ಶಿವಮೊಗ್ಗದಲ್ಲಿ ತಮಿಳಿನಲ್ಲಿ ಭಾಷಣ: "ಕರುನಾಡ ದೊರೆಯಲ್ಲ.. ಕರುನಾಡಿಗೆ ದೊಡ್ಡ ಹೊರೆ" ಎಂದು ಆಕ್ರೋಶ
ಶಿವಮೊಗ್ಗ: ಅಣ್ಣಾವ್ರ ಹಿರಿಮಗ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪತ್ನಿಯೊಂದಿಗೆ ಶಿವಮೊಗ್ಗ ಜಿಲ್ಲೆಯನ್ನು ಸುತ್ತಿದ್ದಾರೆ. ಅಬ್ಬರಿಸಿ ಪ್ರಚಾರ ಮಾಡುವ ಭರಾಟೆಯಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಮತಯಾಚೆನೆಗೆ ಇಳಿದಿದ್ದರು. ಈ ವೇಳೆ ಮಲೆನಾಡಿನಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡುತ್ತಿದ್ದಂತೆ, ಕನ್ನಡಿಗರ ಕಣ್ಣುಗಳು ಕೆಂಪಗಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ವಿರುದ್ಧ ಕಿಡಿಕಾರುತ್ತಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಈ ಬಾರಿ ಶಿವಣ್ಣನ ಪತ್ನಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿದಿದ್ದಾರೆ. ಸೊರಬ ಶಾಸಕ ಹಾಗೂ ಶಿಕ್ಷಣ ಹಾಗೂ ಸಾಕ್ಷಾತ್ಕಾರ ಇಲಾಖೆ ಸಚಿವ ಮಧು ಬಂಗಾರಪ್ಪ ಬೆಂಬಲವಿದೆ. ಹೀಗಾಗಿ ಈ ಬಾರಿಗೆ ಹೇಗಾದರೂ ಮಾಡಿ ಪತ್ನಿಯನ್ನು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೆಲ್ಲಿಸಲೇಬೇಕು ಎಂದು ಶಿವಣ್ಣ ಪಣತೊಟ್ಟು ನಿಂತಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಕೊಂಚ ಬ್ರೇಕ್ ಕೊಟ್ಟು ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ಶಿವಣ್ಣ ಪತ್ನಿ ಪರ ಪ್ರಚಾರಕ್ಕೆ ಇಳಿದ ದಿನದಿಂದ ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇದ್ದಾರೆ. ಈಗ ಶಿವಮೊಗ್ಗದ ಒಂದು ಏರಿಯಾದಲ್ಲಿ ತಮಿಳು ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಅದೇ ಭಾಷೆಯಲ್ಲಿ ಮತಯಾಚನೆ ಮಾಡಿದ್ದರು. ಅಲ್ಲದೆ ಈ ವೇಳೆ " ಈ ಭಾಗದಲ್ಲಿ ತಮಿಳಿನವರು ಹೆಚ್ಚು ಜನ ಇದ್ದಾರೆಂದು ಗೊತ್ತಾಯ್ತು. ನಾನು ಹುಟ್ಟಿದ್ದು ಕೂಡ ಚೆನ್ನೈನಲ್ಲಿ. ಅಲ್ಲೇ ಬೆಳೆದಿದ್ದೇನೆ. ನನ್ನ ಶಿಕ್ಷಣ ಮುಗಿದಿದ್ದು ಕೂಡ ಅಲ್ಲೇನೆ. ಡಾ. ರಾಜ್ಕುಮಾರ್ ಮಕ್ಕಳು ಹುಟ್ಟಿದ್ದು ಕೂಡ ಚೆನ್ನೈನಲ್ಲಿಯೇ ನಮಗೂ ಅಲ್ಲಿ ಮನೆ ಇತ್ತು" ಭಾಷಣದಲ್ಲಿ ಹೇಳಿದ್ದರು.
ಈ ತುಣುಕು ವೈರಲ್ ಆಗುತ್ತಿದ್ದಂತೆ ಶಿವರಾಜ್‌ಕುಮಾರ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. "ಈತ ಕರುನಾಡ ದೊರೆಯಲ್ಲ. ಕರುನಾಡಿಗೆ ದೊಡ್ಡ ಹೊರೆ. ಶಿವಣ್ಣ ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೆಡ್ ಆಕ್ಟಿಂಗ್ ಮಾಡ್ಕೊಂಡ್ ಇರಲಿ." ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಹಾಗೇ " ಇನ್ನೊಬ್ಬರು ಏನಿದು ಶಿವಣ್ಣ. ಇದು ಕರ್ನಾಟಕ. ಕನ್ನಡದಲ್ಲಿ ಮಾತಾಡಿ. ಕೇವಲ ನವೆಂಬರ್ 1ದಂದು ಮಾತ್ರ ಕನ್ನಡ ರಾಜ್ಯೋತ್ಸವ ಅಲ್ಲ." ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ. ಇನ್ನು ಕೆಲವರು ಕನ್ನಡದಲ್ಲಿ ಮಾತಾಡಿ ಅಂತ ಕಿಡಿಕಾರುತ್ತಿದ್ದಾರೆ.
ಶಿವರಾಜ್‌ಕುಮಾರ್ ಸಿನಿಮಾಗೆ ತಾತ್ಕಾಲಿಕ ಬ್ರೇಕ್ ಹಾಕಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಈಗ ತಮಿಳಿನಲ್ಲಿ ಮಾತಾಡಿದ್ದಕ್ಕೆ ರೊಚ್ಚಿಗೆದ್ದಿದ್ದಾರೆ. ಆದರೆ, ಶಿವಣ್ಣನ ಅಭಿಮಾನಿಗಳು ಕರುನಾಡ ದೊರೆಯಲ್ಲ ಎಂದುವರಿಗೂ ಕಡಕ್ ವಾರ್ನಿಂಗ್ ಕೊಡುತ್ತಿದ್ದಾರೆ. ಶಿವಣ್ಣ ಕೊಂಗ, ಕರುನಾಡಿಗೆ ಹೊರೆ, ಕಿತ್ತಾದೋ ಲೆಂಜೆಂಡಾ?, ತಮಿಳುನಾಡಿನಲ್ಲಿ ಸೈಡ್ ಆಕ್ಟಿಂಗ್ ಮಾಡಿಕೊಂಡು ಇರಲಿ." ಎಂದೆಲ್ಲ ಕಾಮೆಂಟ್ ಮಾಡಿದವರ ವಿರುದ್ಧ ಶಿವಣ್ಣ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಅಂದ್ಹಾಗೇ ಇದೇ ಭಾಷದಲ್ಲಿ ತಮಿಳಿಗರಿಗೆ ಕನ್ನಡ ಮಾತಾಡುವಂತೆ ಸಮಹೆ ನೀಡಿದ್ದರು. "ಇಲ್ಲಿರೋರು ಕನ್ನಡ ಮಾತನಾಡುತ್ತೀರಾ?" ಎಂದು ಶಿವಣ್ಣ ಕೇಳಿದ್ದರು..? ಅಲ್ಲಿದ್ದ ತಮಿಳಿಗರಿಗೆ ಶಿವಣ್ಣ ಪ್ರಶ್ನೆ ಮಾಡಿದರು. ಆಗ ಅಲ್ಲಿದ್ದ ಎಲ್ಲರೂ ಕನ್ನಡ ಮಾತ್ತಾಡುತ್ತೇವೆಂದು ಹೇಳಿದ್ದರು. ನಾವು ತಮಿಳುನಾಡಿನಲ್ಲಿ ಇದ್ದಾಗ ತಮಿಳು ಮಾತನಾಡುತ್ತೇವೆ, ನೀವು ಇಲ್ಲಿದ್ದೀರಾ ಕನ್ನಡ ಮಾತನಾಡಿ" ಎಂದು ಶಿವಣ್ಣ ಹೇಳಿದ್ದರು.


Click it and Unblock the Notifications











