'ಜೇಮ್ಸ್' ಸಿನಿಮಾದಲ್ಲಿ ಶಿವಣ್ಣನ 'ಬೈರಾಗಿ' ಝಲಕ್: ಅಪ್ಪು ಬರ್ತ್‌ಡೇಗೆ ಡಬಲ್ ಧಮಾಕಾ

ಎಲ್ಲಿ ನೋಡಿದರೂ 'ಜೇಮ್ಸ್' ಸಿನಿಮಾ ಬಗ್ಗೆನೇ ಮಾತು. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಕ್ರೇಜ್ ನೋಡಿದರೆ, ಸ್ಯಾಂಡಲ್‌ವುಡ್‌ನಲ್ಲಿ ಹೊಸದಾಖಲೆಗಳ ಸೃಷ್ಟಿಸಲಿದೆ ಅಂತ ಸಿನಿಮಾ ಮಂದಿನೇ ಭವಿಷ್ಯ ನುಡಿಯುತ್ತಿದ್ದಾರೆ. ಇತ್ತ ಅಭಿಮಾನಿಗಳು ಕೂಡ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಪುನೀತ್ ರಾಜ್‌ಕುಮಾರ್ ಅನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಅಪ್ಪು ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್ ಸಿಗಲಿದೆ.

ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಅನ್ನು ತೆರೆಮೇಲೆ ನೋಡಲಿರುವ ಅಭಿಮಾನಿಗಳಿಗೆ ಶಿವಣ್ಣನ 'ಬೈರಾಗಿ' ಝಲಕ್ ನೋಡುವ ಅವಕಾಶ ಕೂಡ ಸಿಗಲಿದೆ. ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ಈಗಾಗಲೇ ದೊಡ್ಮನೆ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದ್ದಾರೆ. 'ಜೇಮ್ಸ್' ಸಿನಿಮಾದ ಪ್ರತಿಯೊಂದು ಹೆಜ್ಜೆಯಲ್ಲೂ ಶಿವರಾಜ್‌ಕುಮಾರ್ ನಿಂತಿದ್ದರು. ಸಿನಿಮಾ ಬಿಡುಗಡೆ ವೇಳೆನೂ ಶಿವಣ್ಣ ಖದರ್ ನೋಡಬಹುದು. ಅಪ್ಪು ಫ್ಯಾನ್ಸ್‌ಗೆ ಒಂದ್ಕಡೆ 'ಜೇಮ್ಸ್' ಮತ್ತೊಂದು ಕಡೆ 'ಬೈರಾಗಿ' ನೋಡುವ ಅವಕಾಶ ಸಿಕ್ಕಿದೆ.

 ಬೈರಾಗಿ 123ನೇ ಸಿನಿಮಾ

ಬೈರಾಗಿ 123ನೇ ಸಿನಿಮಾ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ 'ಬೈರಾಗಿ' ಟೀಸರ್ 'ಜೇಮ್ಸ್' ಸಿನಿಮಾ ಜೊತೆ ಬಿಡುಗಡೆಯಾಗಲಿದೆ. ಮಾರ್ಚ್ 17ರಂದು ಶಿವಣ್ಣನ ರಗಡ್ ಲುಕ್ ಅನ್ನು 'ಬೈರಾಗಿ' ಟೀಸರ್‌ನಲ್ಲಿ ನೋಡಬಹುದಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ಬೈರಾಗಿ' ಶಿವಣ್ಣನ ಮಹತ್ವಕಾಂಕ್ಷೆ ಸಿನಿಮಾಗಳಲ್ಲಿ ಒಂದು. ಹೀಗಾಗಿ ಅಪ್ಪು ನೆನಪಿನಲ್ಲೇ ಈ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ.

 ಅಪ್ಪು ನೆನಪಿಗಾಗಿ ಬೈರಾಗಿ ಟೀಸರ್

ಅಪ್ಪು ನೆನಪಿಗಾಗಿ ಬೈರಾಗಿ ಟೀಸರ್

ಶಿವಣ್ಣ ಅಭಿನಯದ 'ಬೈರಾಗಿ' ಟೀಸರ್ 'ಜೇಮ್ಸ್' ರಿಲೀಸ್ ಆದ ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರದರ್ಶನವಾಗಲಿದೆ. ಶಿವಣ್ಣ ಸಿನಿಮಾ ಹಿಂದೆ ಪುನೀತ್ ರಾಜ್‌ಕುಮಾರ್, ಅಪ್ಪು ಸಿನಿಮಾ ಜೊತೆ ಶಿವಣ್ಣ ನಿಂತಿರುತ್ತಿದ್ದರು. ಪ್ರತ್ಯಕ್ಷವಾಗಿಯೋ, ಇಲ್ಲ ಪರೋಕ್ಷವಾಗಿಯೋ ಬೈರಾಗಿ ಜೊತೆ ನಿಂತಿತ್ತ ಅಪ್ಪು ನೆನೆಪಿಗಾಗಿ ಈ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದೆ ಚಿತ್ರತಂಡ. "ಪುನೀತ್ ಸವಿನೆನಪಿಗಾಗಿ ಅವರ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಉಡುಗೊರೆಯಾಗಿ 'ಬೈರಾಗಿ' ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ಹಾಗೂ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ವಿಷಯ" ಎಂದು ಚಿತ್ರತಂಡ ಹೇಳಿಕೊಂಡಿದೆ.

 ಡಾಲಿ-ಪ್ರುಥ್ವಿ ಅಬ್ಬರ

ಡಾಲಿ-ಪ್ರುಥ್ವಿ ಅಬ್ಬರ

ಶಿವಣ್ಣನ 'ಬೈರಾಗಿ' ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಟಗರು' ಸಿನಿಮಾದ ಬಳಿಕ ಡಾಲಿ ಧನಂಜಯ್ ಮತ್ತೆ ಶಿವಣ್ಣನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ 'ದಿಯಾ' ಖ್ಯಾತಿಯ ಪ್ರುಥ್ವಿ ಅಂಬರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟ ಶಶಿಕುಮಾರ್, ಅಂಜಲಿ, ಯಶ ಶಿವಕುಮಾರ್ ಸೇರಿದಂತೆ ದೊಡ್ಡ ಬಳಗವೇ ಸೇರಿಕೊಂಡಿದೆ. ವಿಜಯ್ ಮಿಲ್ಟನ್‌ 'ಬೈರಾಗಿ' ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

 'ಜೇಮ್ಸ್' ಜೊತೆ ನಿಂತ ಶಿವಣ್ಣ ಸಾರಥ್ಯ

'ಜೇಮ್ಸ್' ಜೊತೆ ನಿಂತ ಶಿವಣ್ಣ ಸಾರಥ್ಯ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ಪ್ರತಿಯೊಂದು ಹಂತದಲ್ಲೂ ನಿಂತಿದ್ದಾರೆ. ಅಪ್ಪುಗೆ ಶಿವರಾಜ್‌ಕುಮಾರ್ ಡಬ್ ಮಾಡಿದ್ದಲ್ಲಿಂದ ಹಿಡಿದು ಪ್ರಿ ರಿಲೀಸ್‌ ಇವೆಂಟ್‌ನಲ್ಲೂ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಿದ್ದಾರೆ. ಇನ್ನು ಅಪ್ಪು ಅಭಿಮಾನಿಗಳ ಜೊತೆ ನಿಂತಿರುವ ಶಿವಣ್ಣ, ಪುನೀತ್ ಅಭಿಮಾನಿಗಳ ಮೆರವಣಿಗೆಯಲ್ಲೂ ಭಾಗಿಯಾಗಲಿದ್ದಾರೆ. ಹೀಗಾಗಿ 'ಬೈರಾಗಿ' ಸಿನಿಮಾದ ಟೀಸರ್ ಅನ್ನು ಅಪ್ಪು ನೆನಪಿನಲ್ಲಿಯೇ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

More from Filmibeat

English summary
Shivarajkumar starrer Bairagee movie teaser will be releasing on Puneeth Rajkumar Birthday. Bairagee is Shivarajkumar's 123rd movie. Dhananjay and Pruthvi Ambar also acted in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X