'666: ಆಪರೇಷನ್ ಡ್ರೀಮ್ ಥಿಯೇಟರ್‌'; ರೆಟ್ರೋ ಲುಕ್ ಕೊಟ್ಟ ಶಿವಣ್ಣ.. ಅಣ್ಣಾವ್ರ ಹಾದಿ ಹಿಡಿದರೇ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬರ್ತ್‌ಡೇ ಹತ್ತಿರ ಬರುತ್ತಿದ್ದಂತೆ ಸಿನಿಮಾ ಮಂದಿಯ ಸಂಭ್ರಮ ಶುರುವಾಗಿದೆ. ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಒಂದೊಂದೇ ಸಿನಿಮಾದ ಬಗ್ಗೆ ಗುಸು ಗುಸು ಆರಂಭ ಆಗಿದೆ. ಗಾಂಧಿನಗರದ ಮಂದಿ ಕೂಡ ಕಾತುರದಿಂದ ಶಿವಣ್ಣ ಹುಟ್ಟುಹಬ್ಬದ (ಜುಲೈ 12) ದಿನಕ್ಕಾಗಿ ಕಾಯುತ್ತಿದ್ದಾರೆ. ಯಾಕಂದ್ರೆ, ಆ ದಿನ ನಿರ್ಮಾಪಕರು ಸಾಲು ಸಾಲಾಗಿ ಸಿನಿಮಾಗಳನ್ನು ಅನೌನ್ಸ್ ಮಾಡುತ್ತಾರೆ.

ಇಂತಹದ್ದೊಂದು ನಿರೀಕ್ಷೆಯ ನಡುವೆಯೇ '666: ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಶಿವಣ್ಣನ ಲುಕ್ ರಿವೀಲ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಟಗರು' ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಟ್ಟಾಗಿ ನಟಿಸುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Shivarajkumar starrer 666 operation dream theater first look revealed

ನಿರ್ದೇಶಕ ಹೇಮಂತ್ ರಾವ್ ಈಗಾಗಲೇ ಡಾಲಿ ಧನಂಜಯ್ ಸಿನಿಮಾದ ಲುಕ್ ಅನ್ನು ರಿವೀಲ್ ಮಾಡಿದ್ದರು. ಅದರ ಹಿಂದೇನೆ ಶಿವರಾಜ್‌ಕುಮಾರ್ ಲುಕ್ ಅನ್ನು ಅವರ ಹುಟ್ಟುಹಬ್ಬಕ್ಕೆ ಇನ್ನೇನು ಎರಡು ಮೂರು ದಿನ ಇದೆ ಎನ್ನುವಾಗಲೇ ರಿವೀಲ್ ಮಾಡಲಾಗಿದೆ. ಶಿವಣ್ಣ ರೆಟ್ರೋ ಲುಕ್ ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನು ಕೆಲವರು ಈ ಲುಕ್ ನೋಡಿ ಅಣ್ಣಾವ್ರ ಹಾದಿ ಹಿಡಿದರೇ ಶಿವಣ್ಣ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

'666 ಆಪರೇಷನ್ ಡ್ರೀಮ್ ಥಿಯೇಟರ್‌' ಸಿನಿಮಾದ ಫಸ್ಟ್ ಲುಕ್‌ನಲ್ಲಿ ಶಿವಣ್ಣ ಹೊಸ ಗೆಟಪ್‌ನಲ್ಲಿ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಈ ಫಸ್ಟ್ ಲುಕ್‌ನಲ್ಲಿ ಶಿವಣ್ಣ ಸೂಟ್‌ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್‌ ಹಿಡಿದು ಸ್ಟೈಲಿಶ್‌ ಲುಕ್ ಕೊಟ್ಟಿದ್ದಾರೆ. ಈ ಲುಕ್ ನೋಡಿದ ಬಳಿಕ ರಾಜವಂಶದ ಅಭಿಮಾನಿಗಳು ಅಣ್ಣಾವ್ರ ಬಾಂಡ್ ಸಿನಿಮಾಗಳು ನೆನಪಾಗುತ್ತಿವೆ. ಮೇಲ್ನೋಟಕ್ಕೆ ರೆಟ್ರೋ ಕಥೆ ಎಂದು ಗೆಸ್ ಮಾಡಬಹುದಾದರೂ, ಚಿತ್ರತಂಡ ಚಿಕ್ಕದೊಂದು ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್‌' ಸಿನಿಮಾ ಶಿವಣ್ಣನ ಲುಕ್ ಹೊರ ಬೀಳುತ್ತಿದ್ದಂತೆ ನೆಟ್ಟಿಗರಿಗೆ ಅಣ್ಣಾವ್ರು ನೆನಪಾಗಿದ್ದಾರೆ. ಬಾಂಡ್ ಶೈಲಿಯ ಸಿನಿಮಾಗಳಲ್ಲಿ ನಟಿಸಿದ್ದ ದಕ್ಷಿಣ ಭಾರತದ ಏಕೈಕ ನಟ ಡಾ.ರಾಜ್‌ಕುಮಾರ್. ಇಂದಿಗೂ ಇಂತಹದ್ದೊಂದು ಸೀರಿಯಸ್ ಅಟೆಮ್ಟ್ ಅನ್ನು ಯಾವ ಹೀರೋನೂ ಮಾಡಿಲ್ಲ. ಹಾಗಂತ ರಾಜ್‌ಕುಮಾರ್ ಕೇವಲ ಒಂದು ಬಾಂಡ್ ಸಿನಿಮಾ ಅಲ್ಲ. 'ಜೇಡರ ಬಲೆ' ಸಿನಿಮಾದಿಂದ ಹಿಡಿದು 'ಆಪರೇಷನ್ ಡೈಮಂಡ್ ರಾಕೆಟ್' ವರೆಗೂ ನಟಿಸಿ ಸೈ ಎನಿಸಿಕೊಂಡವರು.

ಅಣ್ಣಾವ್ರು 1968ರಲ್ಲಿ ಮೊದಲ ಬಾಂಡ್ ಸಿನಿಮಾ 'ಜೇಡರ ಬಲೆ'ಯಲ್ಲಿ ನಟಿಸಿದ್ದರು. ಇದೇ ವರ್ಷ 'ಗೋವಾದಲ್ಲಿ ಸಿಐಡಿ 999' ರಿಲೀಸ್ ಆಗಿತ್ತು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಎರಡು ಸಿನಿಮಾಗಳ ಯಶಸ್ಸಿನ ಬಳಿಕ ಮರು ವರ್ಷವೇ ಅಂದರೆ, 1969ರಲ್ಲಿ 'ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999' ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ರೇಖಾ ನಟಿಸಿದ್ದರು. ಇದು ಕೂಡ ಹಿಟ್ ಲಿಸ್ಟ್‌ ಸೇರಿತ್ತು. ಆದರೆ, ಇನ್ನೊಂದು ಬಾಂಡ್ ಸಿನಿಮಾ ಬರುವುದಕ್ಕೆ 9 ವರ್ಷ ಹಿಡಿದಿತ್ತು. 1978ರಲ್ಲಿ 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾ ರಿಲೀಸ್ ಆಗಿತ್ತು. ಇದು ಭಾರತದಿಂದ ಹೊರಗೆ ಚಿತ್ರೀಕರಿಸಿದ ಮೊದಲ ಸಿನಿಮಾ ಎನಿಸಿಕೊಂಡಿತ್ತು. ನೇಪಾಳದಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿತ್ತು. ವಿಶೇಷ ಅಂದರೆ, ಈ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ದೊರೈ-ಭಗವಾನ್. ಆ ನಂತರ ಬಾಂಡ್ ಸಿನಿಮಾ ಬರಲೇ ಇಲ್ಲ.

ಈಗ ಮತ್ತೆ ಅಣ್ಣಾವ್ರ ಬಾಂಡ್ ಸಿನಿಮಾಗಳನ್ನು ನೆನಪಿಸುವಂತೆ ಶಿವಣ್ಣ ಲುಕ್ ಕೊಟ್ಟಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್‌' ಅಂತ ಹೇಮಂತ್ ಎಂ ರಾವ್ ಟೈಟಲ್ ಇಟ್ಟಿದ್ದಾರೆ. ಹೀಗಾಗಿ ಬಹಳ ದಿನಗಳ ನಂತರ ಮತ್ತೊಂದು ಬಾಂಡ್ ಸಿನಿಮಾವನ್ನು ನಿರೀಕ್ಷೆ ಮಾಡಬಹುದಾ? ಎಂಬ ಪ್ರಶ್ನೆಯಂತೂ ಮೂಡಿದೆ. ಯಾಕಂದ್ರೆ ಹೇಮಂತ್ ರಾವ್ ಕೂಡ ಈ ಹಿಂದೆ ನಿರ್ದೇಶಿಸಿದ 'ಕವಲುದಾರಿ' ಹೆಚ್ಚು ಕಡಿಮೆ ಪತ್ತೆದಾರಿ ಕಥೆಯನ್ನೇ ಹೊಂದಿತ್ತು. ಹೀಗಾಗಿ ಶಿವಣ್ಣ ತಂದೆ ರಾಜ್‌ಕುಮಾರ್ ಅವರ ಹಾದಿಯನ್ನೇ ಹಿಡಿದಿದ್ದಾರಾ? ಎನ್ನುವ ಅನುಮಾನ ಅವರ ಅಭಿಮಾನಿಗಳಲ್ಲಿ ಮೂಡಿದೆ.

'666 ಆಪರೇಷನ್ ಡ್ರೀಮ್ ಥಿಯೇಟರ್‌' ಹೇಳಿ ಕೇಳಿ ರೆಟ್ರೋ ಶೈಲಿಯ ಸಿನಿಮಾ. ಅಣ್ಣಾವ್ರ ರೆಟ್ರೋ ಬಾಂಡ್ ಲುಕ್‌ಗೆ ಹೊಂದಿಕೊಳ್ಳುತ್ತಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಒಂದು ವೇಳೆ ಈ ಸಿನಿಮಾ ಬಾಂಡ್ ಸಿನಿಮಾವೇ ಆದರೆ, ರಾಜವಂಶದ ಅಭಿಮಾನಿಗಳಿಗೆ ಮತ್ತೊಂದು ಕನ್ನಡದ ಬಾಂಡ್ ಮೂವಿ ನೋಡುವ ಅವಕಾಶ ಸಿಗಲಿದೆ. ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇದೇ ತಿಂಗಳು ಸಿನಿಮಾ ಆರಂಭ ಆಗುತ್ತಿದೆ. ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ.

More from Filmibeat

English summary
Shivarajkumar starrer 666 operation dream theater first look revealed.
Read more about: shivarajkumar sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X