ಶಿವಣ್ಣನ ಹುಟ್ಟುಹಬ್ಬಕ್ಕೂ ಮುನ್ನ 'ಬೈರಾಗಿ' ರಿಲೀಸ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೈಯಲ್ಲಿರೋ ಸಿನಿಮಾಗಳ ಬಗ್ಗೆ ಗೊತ್ತೇ ಇದೆ. ಒಂದರ ಹಿಂದೊಂದು ಸಿನಿಮಾ ಮುಗಿಯುತ್ತಿವೆ. ಇನ್ನೊಂದು ಕಡೆ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಮತ್ತೊಂದು ಕಡೆ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳು ಪ್ರಚಾರ ಶುರು ಮಾಡಿವೆ. ಅದರಲ್ಲೊಂದು ಶಿವಣ್ಣ ಅಭಿನಯದ 'ಬೈರಾಗಿ'.

'ಬೈರಾಗಿ' ಶಿವರಾಜ್‌ಕುಮಾರ್ ಅಭಿಯಸುತ್ತಿರುವ 123ನೇ ಸಿನಿಮಾ. ಕಳೆದ ಕೆಲವು ದಿನಗಳಿಂದ ಶಿವಣ್ಣನ ಸಿನಿಮಾ ಬೈರಾಗಿ ಸದ್ದು ಮಾಡುತ್ತಲೇ ಇತ್ತು. ನಿಧಾನವಾಗಿ ಶೂಟಿಂಗ್ ಮುಗಿಸಿದ ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಚಿತ್ರತಂಡ ಹೇಳಿದಂತೆಯೇ ಇಂದು ( ಜೂನ್ 05) ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.

ಶಿವಣ್ಣ ಬರ್ತ್‌ಡೇಗೂ ಮುನ್ನ 'ಬೈರಾಗಿ' ರಿಲೀಸ್

ಜುಲೈ 12 ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬ. 60ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣನ 123ನೇ ಸಿನಿಮಾ ರಿಲೀಸ್ ಆಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಶಿವಣ್ಣ ಅಭಿಮಾನಿಗಳಿಗೆ ಹುಟ್ಟುಹಬ್ಬಕ್ಕಿಂತ ಎರಡು ವಾರ ಮುಂಚಿತವಾಗಿಯೇ 'ಬೈರಾಗಿ' ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Shivarajkumar Starrer Bairagi Movie Will Be Releasing On July 1st

ಹೌದು.. ಶಿವಣ್ಣನ 123ನೇ ಸಿನಿಮಾ ಜುಲೈ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಹುತಾರಾಗಣದ ಈ ಸಿನಿಮಾವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ. ಈಗಾಗಲೇ ಬೈರಾಗಿ ಹಾಡುಗಳು ಹಾಗೂ ಶಿವಣ್ಣನ ಲುಕ್‌ನಿಂದಲೇ ಗಮನ ಸೆಳೆದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದ ಸ್ಟಾರ್ ಕಾಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ.

ಮತ್ತೆ ಶಿವಣ್ಣ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್

'ಟಗರು' ಸಿನಿಮಾದ ಬಳಿಕ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ. 'ಟಗರು' ಸಿನಿಮಾದಲ್ಲಿ ಶಿವಣ್ಣ ಹಾಗೂ ಡಾಲಿ ಇಬ್ಬರು ಎದುರಾಳಿಗಳಾಗಿದ್ದರು. ಆದರೆ, 'ಬೈರಾಗಿ' ಸಿನಿಮಾದಲ್ಲಿ ಇಬ್ಬರ ಕಾಂಬಿನೇಷನ್ ಹೇಗಿರುತ್ತೆ? ಎನ್ನುವ ಕುತೂಹಲವಿದೆ. ಇನ್ನೊಂದು ಕಡೆ ಈ ಸಿನಿಮಾದಲ್ಲಿ ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ನಟಿಸಿದ್ದಾರೆ.

Shivarajkumar Starrer Bairagi Movie Will Be Releasing On July 1st

ಬೈರಾಗಿ ಟೀಸರ್‌ನಲ್ಲಿ ಶಿವರಾಜ್‌ಕುಮಾರ್ ಹುಲಿ ವೇಷದಲ್ಲಿ ಕಾಣಿಸಿಕೊಂಡಿದ್ದು, ಇದು ಆಕ್ಷನ್ ಸಿನಿಮಾ ಅಂತ ಹೇಳಬಹುದು. ಇದರೊಂದಿಗೆ ಸೆಂಟಿಮೆಂಟ್ ಕೂಡ ಇರುತ್ತೆ. ಪಕ್ಕಾ ಕಮರ್ಷಿಯಲ್ ಸಿನಿಮಾಗೆ ಬೇಕಾಗಿರುವ ಎಲ್ಲಾ ಎಲಿಮೆಂಟ್ಸ್‌ ಅನ್ನು ಹೊತ್ತು 'ಬೈರಾಗಿ' ಸಿನಿಮಾ ಅಖಾಡಕ್ಕೆ ಇಳಿಯಲಿದೆ. ಜುಲೈ 01 ರಂದು ರಾಜ್ಯಾದ್ಯಂತ 'ಬೈರಾಗಿ' ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಪ್ರೇಕ್ಷಕರು ಸಿನಿಮಾ ಯಾವ ರೀತಿ ರೆಸ್ಪಾನ್ಸ್ ಕೊಡುತ್ತಾರೆ ಎನ್ನುವ ಕುತೂಹಲ ಸೃಷ್ಟಿಸಿದೆ.

More from Filmibeat

English summary
Shivarajkumar Starrer Bairagi Movie Will Be Releasing On July 1st, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X