For Quick Alerts
  ALLOW NOTIFICATIONS  
  For Daily Alerts

  'ಬಂಗಾರದ ಮನುಷ್ಯ' ಪ್ರಚಾರಕ್ಕಾಗಿ ವಿವಿಧ ನಗರಗಳಿಗೆ ಶಿವಣ್ಣ ಭೇಟಿ

  By Suneel
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರ 30 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವಣ್ಣ ನಾಳೆ ಚಿತ್ರದ ಪ್ರಮೋಷನ್ ಗೆ ವಿವಿಧ ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.[ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ]

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಳೆ(ಜೂನ್ 20) ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಚಿತ್ರದ ಪ್ರಮೋಷನ್ ಹಿನ್ನೆಲೆಯಲ್ಲಿ ಭೇಟಿ ನೀಡಲು ನಿರ್ಧಿರಿಸಿದ್ದಾರಂತೆ.

  ಮೈಸೂರಿನ ಲಕ್ಷ್ಮೀ ಥಿಯೇಟರ್ ಗೆ ನಾಳೆ ಮಧ್ಯಾಹ್ನ 1.30 ಕ್ಕೆ ಶಿವಣ್ಣ ಆಗಮಿಸಲಿದ್ದು, ನಂತರ ಮಂಡ್ಯದ ಸಂಜಯ್ ಚಿತ್ರಮಂದಿರ ಮತ್ತು ರಾಮನಗರದ ಶಾನ್ ಚಿತ್ರಮಂದಿರಕ್ಕೆ ಫಸ್ಟ್ ಶೋ ಮತ್ತು ಸೆಕೆಂಡ್ ಶೋ ವೇಳೆಗೆ ಚಿತ್ರ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಶಿವಣ್ಣ ಅಭಿಮಾನಿಗಳು ಈ ಸಮಯಕ್ಕೆ ಥಿಯೇಟರ್ ಬಳಿ ಇದ್ದರೇ ಅವರನ್ನು ನೋಡುವ ಅವಕಾಶ ದೊರೆಯಲಿದೆ.

  'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ಜೊತೆಯಾಗಿ ವಿದ್ಯಾ ಪ್ರದೀಪ್ ಅಭಿನಯಿಸಿದ್ದಾರೆ. ಉಳಿದಂತೆ ಸಾಧು ಕೋಕಿಲ, ಚಿಕ್ಕಣ್ಣ, ಶಿವರಾಮ್, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶರತ್ ಲೋಹಿತಾಶ್ವ ಮತ್ತು ಇತರರು ಇದ್ದಾರೆ.

  ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಯೋಗಿ ಜಿ ರಾಜ್ ನಿರ್ದೇಶನ ಮಾಡಿದ್ದು, ಜಯಣ್ಣ ಮತ್ತು ಬೋಗೇಂದ್ರ ರವರು ನಿರ್ಮಾಣ ಮಾಡಿದ್ದಾರೆ.

  English summary
  Sandalwood Actor Shivarajkumar is all set to visit theaters in Mysore, Mandya and Ramanagara on 20th of June to promote Bangara s/o Bangarada Manushya' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X