Don't Miss!
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- News
ಬೆಂಗಳೂರು ಟ್ರಾಫಿಕ್ನಿಂದಾಗಿ ಆಂಬುಲೆನ್ಸ್ನಲ್ಲಿ ಹಸುಗೂಸು ಸಾವು!
- Automobiles
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿವಣ್ಣನ 125ನೇ ಸಿನಿಮಾ 'ವೇದ' ಗೆಲ್ತಾ? ಸೋಲ್ತಾ? ಬಾಕ್ಸಾಫೀಸ್ ರಿಪೋರ್ಟ್ ಏನಿದೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 125ನೇ ಸಿನಿಮಾ 'ವೇದ' ರಿಲೀಸ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಕಳೆದ ವರ್ಷ ಕ್ರಿಸ್‌ಮಸ್‌ಗೆ ಬಿಡುಗಡೆಯಾದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ಸಿನಿಮಾ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ.
ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಕನ್ನಡದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತವೆ. ಗಲ್ಲಾಪಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತವೆ. ಇದೇ ನಿಟ್ಟಿನಲ್ಲಿ ಬಿಡುಗಡೆಯಾಗದ ಸಿನಿಮಾ 'ವೇದ'. ಶಿವರಾಜ್‌ಕುಮಾರ್ ಮಾಸ್ ಅವತಾರದಲ್ಲಿ ಮಿಂಚಿದ್ದು, ರಗಡ್ ಲುಕ್ ನೋಡುವುದಕ್ಕೆಂದೇ ಥಿಯೇಟರ್‌ಗೆ ಜನರು ನುಗ್ಗುತ್ತಿದ್ದಾರೆ.
'ಬೈರತಿ
ರಣಗಲ್'
ಶಿವಣ್ಣನ
125ನೇ
ಸಿನಿಮಾ
ಆಗಿಲ್ಲ
ಯಾಕೆ?
ಸಿನಿಮಾ
ಸೆಟ್ಟೇರುತ್ತಾ
ಇಲ್ವಾ?
'ವೇದ' ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳಾಗಿವೆ. ಮೊದಲನೇ ವಾರದಿಂದಲೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿದೆ. ಅಷ್ಟಕ್ಕೂ ಶಿವಣ್ಣನ 125ನೇ ಸಿನಿಮಾ ಈ ಎರಡು ವಾರಗಳಲ್ಲಿ ಗೆದ್ದಿದ್ದೆಷ್ಟು? ಶಿವಣ್ಣನ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆಯಾ? ಇಲ್ವಾ? ವಿಶ್ವದಾದ್ಯಂತ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶಿವಣ್ಣನ 'ವೇದ' ಮೊದಲ ವಾರ ಗಳಿಸಿದ್ದೆಷ್ಟು?
125ನೇ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವಣ್ಣನೇ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಇದು ಶಿವಣ್ಣ ಹಾಗೂ ಎ ಹರ್ಷ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 4ನೇ ಸಿನಿಮಾ. ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ 'ವೇದ' ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಮೊದಲನೇ ವಾರ 'ವೇದ' ಸುಮಾರು 19.6 ಕೋಟಿ ರೂ. ಕಲೆಕ್ಷನ್ ಮಾಡಿದೆ.
2023
Sandalwood:
ಹೊಸ
ವರ್ಷಕ್ಕೆ
ಹೊಚ್ಚ
ಹೊಸ
ಪೋಸ್ಟರ್ಸ್,
ಮೇಕಿಂಗ್
ಝಲಕ್

ಎರಡು ವಾರದಗಳ 'ವೇದ' ಕಲೆಕ್ಷನ್ ಎಷ್ಟು?
'ವೇದ' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಹೊಸ ವರ್ಷದ ಬಳಿಕ ಶಿವಣ್ಣನ 125ನೇ ಸಿನಿಮಾ ಕಲೆಕ್ಷನ್ ಕೊಂಚ ಮಟ್ಟಿಗೆ ತಗ್ಗಿದೆ. ಹೀಗಿದ್ದರೂ, ವೇದ ಸಿನಿಮಾ ಲಾಭದಲ್ಲಿದೆ. ಮೊದಲನೇ ವಾರ 19.6 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಎರಡನೇ ವಾರ 6.50 ಕೋಟಿ ರೂ. ಗಳಿಸಿದೆ. ಎರಡು ವಾರಗಳಲ್ಲಿ ಒಟ್ಟು ಸುಮಾರು 26.1 ಕೋಟಿ ರೂ. (ಗ್ರಾಸ್) ಕಲೆಕ್ಷನ್ ಆಗಿದೆ ಅನ್ನೋದು ವಿತರಕರ ವಲಯದಿಂದ ಕೇಳಿಬರುತ್ತಿರೋ ಸುದ್ದಿ. ಆದರೆ. ಈ ಬಗ್ಗೆ ಗೀತಾ ಆರ್ಟ್ಸ್ ಹಾಗೂ ವಿತರಣಾ ಸಂಸ್ಥೆ ಜೀ ಸ್ಟುಡಿಯೋಸ್ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕಿಲ್ಲ.

ವೇದ ಲೈಫ್ ಟೈಮ್ ಪ್ರಿಡಿಕ್ಷನ್ ಎಷ್ಟು?
'ವೇದ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಟ್ಟು ಎಷ್ಟು ಕಲೆಕ್ಷನ್ ಮಾಡಬಹುದು ಅನ್ನೋ ಲೆಕ್ಕಾಚಾರ ಕೂಡ ಶುರುವಾಗಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ವೇದ' ಲೈಫ್ ಟೈಮ್ ಕಲೆಕ್ಷನ್ ಸುಮಾರು 30 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಿದ್ದಾರೆ. ವಿಶ್ವದಾದ್ಯಂತ ಸುಮಾರು 1200 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು.

ಸೆಟ್ಟೇರುತ್ತಾ 'ವೇದ 2'?
ಶಿವರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ಸಿನಿಮಾ 'ವೇದ' ಶೇ. 30ರಷ್ಟು ಲಾಭ ಗಳಿಸಿದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ 'ವೇದ 2' ಮಾಡುವ ಆಲೋಚನೆ ಕೂಡ ಇದೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ಬೆಂಗಳೂರು, ಮೈಸೂರು ಹಾಗೂ ಗಡಿ ಭಾಗಗಳಲ್ಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗುತ್ತಿದೆ. ಇನ್ನುಒಂದೆರಡು ವಾರಗಳಲ್ಲಿ ಹರ್ಷ ಹಾಗೂ ಶಿವಣ್ಣ 'ವೇದ 2' ಕ್ಲಾರಿಟಿ ಕೊಡಬಹುದು ಎಂದು ಅಂದಾಜಿಸಲಾಗಿದೆ.