»   » ರಾಜ್ ಸಿನಿಮಾ ಮೌಲ್ಯ ಕಾಪಾಡಿದ ಶಿವಣ್ಣ, ಪುನೀತ್

ರಾಜ್ ಸಿನಿಮಾ ಮೌಲ್ಯ ಕಾಪಾಡಿದ ಶಿವಣ್ಣ, ಪುನೀತ್

Posted By:
Subscribe to Filmibeat Kannada

ವರನಟ ಡಾ. ರಾಜಕುಮಾರ್ ತನ್ನ ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ಕೆಲವೊಂದು ಮೌಲ್ಯವನ್ನು ಕಾಪಾಡಿಕೊಂಡು ಬಂದವರು. ಹಾಗೆಯೇ, ಹೆಚ್ಚುಕಮ್ಮಿ ಚಿತ್ರರಂಗದ ಸಮಸ್ತರಿಗೂ ಆದರ್ಶಪ್ರಾಯರಾದವರು.

ರಾಜ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತ ಉದಾಹರಣೆಗಳು ಬೆರಳಣಿಕೆಯಷ್ಟು. ದಶಕಗಳ ಹಿಂದೆ ಬಂದ ಅವರ ಚಿತ್ರಗಳು ಈಗಲೂ ಸಣ್ಣಪರದೆಯ ಮೇಲೆ ಪ್ರಸಾರವಾದರೆ ಹೊಸ ಚಿತ್ರಗಳು ಹಿನ್ನಡೆ ಅನುಭವಿಸುತ್ತದೆ ಎನ್ನುವುದು ಟಿವಿ ಲೋಕದವರು ಹೇಳುವ ಮಾತು.

ತನ್ನ ಚಿತ್ರಗಳು ಬಿಡುಗಡೆಯಾಗುವ ವೇಳೆ ಕನ್ನಡದ ಇತರ ಯಾವುದೇ ಪ್ರಮುಖ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದರೆ ನಿರ್ಮಾಪಕರು ಮತ್ತು ಹಂಚಿಕೆದಾರರ ಜೊತೆ ಮಾತುಕತೆ ನಡೆಸಿ ತನ್ನ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದರು. (ಆರ್ಯನ್ ಟ್ರೇಲರ್: ಪಿಟಿ ಉಷಾ ಸ್ಟೈಲಲ್ಲಿ ರಮ್ಯಾ ಓಟ)

ಆ ಮೂಲಕ, ನಿರ್ಮಾಪಕರು ಮತ್ತು ಹಂಚಿಕೆದಾರರಿಗೆ ನಷ್ಟ ಆಗಬಾರದು ಎನ್ನುವ ಮುಂದಾಲೋಚನೆಯನ್ನು ರಾಜ್ ಹೊಂದಿದ್ದರು. ಈಗ ಅವರಂತೆಯೇ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ತಮ್ಮಿಬ್ಬರ ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾಗುವುದಕ್ಕೆ ಬ್ರೇಕ್ ಹಾಕಿದ್ದಾರೆ.

ಭಜರಂಗಿ ನಂತರ ಬರುತ್ತಿರುವ ಶಿವಣ್ಣ ಚಿತ್ರ

ಶಿವಣ್ಣ ಅವರ ಅಂದರ್ ಬಾಹರ್ ಮತ್ತು ಕಡ್ಡಿಪುಡಿ ಚಿತ್ರಗಳು ನಿರೀಕ್ಷಿತ ಫಲಿತಾಂಶ ನೀಡದೇ ಇದ್ದಾಗ ಬಿಡುಗಡೆಯಾದ ಚಿತ್ರ ಭಜರಂಗಿ. ಹರ್ಷ ನಿರ್ದೇಶನದ ಈ ಚಿತ್ರ ಭರ್ಜರಿ ಪ್ರದರ್ಶನಗೊಂಡು ಶಿವಣ್ಣ ಸಿನಿಮಾ ಜೀವನಕ್ಕೆ ಹೊಸ ತಿರುವು ನೀಡಿತ್ತು. ಇದಾದ ನಂತರ ಬರುತ್ತಿರುವ ಚಿತ್ರ ಆರ್ಯನ್. ಹಾಗಾಗಿ ಈ ಚಿತ್ರಕ್ಕೆ ಭಾರೀ ಹೈಪ್ ಸೃಷ್ಟಿಯಾಗಿದೆ.

ಇತ್ತ ಪುನೀತ್ ಅಭಿನಯದ ಪವರ್ ***

ನಿನ್ನಿಂದಲೇ ಚಿತ್ರ ದಯನೀಯವಾಗಿ ಸೋತ ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಪವರ್ ***' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕ್ಕೆ ಶೀರ್ಷಿಕೆ ಅಂತಿಮಗೊಳಿಸಲು ಹೆಣಗಾಡಿದ್ದ ಈ ಚಿತ್ರದ ಮೇಲೂ ಭಾರೀ ನಿರೀಕ್ಷೆಯಿದೆ.

ಮುಂದಿನ ವಾರ ಬಿಡುಗಡೆ

ಆರ್ಯನ್ ಮತ್ತು ಪವರ್ ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದವು. ಆದರೆ ಕನ್ನಡ ಚಿತ್ರೋದ್ಯಮದ ಸಣ್ಣ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ಎರಡೂ ಚಿತ್ರದ ನಿರ್ಮಾಪಕರು ಮತ್ತು ಹಂಚಿಕೆದಾರರು ಒಂದೇ ವಾರದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ.

ಪವರ್ ಚಿತ್ರಕ್ಕೆ ಮುಂದಕ್ಕೆ

ಆರ್ಯನ್ ಚಿತ್ರ ಬಿಡುಗಡೆಯಾದ ಒಂದು ಅಥವಾ ಎರಡು ವಾರದ ನಂತರ ಪವರ್ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪುನೀತ್ ರಾಜಕುಮಾರ್ ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವುದು ಸದ್ಯದ ಮಾಹಿತಿ.

ಆರ್ಯನ್ ಮತ್ತು ಪವರ್

ಶಿವರಾಜ್ ಕುಮಾರ್, ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ ಆರ್ಯನ್ ಚಿತ್ರ ಬಹುತೇಕ ಆಗಸ್ಟ್ ಒಂದರಂದು ಬಿಡುಗಡೆಯಾಗಲು ಸಿದ್ದವಾಗಿದೆ. ಇದಾದ ಒಂದು ವಾರದ ನಂತರ ಅಂದರೆ ವರಮಹಾಲಕ್ಷ್ಮೀ ಹಬ್ಬದಂದು ಪವರ್ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

English summary
Shivraj Kumar's Aryan movie and Puneeth Rajkumar's Power *** movies not clashing each other.
Please Wait while comments are loading...