"ನಾನು ಇಲ್ಲಿಲ್ಲ ಅಂದ್ರೂ 'ಯುಐ' ಸಿನಿಮಾ ನೋಡ್ತೀನಿ" ಎಂದ ಶಿವಣ್ಣ; ಅದಕ್ಕೆ ಉಪ್ಪಿ ರಿಯಾಕ್ಷನ್‌ಗೆ ಏನಿತ್ತು?
ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆಗಳು ಆಗುತ್ತಿವೆ. ಉಪ್ಪಿ ಹೈದರಾಬಾದ್ ಬಳಿಕ ಬೆಂಗಳೂರಿನಲ್ಲಿ ಇವೆಂಟ್ ಮಾಡಿದ್ದಾರೆ. 'ಯುಐ' ಸಿನಿಮಾಗೆ ಕಾರಣರಾದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇನ್ನು ಉಪ್ಪಿ ನಿರ್ದೇಶನದ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಅಲ್ಲಿ ಇಡೀ ಸ್ಯಾಂಡಲ್‌ವುಡ್ ಇರುತ್ತೆ.
ಅದರಲ್ಲೂ ಉಪೇಂದ್ರ ಅವರ ಬೆಸ್ಟ್ ಫ್ರೆಂಡ್ ಶಿವರಾಜ್‌ಕುಮಾರ್ ಕೂಡ ಆಗಮಿಸಿ ಶುಭ ಕೋರಿದ್ದಾರೆ. ಡಿಸೆಂಬರ್ 20ರಂದು ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೆ ಶಿವಣ್ಣ ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ರಿಲೀಸ್‌ಗೂ ಮೊದಲೇನೆ ಇವೆಂಟ್‌ಗೆ ಬಂದು ರಿಯಲ್ ಸ್ಟಾರ್‌ಗೆ ಶುಭ ಕೋರಿ ಹೋಗಿದ್ದಾರೆ.

ವೇದಿಕೆ ಮೇಲೆ ಉಪೇಂದ್ರ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಉಪ್ಪಿ ನಿರ್ದೇಶನಕ್ಕೆ ಇಳಿದರೆ ಹೇಗಿರುತ್ತೆ ಅನ್ನೋದನ್ನು ಹೇಳಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ 'ಯುಐ' ಸಿನಿಮಾ ನೋಡುವುದಕ್ಕೆ ಆಗುವುದಿಲ್ಲ. ಅಮೆರಿಕದಲ್ಲಿ ಸಿನಿಮಾ ನೋಡುವುದಾಗಿ ಶಿವಣ್ಣ ಹೇಳಿದ್ದಾರೆ. ಇದಕ್ಕೆ ಉಪೇಂದ್ರ ಕೊಟ್ಟ ಪ್ರತಿಕ್ರಿಯೆಗೆ ಶಿವಣ್ಣನನ್ನೇ ಫುಲ್ ಖುಷಿಯಾಗಿಬಿಟ್ಟರು. ಅಷ್ಟಕ್ಕೂ ಉಪ್ಪಿ ಅಂತಹದ್ದೇನು ಹೇಳಿದ್ದರು? ತಿಳಿಯುವುದಕ್ಕೆ ಮುಂದೆ ಓದಿ.
ಶಿವಣ್ಣನ ಆರೋಗ್ಯ ಸರಿಯಿಲ್ಲ. ಹೀಗಾಗಿ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಇದಕ್ಕಾಗಿ ಇದೇ ಡಿಸೆಂಬರ್ 18ರಂದು ಶಿವರಾಜ್‌ಕುಮಾರ್ ಅಮೆರಿಕಗೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 24 ರಂದು ಶಿವರಾಜ್‌ಕುಮಾರ್‌ಗೆ ಚಿಕಿತ್ಸೆ ನಡೆಯಲಿದೆ. ಆ ಬಳಿಕ ಅಲ್ಲಿ ಒಂದು ತಿಂಗಳು ಚಿಕಿತ್ಸೆ ಪಡೆದ ಬಳಿಕ ಶಿವರಾಜ್‌ಕುಮಾರ್ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಅಮೆರಿಕದಲ್ಲಿ 'ಯುಐ' ಸಿನಿಮಾ ನೋಡುವುದಾಗಿ ಉಪ್ಪಿಗೆ ಭರವಸೆ ಕೊಟ್ಟಿದ್ದಾರೆ.
"ಉಪೇಂದ್ರ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಇಂಡಿಯಾದಲ್ಲೇ ಒಬ್ಬ ಅತ್ಯುತ್ತಮ ನಿರ್ದೇಶಕ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಅಲ್ ದಿ ಬೆಸ್ಟ್ ಉಪ್ಪಿ ಚೆನ್ನಾಗಿ ಆಗಲಿ. ನಾನು ಇಲ್ಲದೆ ಹೋದರೂ ಅಮೆರಿಕದಲ್ಲಿ ಸಿನಿಮಾ ನೋಡುವುದಕ್ಕೆ ಪ್ರಯತ್ನ ಪಡುತ್ತೇನೆ. ಡಿಸೆಂಬರ್ 24ಕ್ಕೆ ಸರ್ಜರಿಯಿದೆ. ಅಲ್ಲೇ ಸಿನಿಮಾ ನೋಡಿ ಫೋನ್ ಮಾಡುತ್ತೇನೆ." ಎಂದು ರಿಯಲ್ ಸ್ಟಾರ್ ಉಪೇಂದ್ರಗೆ ಶಿವಣ್ಣ ಭರವಸೆ ಕೊಟ್ಟಿದ್ದಾರೆ.

ಶಿವಣ್ಣನ ಮಾತಿಗೆ ತಕ್ಷಣವೇ ಉಪ್ಪಿ ಪ್ರತಿಕ್ರಿಯಿಸಿದರು. ಅದಕ್ಕೆ ಶಿವಣ್ಣ ಫುಲ್ ಖುಷಿಯಾಗಿದರು. ಅದಕ್ಕೆ ಉಪೇಂದ್ರ 'ಯುಐ' ಸಿನಿಮಾ ನಿಮ್ಮ ಜೊತೆ ನೋಡುವುದಕ್ಕೆ ನಾನು ಅಲ್ಲಿಗೆ ಬರುತ್ತೇನೆ ಎಂದು ಉಪೇಂದ್ರ ಹೇಳಿದ್ದರು. ಅದಕ್ಕೆ "ಶಿವಣ್ಣ ಬೇಡ ನೀವು ಇಲ್ಲಿ ಇರಬೇಕು. ನೀವು ಇಲ್ಲಿ ನೋಡಿಕೊಳ್ಳಿ. ನಾನು ಅಲ್ಲಿ ನೋಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಇದೇ ವೇದಿಕೆ ಮೇಲೆ ಶಿವಣ್ಣ 'ಓಂ 2' ಸಿನಿಮಾ ಮಾಡುವುದಕ್ಕೆ ಅಪ್ಲೀಕೇಷನ್ ಹಾಕಿದ್ದಾರೆ. "ಉಪೇಂದ್ರ ಅಂದರೆ ಯಾವಾಗಲೂ ಮ್ಯಾಜಿಕ್ ಇದ್ದೇ ಇರುತ್ತೆ. ಯಾವಾಗಲೂ ಉಪೇಂದ್ರ ಹೀಗೆ ಇರಬೇಕು. ಇನ್ನೊಂದು ಓಂ 2 ಸಿನಿಮಾ ಮಾಡಲಿ ಅಂತ ಕಾಯುತ್ತಿದ್ದೀನಿ ಅಷ್ಟೇ. ಪ್ರಿಯಾಂಕಾ ಅವರು ಹೇಳಿದರು ನಾನೇ ಬೆಸ್ಟ್ ಅಂತ. ಗೀತನ್ನ ಕೇಳಬೇಕು ನಾನೇ ಬೆಸ್ಟ್ ಹೌದಾ ಅಲ್ವಾ ಅಂತ. ಜಾಸ್ತಿ ಸಿನಿಮಾ ಒಪ್ಪಿಕೊಳ್ಳೀನಿ. ಬರೀ ಶೂಟಿಂಗ್ ಅಂತಾನೇ ಇರುತ್ತೇನೆ. ನನಗೆ ಡೈರೆಕ್ಷನ್ ಬೇಡ. ಇಂತಹವರು ಡೈರೆಕ್ಷನ್ ಮಾಡಿದರೆ ಸಾಕು." ಎಂದು ಶಿವಣ್ಣ ಮಾಡಿದ್ದಾರೆ. ಹಾಗೇ ಶಿವಣ್ಣನಿಗೆ "ನೀವು 100 ವರ್ಷ ಇರುತ್ತೀರ. ಒಟ್ಟಿಗೆ ಇನ್ನೊಂದು ಸಿನಿಮಾ ಮಾಡೋಣ" ಎಂದು ಉಪೇಂದ್ರ ಭರವಸೆ ಕೊಟ್ಟಿದ್ದಾರೆ.


Click it and Unblock the Notifications











