Bhairathi Ranagal Box Office Day 7: 7ನೇ ದಿನ 'ಭೈರತಿ ರಣಗಲ್' ಕಲೆಕ್ಷನ್ ಹೇಗಿದೆ ? ₹20 ಕೋಟಿ ದಾಟಿತೇ?
ಬಹಳ ದಿನಗಳ ಬಳಿಕ ಕನ್ನಡದಲ್ಲೊಂದು ಒಳ್ಳೆಯ ಸಿನಿಮಾ ಬಂದಿದೆ. ಇಂತಹದ್ದೊಂದು ಘಳಿಗೆಗಾಗಿ ಸಿನಿಪ್ರಿಯರು ಕಾದು ಕೂತಿದ್ದರು. ಕೊನೆಗೂ 2024ರ ಕೊನೆಯಲ್ಲಿ ಕನ್ನಡ ಚಿತ್ರರಂಗವನ್ನು ಮೆಚ್ಚುವಂತಹ ಸಿನಿಮಾ ಬಂದಿದೆ. ಅದುವೇ ಶಿವರಾಜ್‌ಕುಮಾರ್ ನಟನೆಯ ಸಿನಿಮಾ 'ಭೈರತಿ ರಣಗಲ್'. ಈ ಸಿನಿಮಾ ರಿಲೀಸ್ ಆಗಿ ಈಗಾಗಲೇ ಇಂದು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ.
'ಭೈರತಿ ರಣಗಲ್' ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿತ್ತು. ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಅದೇ ಐದನೇ ದಿನದಿಂದ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೆ ಕ್ಲಿಕ್ ಆಗಿದೆ. 'ಭೈರತಿ ರಣಗಲ್' ಕನ್ನಡದ ಮೊದಲ ಪ್ರೀಕ್ವೆಲ್ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೋ ಅಂತ ಕುತೂಹಲವಿತ್ತು. ಅದಕ್ಕೀಗ ಪ್ರೇಕ್ಷಕರು ಪಾಸಿಟಿವ್ ಆಗಿ ರೆಸ್ಪಾನ್ಸ್ ಮಾಡಿದ್ದಾರೆ. ಇನ್ನು 7 ನೇ ದಿನದ ಕಲೆಕ್ಷನ್ ಬಗ್ಗೆ ಡಿಸ್ಟ್ರಿಬ್ಯೂಷನ್ ಸೆಕ್ಟರ್‌ನಲ್ಲಿ ಓಡಾಡುತ್ತಿರುವ ಲೆಕ್ಕವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
7ನೇ ದಿನ 'ಭೈರತಿ ರಣಗಲ್' ಕಲೆಕ್ಷನ್ ಎಷ್ಟು?
'ಮಫ್ತಿ' ನೋಡಿದವರಿಗೆ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಒಂದು ಕುತೂಹಲ ಇದ್ದೇ ಇತ್ತು. 'ಭೈರತಿ ರಣಗಲ್' ಹಿಂದಿನ ಅಸಲಿ ಕಥೆಯೇನು? ಗ್ಯಾಂಗ್‌ಸ್ಟರ್ ಆಗಿ ಬದಲಾಗಿದ್ದು ಯಾಕೆ? ಅನ್ನೋದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಇನ್ನು ಶಿವಣ್ಣನ ಮ್ಯಾನರಿಸಂ ಅನ್ನು ಕಣ್ತುಂಬಿಕೊಳ್ಳಬೇಕು ಅಂತ ಬಂದವರೇ ಹೆಚ್ಚಿದ್ದರು. ಜೊತೆಗೆ ನಿರ್ದೇಶಕ ನರ್ತನ್ ಮೇಲಿನ ನಂಬಿಕೆ. ಇವೆಲ್ಲವೂ ಸಿನಿಮಾದ ಮೇಲೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. 7ನೇ ದಿನವಾದ ನಿನ್ನೆ ಈ ಸಿನಿಮಾ 70 ರಿಂದ 80 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ಲೆಕ್ಕ ಹಾಕಿದೆ.

7 ದಿನಗಳಲ್ಲಿ ₹20 ಕೋಟಿ ದಾಟಿತೇ?
ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಒಂದ್ಕಡೆ, ರುಕ್ಷಿಣಿ ಬಸಂತ್, ರವಿ ಬಸ್ರೂರು ಮ್ಯೂಸಿಕ್ 'ಭೈರತಿ ರಣಗಲ್'ಗೆ ಬಲ ನೀಡಿದ್ದವು. ಕಳೆದ 7 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 20 ಕೋಟಿ ರೂಪಾಯಿ ದಾಟಬಹುದೆಂಬ ನಿರೀಕ್ಷೆಯಿತ್ತು. ಆದರೆ, ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ, ಇದೂವರೆಗೂ ಮಾಡಿರುವ ಕಲೆಕ್ಷನ್‌ನಲ್ಲಿ ಮೋಸವೇನೂ ಇಲ್ಲ ಎನ್ನಲಾಗುತ್ತಿದೆ.
7 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ 2.10 ಕೋಟಿ ರೂಪಾಯಿ
ಎರಡನೇ ದಿನ 2.30 ಕೋಟಿ ರೂಪಾಯಿ
ಮೂರನೇ ದಿನ 3.40 ಕೋಟಿ ರೂಪಾಯಿ
ನಾಲ್ಕನೇ ದಿನ 1.60 ಕೋಟಿ ರೂಪಾಯಿ
ಐದನೇ ದಿನ 1.30 ಕೋಟಿ ರೂಪಾಯಿ
ಆರನೇ ದಿನ 0.80 ಕೋಟಿ ರೂಪಾಯಿ
ಏಳನೇ ದಿನ 0.70 ಕೋಟಿ ರೂಪಾಯಿ
ಒಟ್ಟು 12.80 ಕೋಟಿ ರೂಪಾಯಿ
ಏರಿಯಾ ಲೆಕ್ಕಾಚಾರವೇನು?
'ಭೈರತಿ ರಣಗಲ್' ಕೇವಲ ಒಂದು ಏರಿಯಾಗೆ ಸೀಮಿತವಾದುದ್ದಲ್ಲ. ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ ಗಡಿ ಭಾಗಗಳನ್ನು ಹೊರತು ಪಡಿಸಿ, ಸಿನಿಮಾದ ತೆರೆಕಂಡ ಬಹುತೇಕ ಕಡೆಗಳಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದನ್ನೇ ಮರೆತು ಹೋಗಿದ್ದ ಜನರನ್ನು ಮತ್ತೆ ಸೆಳೆದಿದೆ.
'ಭೈರತಿ ರಣಗಲ್' ಕಲೆಕ್ಷನ್ (Day 7)
ಬೆಂಗಳೂರು, ಕೋಲಾರ, ತುಮಕೂರು 44 ಲಕ್ಷ ರೂಪಾಯಿ
ಮೈಸೂರು, ಮಂಡ್ಯ, ಕೂರ್ಗ್, ಹಾಸನ್ 11 ಲಕ್ಷ ರೂಪಾಯಿ
ಶಿವಮೊಗ್ಗ, ದಕ್ಷಿಣ ಕನ್ನಡ 9 ಲಕ್ಷ ರೂಪಾಯಿ
ಚಿತ್ರದುರ್ಗ, ದಾವಣಗೆರೆ 2 ಲಕ್ಷ ರೂಪಾಯಿ
ಹೈದರಾಬಾದ್ ಕರ್ನಾಟಕ 2 ಲಕ್ಷ ರೂಪಾಯಿ
ಹುಬ್ಬಳ್ಳಿ 2 ಲಕ್ಷ ರೂಪಾಯಿ
ಒಟ್ಟು 70 ಲಕ್ಷ ರೂಪಾಯಿ (ಅಂದಾಜು)
ಬೇರೆ ಭಾಷೆಯಲ್ಲೂ ರಿಲೀಸ್
ಶಿವಣ್ಣ ನಟನೆಯ 'ಭೈರತಿ ರಣಗಲ್' ಬೇರೆ ಭಾಷೆಯಲ್ಲೂ ರಿಲೀಸ್ ಮಾಡಬೇಕು ಮೊದಲೇ ನಿರ್ಧರಿಸಲಾಗಿತ್ತು. ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್‌ಗೆ ಮುಂದಾಗಿದ್ದವರು. ಕೊನೆಯ ಕ್ಷಣದಲ್ಲಿ ಕೈ ಬಿಡಲಾಗಿತ್ತು. ಆದ್ರೀಗ ಕನ್ನಡದಲ್ಲಿ ಸಿನಿಮಾ ಗೆದ್ದಿದ್ದರಿಂದ ತೆಲುಗು ಹಾಗೂ ತಮಿಳಿನಲ್ಲೂ ಸಿನಿಮಾ ರಿಲೀಸ್ ಮಾಡುವುದಕ್ಕೆ ವಿತರಕರು ಮುಂಎದೆ ಒಂದಿದ್ದಾರೆ.


Click it and Unblock the Notifications











