ಟ್ರೈಲರ್‌ಗೂ ಮೊದಲೇ ಹಲ್‌ಚಲ್ ಎಬ್ಬಿಸಿದ 'ಕಬ್ಜ' ಪೋಸ್ಟರ್: ಶಿವಣ್ಣನ ಗ್ರ್ಯಾಂಡ್ ಎಂಟ್ರಿ ಕನ್ಫರ್ಮ್!
'ಕಬ್ಜ' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ನಿರ್ದೇಶಕ ಆರ್. ಚಂದ್ರು ಒಂದೊಂದು ಅಸ್ತ್ರವನ್ನು ರಿವೀಲ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ 'ಕಬ್ಜ'ದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸುತ್ತಾರೆ ಅನ್ನೋ ಸುದ್ದಿ ಜೋರಾಗಿಯೇ ಓಡಾಡಿತ್ತು. ಆದರೆ, ಆ ಸಂದರ್ಭದಲ್ಲಿ ಆರ್ ಚಂದ್ರು ಆಗಲಿ, ಶಿವಣ್ಣ ಆಗಲಿ ಈ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಟ್ಟಿರಲಿಲ್ಲ. ಈಗ 'ಕಬ್ಜ' ಟ್ರೈಲರ್ ರಿಲೀಸ್‌ಗೆ ಇನ್ನೊಂದು ದಿನ ಬಾಕಿ ಇರುವಂತೆಯೇ ಶಿವಣ್ಣ ಸಿನಿಮಾದಲ್ಲಿ ಇರೋದನ್ನು ಆರ್.ಚಂದ್ರು ಕನ್ಫರ್ಮ್ ಮಾಡಿದ್ದಾರೆ.

ಇಲ್ಲಿವರೆಗೂ ಆರ್ ಚಂದ್ರು 'ಕಬ್ಜ' ಸಿನಿಮಾದ ಮೂರು ಪ್ರಮುಖ ಪಾತ್ರಗಳನ್ನಷ್ಟೇ ರಿವೀಲ್ ಮಾಡಿದ್ದರು. ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶ್ರಿಯಾ ಶರಣ್ ಅವರನ್ನು ಮಾತ್ರ ರಿವೀಲ್ ಮಾಡಿದ್ದರು. ಈಗ ಶಿವರಾಜ್‌ಕುಮಾರ್ ಇರುವ ಹೊಚ್ಚ ಹೊಸ ಪೋಸ್ಟರ್ ಅನ್ನು ಹೊರಬಿಡಲಾಗಿದೆ. ಅಲ್ಲಿಂದ ಶಿವಣ್ಣನ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಶಿವಣ್ಣನ ಲುಕ್ ಹಾಗೂ ರೋಲ್ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.
ಶಿವಣ್ಣನ ಪಾತ್ರದ ಬಗ್ಗೆ ಆರ್ ಚಂದ್ರು ಹೇಳಿದ್ದೇನು?
'ಕಬ್ಜ' ಮಲ್ಟಿಸ್ಟಾರ್ ಸಿನಿಮಾ ಅನ್ನೋದು ಕನ್ಫರ್ಮ್ ಆಗೋಗಿದೆ. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆ ಈಗ ಶಿವಣ್ಣ ಕೂಡ ಸಿನಿಮಾದಲ್ಲಿ ಇರೋದು ಚಿತ್ರಕ್ಕೆ ಮತ್ತಷ್ಟು ಪವರ್ ಕೊಟ್ಟಂತಾಗಿದೆ. ಅಷ್ಟಕ್ಕೂ ಈ ಸಿನಿಮಾದಲ್ಲಿ ಶಿವಣ್ಣನ ಪಾತ್ರವೇನು? ಯಾವ ರೀತಿ ಕಾಣಿಸಿಕೊಳ್ಳುತ್ತಾರೆ? ಅನ್ನೋದಕ್ಕೆ ಆರ್ ಚಂದ್ರು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. " ಉಪೇಂದ್ರ ಅವರ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಹೇಗಿದ್ದಾರೋ.. ಹಾಗೇ ಶಿವಣ್ಣ ಕೂಡ ಇದ್ದಾರೆ. ಟ್ರೈಲರ್‌ಗೂ ಮುನ್ನ ಪೋಸ್ಟರ್ ಅನ್ನು ರಿವೀಲ್ ಮಾಡಿದ್ದೇವೆ. ಶಿವಣ್ಣನ ಪಾತ್ರವೇನು? ಹೇಗೆ ಕಾಣಿಸಿಕೊಳ್ಳುತ್ತಾರೆ? ಅನ್ನೋದು ಮುಂದಿನ ದಿನಗಳಲ್ಲಿ ರಿವೀಲ್ ಮಾಡುತ್ತೇವೆ." ಎನ್ನುತ್ತಾರೆ ಚಂದ್ರು.
'ಕಬ್ಜ' ಸಿನಿಮಾ ಭೂಗತಲೋಕದ ಕಥೆಯನ್ನು ಆಧರಿಸಿದ ಸಿನಿಮಾ. ಉಪೇಂದ್ರ ಅಂಡರ್‌ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾ ನಟಿಸಿರೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಶಿವಣ್ಣ ಇರೋದನ್ನು ನಿರ್ದೇಶಕ ಆರ್ ಚಂದ್ರು ಕನ್ಫರ್ಮ್ ಮಾಡಿದ್ದಾರೆ. ಆದರೆ, ಪಾತ್ರವೇನು? ಅನ್ನೋ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.
7 ಭಾಷೆಗೆ 'ಕಬ್ಜ' ಡಬ್
ಆರ್ ಚಂದ್ರ ನಿರ್ದೇಶನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 1950 ರಿಂದ 1980ರ ದಶಕದವರೆಗಿನ ಕಾಲಘಟ್ಟದಲ್ಲಿ ನಡೆಯೋ ಕಥೆ. ಈ ವೇಳೆ ಭಾರತದಲ್ಲಿ ಅಂಡರ್‌ವರ್ಲ್ಡ್ ಹೇಗೆ ಹುಟ್ಟಿಕೊಳ್ತು? ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹೀಗಾಗಿ 50ರ ದಶಕವನ್ನು ಈ ಸಿನಿಮಾದಲ್ಲಿ ಹೇಗೆ ಕಟ್ಟಿಕೊಡಲಾಗಿದೆ? ಅನ್ನೋದನ್ನು ಕಣ್ತುಂಬಿಕೊಳ್ಳಬಹುದು.

'ಕಬ್ಜ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, 7 ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ ಎನ್ನಲಾಗದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒರಿಯಾ ಹಾಗೂ ಬೆಂಗಾಲಿ ಭಾಷೆಗೆ ಈ ಸಿನಿಮಾವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತೆ ಎನ್ನಲಾಗಿದೆ. ಇನ್ನೊಂದು ಕಡೆ ವಿಶ್ವದ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾವನ್ನು ಬಿಡುಗಡೆ ಮಾಡಲು ಚಿಂತನೆ ನಡೆದಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಬಹುದೊಡ್ಡ ತಾರಾಗಣವಿರುವ ಈ ಸಿನಿಮಾದಲ್ಲಿ ಜಗಪತಿಬಾಬು,ರಾಹುಲ್ ದೇವ್,ಅನುಪ್ ರೇವಣ್ಣ,ಕಬೀರ್ ದುಹನ್ ಸಿಂಗ್, ಡ್ಯಾನಿಷ್ ಅಖ್ತರ್, ಪ್ರದೀಪ್ ರಾವತ್, ಮುರಳಿ ಶರ್ಮಾ ಸೇರಿದಂತೆ ಜನಪ್ರಿಯ ನಟರು ಈ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











