ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಚಿತ್ರರಂಗ, ಕಾರ್ಮಿಕರು, ಪ್ರದರ್ಶಕರ ಅನುಕೂಲಕ್ಕಾಗಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಚಿತ್ರರಂಗದ ವಿವಿಧ ವಿಭಾಗಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಚಿತ್ರರಂಗದ ಅಹವಾಲುಗಳನ್ನು ಸರ್ಕಾರ ಮುಂದಿಡಲು ಯೋಜನೆ ರೂಪಿಸುತ್ತಿದ್ದಾರೆ. ಅಂಬರೀಷ್ ಅವರ ಅಗಲಿಕೆ ಬಳಿಕ ಚಿತ್ರರಂಗ ಎದುರಿಸುತ್ತಿದ್ದ ನಾಯಕತ್ವದ ಕೊರತೆಯನ್ನು ಶಿವರಾಜ್ ಕುಮಾರ್ ತುಂಬಿರುವುದು ಎಲ್ಲರಿಗೂ ಸಂತಸ ನೀಡಿದೆ.

Recommended Video

ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಬಳಿಕ ಕನ್ನಡ ಚಿತ್ರರಂಗ ಬಹುತೇಕ ಸ್ತಬ್ಧಗೊಂಡಿತ್ತು. ಚಿತ್ರೀಕರಣಗಳು ಸ್ಥಗಿತಗೊಂಡಿದ್ದವು. ಚಿತ್ರೀಕರಣ ನಡೆಸಲು ಸರ್ಕಾರ ಅನುಮತಿ ನೀಡಿದ ಬಳಿಕ ಸುದೀಪ್ ಸೇರಿದಂತೆ ಅನೇಕರು ಪುನಃ ಶೂಟಿಂಗ್ ಆರಂಭಿಸಿದ್ದಾರೆ. ಈ ನಡುವೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಸಂತಸ ಸುದ್ದಿ ಸಿಕ್ಕಿದೆ. ಅವರ ಬಹುನಿರೀಕ್ಷಿತ ಚಿತ್ರ 'ಭಜರಂಗಿ 2' ಚಿತ್ರೀಕರಣ ಮತ್ತೆ ಶುರುವಾಗಲಿದೆ. ಮುಂದೆ ಓದಿ.

ಆಗಸ್ಟ್ 10ರ ಬಳಿಕ ಚಿತ್ರೀಕರಣ

ಆಗಸ್ಟ್ 10ರ ಬಳಿಕ ಚಿತ್ರೀಕರಣ

ಎ. ಹರ್ಷ ನಿರ್ದೇಶನದ 'ಭಜರಂಗಿ 2' ಚಿತ್ರೀಕರಣ ಆಗಸ್ಟ್ 10ರ ಬಳಿಕ ಮತ್ತೆ ಆರಂಭವಾಗಲಿದೆ. ಮೋಹನ್ ಬಿ ಕೆರೆ ಅವರ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಿಸಲಾಗಿದ್ದು, ಅಲ್ಲಿ ಚಿತ್ರೀಕರಣ ಶುರುವಾಗಲಿದೆ. 'ಭಜರಂಗಿ 2' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

12 ದಿನಗಳ ಚಿತ್ರೀಕರಣ ಬಾಕಿ

12 ದಿನಗಳ ಚಿತ್ರೀಕರಣ ಬಾಕಿ

ಭಜರಂಗಿ 2 ಚಿತ್ರದ ಚಿತ್ರೀಕರಣ ಅಂತಿಮ ಘಟ್ಟದಲ್ಲಿದೆ. ಇನ್ನು ಸುಮಾರು 12 ದಿನಗಳ ಚಿತ್ರೀಕರಣ ಬಾಕಿ ಇದೆ. ಅದರಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಈ ಸ್ಟುಡಿಯೋದಲ್ಲಿ ನಡೆಯಲಿದೆ. ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ಆರು ದಿನಗಳ ಚಿತ್ರೀಕರಣದ ಅಗತ್ಯವಿದೆ.

ಚಿತ್ರೀಕರಣ ಅನಿವಾರ್ಯ

ಚಿತ್ರೀಕರಣ ಅನಿವಾರ್ಯ

ಚಿತ್ರರಂಗದ ಕಾರ್ಮಿಕರ ಒಳಿತಿಗಾಗಿ ಈ ಸಂಕಷ್ಟದ ಸಮಯದಲ್ಲಿಯೂ ಚಿತ್ರೀಕರಣ ನಡೆಸುವುದು ಅನಿವಾರ್ಯವಾಗಿದೆ ಎಂದು ಶಿವರಾಜ್ ಕುಮಾರ್ ಇತ್ತೀಚೆಗೆ ಹೇಳಿದ್ದರು. ಚಿತ್ರೀಕರಣ ನಡೆಸದೆ ತಾವು ಮನೆಯೊಳಗೆ ಕುಳಿತರೆ ಸಿನಿಮಾಗಳನ್ನು ಅವಲಂಬಿಸಿರುವ ಇತರರಿಗೆ ತೊಂದರೆಯಾಗುತ್ತದೆ ಎಂದು ಶಿವಣ್ಣ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ.

ಶಿವಣ್ಣ-ಹರ್ಷ ನಾಲ್ಕನೆಯ ಚಿತ್ರ

ಶಿವಣ್ಣ-ಹರ್ಷ ನಾಲ್ಕನೆಯ ಚಿತ್ರ

ವಜ್ರಕಾಯ ಮತ್ತು ಭಜರಂಗಿ ಚಿತ್ರದ ಬಳಿಕ ಇದು ಎ. ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್‌ನ ಮೂರನೇ ಚಿತ್ರ. ಈ ನಡುವೆ ಇವರಿಬ್ಬರ ಜೋಡಿಯ ಮತ್ತೊಂದು ಸಿನಿಮಾ ಕೂಡ ಸೆಟ್ಟೇರುವ ಸುಳಿವು ದೊರಕಿದೆ. 'ಹದೆರಬೇಡ... ಕ್ಷಮಿಸಬೇಡ...' ಎಂಬ ಸಾಲುಗಳುಳ್ಳ ಶಿವರಾಜ್ ಕುಮಾರ್ ಪೋಸ್ಟರ್ ಅನ್ನು ಜುಲೈ 12ರಂದು ಅವರ ಜನ್ಮದಿನದಂದು ಬಿಡುಗಡೆ ಮಾಡಲಾಗಿತ್ತು. ಭಜರಂಗಿ 2 ಬಳಿಕ ಹರ್ಷ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

More from Filmibeat

English summary
Actor Shivarajkumar to resume work of A Harsha directed Bhajarangi 2 from August 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X