ranagal Box Office Day 5: 5ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಭೈರತಿ ರಣಗಲ್'

ಕನ್ನಡ ಬಾಕ್ಸಾಫೀಸ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಖದರ್ ಮತ್ತೆ ಆರಂಭ ಆಗಿದೆ. ಶಿವಣ್ಣನ 'ಭೈರತಿ ರಣಗಲ್' ಮ್ಯಾನರಿಸಂಗೆ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಥಿಯೇಟರ್‍‌ನಲ್ಲಿ ಶಿಳ್ಳೆಗಳ ಸದ್ದು ಜೋರಾಗಿದೆ. ಈ ಸಂಬಂಧ ಚಿತ್ರತಂಡ ಈಗಾಗಲೇ ಸಕ್ಸಸ್ ಮೀಟ್ ಅನ್ನು ಮಾಡಿ ಖುಷಿಯನ್ನು ಹಂಚಿಕೊಂಡಿದೆ. ಈ ಮೂಲಕ ನಷ್ಟದಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಆಶಾಭಾವನೆ ಮೂಡಿದೆ.

ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳ ಬಳಿಕ ಯಾವುದೇ ಸಿನಿಮಾ ಇದ್ದರೂ ಕಲೆಕ್ಷನ್ ಡ್ರಾಪ್ ಆಗುತ್ತೆ. 'ಭೈರತಿ ರಣಗಲ್' ಕೂಡ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡದೆ. ಹಾಗಂತ ಇದನ್ನು ಡೌನ್‌ಫಾಲ್ ಅನ್ನುವ ಹಾಗಿಲ್ಲ. ಯಾಕಂದ್ರೆ, ಸಹಜವಾಗಿ ವಾರದ ಆರಂಭದಲ್ಲಿ ಜನರು ಮೊದಲ ಮೂರು ಶೋಗಳಿಗೆ ಸಿನಿಮಾ ನೋಡುವುದಕ್ಕೆ ಬರುವುದಿಲ್ಲ. ಕೊನೆಯ ಎರಡರಿಂದ ಮೂರು ಶೋಗಳು ಉತ್ತಮ ಪ್ರದರ್ಶನ ಕಾಣುತ್ತವೆ.

Shivarajkumar Rukmini Vasanth Bhairathi Ranagal movie Karnataka Box office collection day 5 report

'ಭೈರತಿ ರಣಗಲ್' ಕಳೆದ ಐದು ದಿನಗಳಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಜೊತೆ ಸಿಂಗಲ್‌ ಸ್ಕ್ರೀನ್‌ಗೂ ಮತ್ತೆ ಜೀವ ಬಂದಂತೆ ಆಗಿದೆ. ಹೀಗಾಗಿ ಥಿಯೇಟರ್ ಮಾಲೀಕರು ಕೂಡ ಖುಷಿಯಾಗಿದ್ದಾರೆ. ಹೀಗೆ ಮುಂದುವರೆದರೆ, ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಬಹುದು. ಇನ್ನು ಐದನೇ ದಿನ 'ಭೈರತಿ ರಣಗಲ್' ಕಲೆಕ್ಷನ್ ಎಷ್ಟಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

5ನೇ ದಿನದ ಗಳಿಕೆ ಎಷ್ಟು?

ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಯಾದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಮೊದಲ ಮೂರು ದಿನ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ಹಾಗೇ ವಾರದ ಆರಂಭದ ದಿನವಾದ ನಾಲ್ಕನೇ ದಿನವೂ ಕಲೆಕ್ಷನ್ ಚೆನ್ನಾಗಿತ್ತು. ಇನ್ನು ಐದನೇ ದಿನವೂ ಕೂಡ ಬಾಕ್ಸಾಫೀಸ್‌ ಕಲೆಕ್ಷನ್ ಸ್ಟಡಿಯಾಗಿದೆ. ವಿತರಕರ ವಲಯದ ಲೆಕ್ಕಾಚಾರಾದ ಪ್ರಕಾರ ಈ ಸಿನಿಮಾ ನಿನ್ನೆ (ನವೆಂಬರ್ 19) 5ನೇ ದಿನ 1.30 ಕೋಟಿಯಿಂದ 1.50 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿದ್ದು, ಉತ್ತಮವಾಗಿ ಮುನ್ನುಗ್ಗುತ್ತಿದೆ ಎನ್ನಲಾಗಿದೆ.

Shivarajkumar Rukmini Vasanth Bhairathi Ranagal movie Karnataka Box office collection day 5 report

5 ದಿನಗಳ ಗಳಿಕೆ ಎಷ್ಟು?

ಶಿವಣ್ಣನ ಸಿನಿಮಾ 'ಭೈರತಿ ರಣಗಲ್' ನಾಲ್ಕು ದಿನಗಳಿಗೆ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೆಚ್ಚು ಕಡಿಮೆ ಐದನೇ ದಿನವೂ ನಾಲ್ಕನೇ ದಿನದಷ್ಟೇ ಕಲೆಕ್ಷನ್ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಇದೇ ಕಲೆಕ್ಷನ್ ಇರುತ್ತೆ ಅನ್ನುವುದನ್ನು ಊಹಿಸಲಾಗುತ್ತಿದೆ. ಒಟ್ಟು ಐದು ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ಈಗ 11 ಕೋಟಿ ರೂಪಾಯಿ ದಾಟಿದ್ದು, ಸಿನಿಮಾ ಹಿಟ್ ಲಿಸ್ಟ್ ಸೇರುವ ಎಲ್ಲಾ ಸಾಧ್ಯತೆಯಿದೆ.

5 ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್

ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 3.40 ಕೋಟಿ ರೂಪಾಯಿ
ನಾಲ್ಕನೇ ದಿನ 1.60 ಕೋಟಿ ರೂಪಾಯಿ
ಐದನೇ ದಿನ 1.30 ಕೋಟಿ ರೂಪಾಯಿ
ಒಟ್ಟು 11.30 ಕೋಟಿ ರೂಪಾಯಿ

ಎಲ್ಲೆಲ್ಲಿ ಹೇಗಿದೆ 'ಭೈರತಿ ರಣಗಲ್' ಕಲೆಕ್ಷನ್?

'ಭೈರತಿ ರಣಗಲ್' ಬಿಕೆಟಿ ಅಂದರೆ, ಬೆಂಗಳೂರು, ಕೋಲಾರ ಹಾಗೂ ತುಮಕೂರು ಏರಿಯಾಗಳಲ್ಲಿ ಕಲೆಕ್ಷನ್ ಚೆನ್ನಾಗಿದೆ. ಅದರಲ್ಲೂ ತುಮಕೂರಿನಲ್ಲಿ ಕಲೆಕ್ಷನ್ ಆಗುತ್ತಿದೆ. ಇನ್ನು ಉಳಿದಂತೆ ಕುಂದಾಪುರ, ರಾಯಚೂರು ಹಾಗೂ ಹುಬ್ಬಳ್ಳಿಯಲ್ಲಿ ಹೆಚ್ಚು ಕಲೆಕ್ಷನ್‌ಗಳು ಆಗಿವೆ.

'ಭೈರತಿ ರಣಗಲ್' ಕಲೆಕ್ಷನ್ (Day 5)

ಬೆಂಗಳೂರು, ಕೋಲಾರ, ತುಮಕೂರು 90 ಲಕ್ಷ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ 15 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ 13 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ 6 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ 4 ಲಕ್ಷ ರೂಪಾಯಿ
ಹುಬ್ಬಳ್ಳಿ 2 ಲಕ್ಷ ರೂಪಾಯಿ
ಒಟ್ಟು 1.30 ಕೋಟಿ ರೂಪಾಯಿ

20 ಕೋಟಿ ರೂ. ಕ್ಲಬ್ ಸೇರಬಹುದೇ?

'ಭೈರತಿ ರಣಗಲ್' ಸಿನಿಮಾಗೆ ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ಸಿಗುತ್ತಿದೆ. ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೊಮ್ಮೆ ಕ್ಲಿಕ್ ಆಗಿದೆ. ಸದ್ಯ ಹೀಗೆ ವೀಕೆಂಡ್‌ವರೆಗೂ ದಿನಕ್ಕೆ ಒಂದರಿಂದ ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಮುಂದಿನ ವೀಕೆಂಡ್‌ ಸೇರಿ 20 ಕೋಟಿಯನ್ನು ಆರಾಮಾಗಿ ದಾಟಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಲೆಕ್ಕ ಹಾಕಿದ್ದಾರೆ.

More from Filmibeat

English summary
Shivarajkumar, Rukmini Vasanth Bhairathi Ranagal movie Karnataka Box office collection day 5 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X