Bhairathi Ranagal Box Office Day 6: 6ನೇ ದಿನ 'ಭೈರತಿ ರಣಗಲ್' ಕಲೆಕ್ಷನ್ ಹೇಗಿದೆ? ಕಡಿಮೆನಾ ಅಥವಾ ಜಾಸ್ತಿನಾ?
ಶಿವರಾಜ್‌ಕುಮಾರ್ ಸಿನಿಮಾ 'ಭೈರತಿ ರಣಗಲ್'ಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಷನ್ ಮತ್ತೊಮ್ಮೆ ವರ್ಕ್ ಆಗಿದೆ. 'ಭೈರತಿ ರಣಗಲ್'ಗೆ ಸಿಗುತ್ತಿರುವ ರೆಸ್ಪಾನ್ಸ್‌ಗೆ ಸಿನಿಮಾ ತಂಡ ಕೂಡ ಖುಷಿಯಾಗಿದೆ. ಅಷ್ಟೇ ಅಲ್ಲದೆ, ಕನ್ನಡ ಚಿತ್ರರಂಗದ ತಾರೆಯರು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ನಿನ್ನೆಯಷ್ಟೇ (ನವೆಂಬರ್ 20) ದುನಿಯಾ ವಿಜಯ್ ಕೂಡ ಈ ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪಾತ್ರವನ್ನು ಮನಸಾರೆ ಹೊಗಳಿದ್ದಾರೆ. ಶಿವಣ್ಣನೊಂದಿಗೆ ಸಿನಿಮಾ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. 'ಭೈರತಿ ರಣಗಲ್' ಸದ್ಯ ಪ್ರೇಕ್ಷಕರಿಗೆ ಅಷ್ಟೇ ಅಲ್ಲ. ಸಿನಿಮಾ ತಾರೆಯರಿಗೂ ಕೂಡ ಇಷ್ಟ ಆಗಿದೆ. ಹಾಗೇ ವೀಕ್ ಡೇಸ್‌ನಲ್ಲೂ ಕೆಲವು ಥಿಯೇಟರ್‌ಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ.

'ಭೈರತಿ ರಣಗಲ್' ಸಿನಿಮಾ ರಿಲೀಸ್ ಅದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಆದರೆ, ವೀಕ್‌ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಆರನೇ ದಿನ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಕಾಣಿಸಿಕೊಂಡಿದ್ದು, ವೀಕೆಂಡ್‌ನಲ್ಲಿ ಮತ್ತೆ ಚೇತರಿಕೆ ಕಾಣಲಿದೆ. ಹಾಗಿದ್ದರೆ 6ನೇ ದಿನ ಕಲೆಕ್ಷನ್ ಎಷ್ಟು? ವೀಕೆಂಡ್‌ನಲ್ಲಿ ಕಲೆಕ್ಷನ್ ಹೇಗಿರುತ್ತೆ? ವಿತರಕರು ಏನಂತಾರೆ? ತಿಳಿಯಲು ಮುಂದೆ ಓದಿ.
6ನೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಏನು?
ಶಿವಣ್ಣ ವೃತ್ತಿ ಬದುಕಿನಲ್ಲಿ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗಳನ್ನು ನೋಡಿದ್ದಾರೆ. ಅಂತ ಹಿಟ್ ಸಿನಿಮಾಗಳ ಸಾಲಿನಲ್ಲಿ 'ಭೈರತಿ ರಣಗಲ್' ಸಿನಿಮಾ ಕೂಡ ಒಂದು. ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಶಿವಣ್ಣನ ಖದರ್ ಕಂಡು ಶಿಳ್ಳೆಗಳು ಬೀಳುತ್ತಿವೆ. ವೀಡ್ ಡೇಸ್ ಆಗಿದ್ದರಿಂದ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಸಂಜೆ ಹಾಗೂ ರಾತ್ರಿ ಶೋಗಳಿಗೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತಿದೆ. ಕರ್ನಾಟಕದ ವಿತರಕರಿಗೆ ಸಿಕ್ಕಿರುವ ಲೆಕ್ಕದ ಪ್ರಕಾರ 6ನೇ ದಿನ 'ಭೈರತಿ ರಣಗಲ್' ಬಾಕ್ಸಾಫೀಸ್ ಕಲೆಕ್ಷನ್ 80 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿವರೆಗೂ ಆಗಿದೆ ಎನ್ನುತ್ತಿದ್ದಾರೆ.
6 ದಿನಗಳ ಕಲೆಕ್ಷನ್ ಎಷ್ಟು?
'ಭೈರತಿ ರಣಗಲ್' ಸಿನಿಮಾಗೆ ಮೌತ್ ಪಬ್ಲಿಸಿಟಿ ಚೆನ್ನಾಗಿದೆ. ಹಾಗೇ 'ಮಫ್ತಿ' ಸಿನಿಮಾ ಇಷ್ಟ ಪಟ್ಟವರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಮೊದಲ ವಾರ ಈ ಸಿನಿಮಾದ ಕಲೆಕ್ಷನ್ 15 ಕೋಟಿ ರೂಪಾಯಿ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೂ, ನಿರೀಕ್ಷೆ ಮಾಡಿದ್ದಕ್ಕೆ ನಿರಾಸೆ ಆಗಿಲ್ಲ. ವಿತರಕರು ಕೂಡ ಖುಷಿಯಾಗಿದ್ದಾರೆ. ಒಟ್ಟು ಆರು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.

6 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 3.40 ಕೋಟಿ ರೂಪಾಯಿ
ನಾಲ್ಕನೇ ದಿನ 1.60 ಕೋಟಿ ರೂಪಾಯಿ
ಐದನೇ ದಿನ 1.30 ಕೋಟಿ ರೂಪಾಯಿ
ಆರನೇ ದಿನ 0.80 ಕೋಟಿ ರೂಪಾಯಿ
ಒಟ್ಟು 12.10 ಕೋಟಿ ರೂಪಾಯಿ
6ನೇ ದಿನ ಯಾವ ಏರಿಯಾದಲ್ಲಿ ಹೇಗಿದೆ ರಿಯಾಕ್ಷನ್?
ಕನ್ನಡ ಸಿನಿಮಾಗಳು ಅತೀ ಹೆಚ್ಚು ಕಲೆಕ್ಷನ್ ಮಾಡುವುದು ಬಿಕೆಟಿ ಏರಿಯಾದಲ್ಲಿ. ಅಂದರೆ, ಬೆಂಗಳೂರು, ಕೋಲಾರ ಹಾಗೂ ತುಮಕೂರು ಏರಿಯಾಗಳಲ್ಲಿ ಕಲೆಕ್ಷನ್ ಹೆಚ್ಚಿರುತ್ತೆ. 'ಭೈರತಿ ರಣಗಲ್' ಕೂಡ ಈ ಏರಿಯಾಗಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ. ಹಾಗೇ ತುಮಕೂರು, ಮೈಸೂರು, ಕುಂದಾಪುರ, ರಾಯಚೂರು ಹಾಗೂ ಹುಬ್ಬಳ್ಳಿ ಭಾಗದಲ್ಲಿ 6ನೇ ದಿನ ಹೆಚ್ಚು ಕಲೆಕ್ಷನ್‌ಗಳು ಆಗಿವೆ.
'ಭೈರತಿ ರಣಗಲ್' ಕಲೆಕ್ಷನ್ (Day 6)
ಬೆಂಗಳೂರು, ಕೋಲಾರ, ತುಮಕೂರು 51 ಲಕ್ಷ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ 12 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ 10 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ 3 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ 2 ಲಕ್ಷ ರೂಪಾಯಿ
ಹುಬ್ಬಳ್ಳಿ 2 ಲಕ್ಷ ರೂಪಾಯಿ
ಒಟ್ಟು 80 ಲಕ್ಷ ರೂಪಾಯಿ (ಅಂದಾಜು)
ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್
'ಭೈರತಿ ರಣಗಲ್' ವೀಕೆಂಡ್‌ನಲ್ಲಿ ಮತ್ತೆ ಕಲೆಕ್ಷನ್ ಏರಿಕೆ ಆಗಲಿದೆ. ಪ್ರೇಕ್ಷಕರಿಂದ ಸಿನಿಮಾಗೆ ಒಳ್ಳೆಯ ಅಭಿಪ್ರಾಯ ಬಂದಿದ್ದರಿಂದ ವೀಕೆಂಡ್‌ನಲ್ಲಿ ಥಿಯೇಟರ್‌ಗಳು ಫುಲ್ ಆಗಬಹುದು. ಮಲ್ಟಿಪ್ಲೆಕ್ಸ್ ಜೊತೆ ಸಿಂಗಲ್ ಸ್ಕ್ರೀನ್‌ಗಳಲ್ಲಿ 'ಭೈರತಿ ರಣಗಲ್'ಗೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತೆ. ಅಲ್ಲದೆ, ಬಿಗ್ ಬಜೆಟ್ ಸಿನಿಮಾಗಳು ಇಲ್ಲದೆ ಇರುವುದರಿಂದ ವೀಕೆಂಡ್ ಹೊತ್ತಿದೆ. 20 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.
ಸೂಚನೆ: ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಸಿನಿಮಾ ತಂಡ ಅಧಿಕೃತವಾಗಿ ಕಲೆಕ್ಷನ್ ಅನ್ನು ಅನೌನ್ಸ್ ಮಾಡಬೇಕಿದೆ.


Click it and Unblock the Notifications











