ಕನ್ನಡದ ಮೊದಲ ಬೈಕರ್ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಹೀರೋ; 'ಫಾದರ್ಸ್ ಡೇ' ಕ್ಲೈಮ್ಯಾಕ್ಸ್ ಹೈಲೈಟ್

ಕನ್ನಡದ ಕಿರುತೆರೆಯಲ್ಲಿ ವೀಕ್ಷಕರನ್ನು ರಂಜಿಸಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು'. ಇದರಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ನಟ ಅಜಿತ್ ಹಂದೆ ಅವರ ಜೋಡಿ ಮೋಡಿ ಮಾಡಿತ್ತು. ವೀಕ್ಷಕರಿಗೆ ಈ ಜೋಡಿಯ ಪ್ರೀತಿ, ವಾತ್ಸಲ್ಯ, ಕುಟುಂಬದ ಮೇಲಿನ ಪ್ರೀತಿ ಎಲ್ಲವೂ ಇಷ್ಟ ಆಗಿತ್ತು. ಈ ಜೋಡಿ ಒಂಥರಾ ಆದರ್ಶದಂತೆ ಕಂಡಿತ್ತು.

ಅದರಲ್ಲೂ ಅಜಿತ್ ಹಂದೆಯವರ ಪಾತ್ರವಂತೂ ವೀಕ್ಷಕರ ಮನಸ್ಸಿನಲ್ಲಿ ಕೂತುಬಿಟ್ಟಿದೆ. 'ಶ್ರೀರಸ್ತು ಶುಭಮಸ್ತು' ಮುಗಿದ ಮೇಲೆ ಇವರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅದರಲ್ಲೊಂದು 'ಫಾದರ್ಸ್ ಡೇ'. ಇತ್ತೀಚೆಗೆ ಫಾದರ್ಸ್ ಡೇ ದಿನದಂದೇ ಈ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಪ್ರಶಂಸೆಗಳು ವ್ಯಕ್ತವಾಗಿದೆ.

Shrirasthu Shubhamasthu serial actor Ajith Hande in lead role in Fathers Day movie

'ಫಾದರ್ಸ್‌ ಡೇ' ಕನ್ನಡ ಚಿತ್ರರಂಗಕ್ಕೆ ಒಂದು ವಿಶಿಷ್ಟ ಸಿನಿಮಾ. ಟ್ರೈಲರ್‌ನಲ್ಲಿ ತಂದೆ-ಮಗನ ಬಾಂಧವ್ಯ ಸಾರುವ ಸಿನಿಮಾ ಎನಿಸಿದರೂ, ಬೈಕ್ ಪ್ರಿಯರಿಗೆ ಇದು ಸಿಕ್ಕಾಪಟ್ಟೆ ಇಷ್ಟ ಆಗಲಿದೆ. ಯಾಕಂದ್ರೆ, ಇದು ಕನ್ನಡದ ಮೊದಲ ಬೈಕರ್ ಸಿನಿಮಾ. ಹೀಗಾಗಿ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 'ಶ್ರೀರಸ್ತು ಶುಭಮಸ್ತು' ಬಳಿಕ ಅಜಿತ್ ಹಂದೆ ಸಿನಿಮಾದಲ್ಲೂ ಯಶಸ್ಸು ಗಳಿಸುತ್ತಾರಾ? ಅನ್ನೋ ಕುತೂಹಲವಿದೆ.

ಈ ಸಿನಿಮಾವನ್ನು ಇಲೆವೆನ್ ಎಲಿಮೆಂಟ್ಸ್ ಸಂಸ್ಥೆಯಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ ಇವರೇ ನಿರ್ದೇಶನ ಕೂಡ ಮಾಡಿದ್ದಾರೆ. 'ಫಾದರ್ಸ್ ಡೇ' ಟ್ರೈಲರ್‌ನಲ್ಲಿ ತಂದೆ ಹಾಗೂ ಮಗನ ಬಾಂಧವ್ಯವನ್ನು ಸಿನಿಮಾ ಸಾರುತ್ತಿದೆ. ಟ್ರೇಲರ್ ನೋಡಿದವರಿಗೂ ಅಷ್ಟೇ ಇಷ್ಟ ಆಗಿದೆ. ಇದು ಕನ್ನಡದ ಮೊದಲ ಬೈಕರ್ ಚಿತ್ರವೂ ಆಗಿದ್ದರಿಂದ ಬೈಕ್ ಸವಾರಿ ಇಷ್ಟ ಪಡುವವರಿಗಂತೂ ಈ ಸಿನಿಮಾ ಖಂಡಿತಾ ಇಷ್ಟ ಆಗುತ್ತೆ.

ತಂದೆಯ ಪಾತ್ರದಲ್ಲಿ ಅಜಿತ್ ಹಂದೆ ಕಾಣಿಸಿಕೊಂಡರೆ, ಮಗನ ಪಾತ್ರದಲ್ಲಿ ಹರ್ಷಿಲ್ ಕೌಶಿಕ್ ನಟಿಸಿದ್ದಾರೆ. ಇವರು'ಆಚಾರ್ & ಕೋ', 'ಸಪ್ತಸಾಗರದಾಚೆ ಎಲ್ಲೋ',‌ 'ಅನಾಮಾಧೇಯ ಅಶೋಕ್ ಕುಮಾರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿರುವ ಹರ್ಷಿಲ್ ಕೌಶಿಕ್ ವೃತ್ತಿ ಬದುಕಿಗೆ ಇದು ವಿಭಿನ್ನ ಸಿನಿಮಾ ಆಗಬಹುದು. ಇವರೊಂದಿಗೆ ಗಾಯಕ ALL OK, ಸಾಮ್ರಾಗ್ನಿ ರಾಜನ್, ಕ್ಷೇಮಾ ಶೆಟ್ಟಿ, ಬಾಸ್ಕಿ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಈ ಸಿನಿಮಾದಲ್ಲಿದೆ.

ಕನ್ನಡದ ಮೊದಲ ಬೈಕರ್ ಸಿನಿಮಾ ಆಗಿದ್ದರಿಂದ ಈ ಸಿನಿಮಾ ಇಬ್ಬರು ಬೈಕರ್‌ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರ ನಡುವಿನ ಕಥೆಯೂ ಎಲ್ಲರ ಗಮನ ಸೆಳೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ 'ಫಾದರ್ಸ್ ಡೇ' ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಡಿದೆ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ನಿರ್ದೇಶಕ ರಾಜಾರಾಮ್ ರಾಜೇಂದ್ರನ್ ಅವರೇ ಈ ಸಿನಿಮಾ ಕಥೆ, ಚಿತ್ರಕಥೆ ಬರೆದಿದ್ದು, ಕುತೂಹಲ ಕೆರಳಿಸಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಫಾದರ್ಸ್‌ ಡೇ' ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಸಿನಿಮಾದ ಪ್ರಚಾರ ಶುರುವಾಗಿದ್ದು, ಟ್ರೇಲರ್ ಸಹ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ವೀಕ್ಷಕರ ಕಾತುರವನ್ನು ಹೆಚ್ಚಿಸಿದೆ‌. ಜ್ಯೋಲ್ಸ್ನಾ ಪ್ಯಾನಿಕರ್ ಎಡಿಟಿಂಗ್ ಹಾಗೂ ಜೋ ಪ್ಯಾನಿಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ 'ಬ್ಲೂಸ್' ಶೈಲಿಯಿಂದ ಪ್ರೇರಿತವಾದ ಸಂಗೀತವಿದೆ. ಈ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದು, ಕನ್ನಡದಲ್ಲಿ ಇದೇ ಮೊದಲ ಬಾರಿ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ರಾಜಾರಾಮ್ ರಾಜೇಂದ್ರನ್ ಹೇಳಿಕೊಂಡಿದ್ದಾರೆ. ಪಿ.ವಿ.ಆರ್ - ಐನಾಕ್ಸ್ ಪಿಕ್ಚರ್ಸ್ ಮೂಲಕ 'ಫಾದರ್ಸ್ ಡೇ' ಸಿನಿಮಾ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.

Read more about: kannada movie bike sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X