ಪೈಲೆಟ್.. ಟ್ರೈನ್ ಮಾಸ್ಟರ್ ಲುಕ್‌ನಲ್ಲಿ ಶಿವಣ್ಣ: ಇದು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಹೌದಾ.. ಅಲ್ವಾ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರೋ ನಟರಲ್ಲಿ ಒಬ್ಬರು ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಲ್ಲಿವರೆಗೂ ಕೇವಲ ಕನ್ನಡದಷ್ಟೇ ಬ್ಯುಸಿಯಾಗಿದ್ದ ಶಿವಣ್ಣ ಈಗ ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಎರಡು ಮೂರು ಹೊಸ ಗೆಟಪ್‌ನಲ್ಲಿರೋ ಫೋಟೊ ವೈರಲ್ ಆಗುತ್ತಿದೆ.
ಶಿವರಾಜ್‌ಕುಮಾರ್ ಹೊಸ ಗೆಟಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊಗಳು ಓಡಾಡುವುದಕ್ಕೆ ಶುರು ಮಾಡುತ್ತಿದ್ದಂತೆ ಅಭಿಮಾನಿಗಳು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಅಂತ ವೈರಲ್ ಮಾಡುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಲುಕ್ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಆದರೆ, ಈ ಗೆಟಪ್ ಯಾವ ಸಿನಿಮಾಗಾಗಿ ಅನ್ನೋ ಗೊಂದಲದಲ್ಲಿದ್ದಾರೆ. ಸದ್ಯ ಶಿವಣ್ಣನ ಮೂರು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿದ್ದು, ಇವುಗಳಲ್ಲಿ ಯಾವುದಾದರೊಂದು ಇರಬಹುದಾ? ಎಂಬ ಅನುಮಾನ ಮೂಡಿದೆ. ಅಸಲಿಗೆ ಶಿವಣ್ಣನ ಈ ಹೊಸ ಗೆಟಪ್‌ನ ಹಿನ್ನೆಲೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಪೈಲೆಟ್-ಟ್ರೈನ್ ಮಾಸ್ಟರ್ ಲುಕ್ ಏನಕ್ಕೆ?
ಶಿವರಾಜ್‌ಕುಮಾರ್ ಚಿಕ್ಕದೊಂದು ಗ್ಯಾಪ್ ಸಿಕ್ಕರೂ ಸಿನಿಮಾ ಮಾಡಿ ಮುಗಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಸುಮ್ಮನೆ ಕೂರದೇ ಇರೋ ಏಕೈಕ ನಟ ಅಂದರೆ ಅದು ಶಿವಣ್ಣ. ಈಗ ಸ್ಟೈಲಿಶ್ ಪೈಲೆಟ್ ಹಾಗೂ ಟ್ರೈನ್ ಮಾಸ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಯಾವ ಸಿನಿಮಾ ಅನ್ನೋ ಪ್ರಶ್ನೆ ಮೂಡಿದೆ.

ಈ ಎರಡೂ ಗೆಟಪ್‌ಗಳಯ ಧನುಷ್ ಜೊತೆ ನಟಿಸುತ್ತಿರುವ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ್ದು ಇರಬಹುದಾ ಅಂತ ಶಿವಣ್ಣನ ಕೆಲವು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಕೆಲವರಂತೂ ಕ್ಯಾಪ್ಟನ್ ಮಿಲ್ಲರ್ ಹ್ಯಾಶ್ ಟ್ಯಾಗ್ ಹಾಕಿ ಸೆಲೆಬ್ರೆಟ್ ಮಾಡುತ್ತಿದ್ದಾರೆ.
ಈ ಎರಡೂ ಗೆಟಪ್ ಸಿನಿಮಾದಲ್ಲ
ಶಿವಣ್ಣ ಕೇವಲ ಸಿನಿಮಾಗಳಲ್ಲಷ್ಟೇ ಬ್ಯುಸಿಯಾಗಿಲ್ಲ. ಜಾಹೀರಾತುಗಳಲ್ಲೂ ನಟಿಸುತ್ತಿದ್ದಾರೆ. ಶಿವಣ್ಣ ಈಗಾಗಲೇ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪೈಲೆಟ್ ಹಾಗೂ ಟ್ರೈನ್ ಮಾಸ್ಟರ್ ಲುಕ್ ಕೊಟ್ಟಿರೋದು ಕೂಡ ಜಾಹೀರಾತಿಗಾಗಿಯೇ ಎಂದು ಮತ್ತೊಂದಿಷ್ಟು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಕ್ಯಾರಾವ್ಯಾನ್ ಒಳಗೆ ಪೈಲೆಟ್ ಲುಕ್ ಕೊಟ್ಟಿರೋ ಫೋಟೊ ಮಸ್ತ್ ಆಗಿದೆ. ಈ ಫೋಟೊದಲ್ಲಿ ಶಿವಣ್ಣ ತೊಟ್ಟಿರೋ ಶರ್ಟ್ ಮೇಲೆ ಶಿವರಾಜ್‌ಕುಮಾರ್ ಅಂತಲೇ ಇದೆ. ಹೀಗಾಗಿ ಇದು ಯಾವುದೇ ಸಿನಿಮಾದ್ದು ಆಗಿರಲು ಸಾಧ್ಯವಿಲ್ಲ. ಅಲ್ಲದೆ ಟ್ರೈನ್ ಮಾಸ್ಟರ್ ಲುಕ್‌ನಲ್ಲೂ ಶಿವಣ್ಣನ ಲುಕ್ ಸಖತ್ ಆಗಿಯೇ ಇದೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ
ಶಿವರಾಜ್‌ಕುಮಾರ್ ಪ್ರತಿ ವರ್ಷದಂತೆ ಈ ಬಾರಿಗೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲೂ ಶಿವಣ್ಣ ಇದ್ದಾರೆ. ಸದ್ಯ ಶಿವಣ್ಣ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.
ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಶೂಟಿಂಗ್ ಆಗುತ್ತಿದೆ. ಹಾಗೇ 'ಘೋಸ್ಟ್' ಸಿನಿಮಾ ಶೂಟಿಂಗ್ ಮುಗಿದು ಬಿಡುಗಡೆಗೆ ಸಜ್ಜಾಗುತ್ತಿದೆ. ಇದರೊಂದಿಗೆ 'ಬೈರತಿ ರಣಗಲ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ಅವರೇ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











