125 ಸಿನಿಮಾದ ಬಳಿಕ ಶಿವಣ್ಣ ಸೂಪರ್ ಹೀರೊ: ಸೆಂಚುರಿಸ್ಟಾರ್ ಲುಕ್ ಹೇಗಿರುತ್ತೆ?

ಶಿವರಾಜ್‌ಕುಮಾರ್ ಸುಮ್ಮನೆ ಕೂತಿದ್ದು ನೋಡೇ ಇಲ್ಲ. ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತಿ ಶೂಟಿಂಗ್ ಮಾಡಲೇಬೇಕು. ಈ ಕಾರಣಕ್ಕೆ ಸೆಂಚುರಿ ಸ್ಟಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇದು ಶಿವಣ್ಣನ ಅಭಿಮಾನಿಗಳಿಗೆ ವಿಶೇಷ ಸಿನಿಮಾ ಆಗಲಿದೆ.

'ಅವನೇ ಶ್ರೀಮನ್ನಾರಾಯಣ' ಸಿನಿಮಾದ ನಿರ್ದೇಶಕ ಸಚಿನ್ ರವಿ ಸೆಂಚುರಿ ಸ್ಟಾರ್ ಶಿವಣ್ಣನಿಗೆ ಸಿನಿಮಾ ಮಾಡೋದು ಗೊತ್ತಿತ್ತು. ಆದರೆ, ಶಿವಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಅನ್ನೋ ಕಲ್ಪನೆ ಅವರ ಅಭಿಮಾನಿಗಳಿಗೆ ಇರಲಿಲ್ಲ. ಕೊನೆಗೂ ಸಿನಿಮಾದ ಕಥೆ ಓಕೆ ಆಗಿದ್ದು, ಸೆಂಚುರಿಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸೆಂಚುರಿ ಸ್ಟಾರ್ ಸೂಪರ್ ಹೀರೊ

ಶಿವರಾಜ್‌ಕುಮಾರ್ ಸದ್ಯ 125ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ 125ನೇ ಸಿನಿಮಾ 'ವೇದ' ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಮುಗಿದ ಬಳಿಕ ಶಿವಣ್ಣ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಮುಗಿಸಬೇಕಿದೆ. ಆದಾದ ಬಳಿಕ ಹೊಸ ಸಿನಿಮಾ ಸೆಟ್ಟೇರಲಿದೆ.

Shivarajkumar will play superhero Character in ASN Directorial movie

ಈ ಸಿನಿಮಾದ ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಸೂಪರ್‌ ಹೀರೊ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಶಿವಣ್ಣನನ್ನು ಸೂಪರ್ ಹೀರೊ ಅವತಾರದಲ್ಲಿ ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಬದಲಾಗುತ್ತಾ 'ಅಶ್ವತ್ಥಾಮ' ಟೈಟಲ್ ?

'ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶನ ಮಾಡುವಾಗಲೇ ಸಚಿನ್ ರವಿ ಈ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರಂತೆ. ಆಗಲೇ ಸಿನಿಮಾದ ಟೈಟಲ್ 'ಅಶ್ವತ್ಥಾಮ' ಎಂದು ಅಂದುಕೊಂಡಿದ್ದರು. ಆದ್ರೀಗ ಸಿನಿಮಾ ಟೈಟಲ್ ಬದಲಾಗಬಹುದು ಎನ್ನಲಾಗುತ್ತಿದೆ. ಆದರೆ, ಚಿತ್ರತಂಡ ಮಾತ್ರ ಈ ಸಿನಿಮಾದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸ್ಟೋರಿ ಎನ್ನುತ್ತಿದೆ. ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೊ ಅವತಾರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.

Shivarajkumar will play superhero Character in ASN Directorial movie

ಸಚಿನ್ ರವಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿಲ್ಲ. ಬದಲಿಗೆ ಈ ಸಿನಿಮಾವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇವರೊಂದಿಗೆ ಕಾರ್ಪೊರೇಟ್ ಕಂಪೆನಿಯೊಂದರ ಜೊತೆಗೂಡಿದೆ. ಶಿವಣ್ಣ 125 ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಸೂಪರ್ ಹೀರೊ ಪಾತ್ರವನ್ನು ಮಾಡಿರಲಿಲ್ಲ. ಈ ಬಾರಿ ಸೂಪರ್ ಹೀರೊ ಆಗಿ ಪ್ರೇಕ್ಷಕರಿಗೆ ರಂಜಿಸಲು ಸಜ್ಜಾಗಿದ್ದಾರೆ.

ಕನ್ನಡದ ಮಟ್ಟಿಗೆ ಸೂಪರ್ ಹೀರೊ ಕನ್ಸೆಪ್ಟ್‌ ಇರುವ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಸಿನಿಮಾ ವಿಎಫ್‌ಎಕ್ಸ್‌ ಹೆಚ್ಚಿರಲಿದ್ದು, ನಿರ್ದೇಶಕರು ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅಂದ್ಹಾಗೆ ಸೆಪ್ಟಂಬರ್‌ನಿಂದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.

More from Filmibeat

English summary
Shivarajkumar will play superhero Character in ASN Directorial movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X