'ಕಬ್ಜ' ಸೆಟ್ಟಿಗೆ ಎಂಟ್ರಿಕೊಟ್ಟ ಶ್ರಿಯಾ ಸರಣ್: ಇಲ್ಲಿವೆ ಎಕ್ಸ್‌ಕ್ಲ್ಯೂಸಿವ್ ಫೋಟೊಗಳು
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗಿರುವುದು ಗೊತ್ತೇ ಇದೆ. ಸಿನಿಮಾ ಸೆಟ್ಟೇರಿದ ದಿನದಿಂದ ಈ ಸಿನಿಮಾ ಕುತೂಹಲ ಕೆರಳಿಸುತ್ತಲೇ ಇದೆ. ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುತ್ತಿರುವ ನಿರ್ದೇಶಕ ಆರ್ ಚಂದ್ರು ಮತ್ತೆ 'ಕಬ್ಜ' ಶೂಟಿಂಗ್ ಆರಂಭ ಮಾಡಿದ್ದಾರೆ. ಈಗಾಗಲೇ 'ಕಬ್ಜ' ಚಿತ್ರಕ್ಕೆಂದೆ ಹಾಕಿರುವ ಸೆಟ್ಟಿನಲ್ಲಿ ಶೂಟಿಂಗ್ ಶುರುವಾಗಿದೆ. ಇಷ್ಟು ದಿನ ಕಾದಿದ್ದಕ್ಕೂ ಈ ಚಿತ್ರಕ್ಕೆ ಒಬ್ಬ ಪ್ಯಾನ್ ಇಂಡಿಯಾ ಹೀರೊಯಿನ್ ಸಿಕ್ಕಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ಗೆ ಶ್ರಿಯಾ ಸರಣ್ ಆಯ್ಕೆ ಆಗಿದ್ದಾರೆ ಎಂದು ಫಿಲ್ಮಿ ಬೀಟ್‌ನಲ್ಲಿ ತಿಳಿಸಿದ್ದೆವು. ಅದರಂತೆ 'ಕಬ್ಜ' ತಂಡಕ್ಕೆ ಶ್ರಿಯಾ ಸರಣ್ ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾಗೆ ಸೂಟ್ ಆಗುವಂತಹ ಹೀರೊಯಿನ್ ಕರೆದುಕೊಂಡು ಬರಲು ಪಣತೊಟ್ಟು ನಿಂತಿದ್ದ ಆರ್ ಚಂದ್ರು ಗೆದ್ದಿದ್ದಾರೆ. ಶ್ರಿಯಾ ಸರಣ್ ಈಗ ರಾಜಮೌಳಿ ನಿರ್ದೇಶಿಸಿದ RRR ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಅಜಯ್ ದೇವಗನ್ ಜೊತೆನೂ ಬಹುಕೋಟಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇದ್ದರೂ, ಶ್ರಿಯಾ ಸರಣ್ ಕನ್ನಡದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟು ಸೆಟ್ಟಿಗೆ ಎಂಟ್ರಿಕೊಟ್ಟಿದ್ದಾರೆ.

ಶ್ರಿಯಾ ಸರಣ್ ಎಂಟ್ರಿ
'ಕಬ್ಜ' ಸಿನಿಮಾದಲ್ಲಿ ನಾಯಕಿಯರು ಇರುತ್ತಾರಾ? ಇದೂವರೆಗೂ ಯಾಕೆ ಹೀರೊಯಿನ್ ಅನ್ನು ಕರೆದುಕೊಂಡು ಬಂದಿಲ್ಲ. ಇಂತಹದ್ದೇ ಒಂದಿಷ್ಟು ಅನುಮಾನಗಳು ಎದುರಾಗಿತ್ತು. ಅದಕ್ಕೆ ತಕ್ಕಂತೆ ಪ್ಯಾನ್ ಇಂಡಿಯಾ ನಾಯಕಿಯನ್ನೇ ಕರೆದುಕೊಂಡು ಬಂದಿದ್ದಾರೆ. ಶ್ರಿಯಾ ಸರಣ್ ಫೋಷನ್ ಶೂಟಿಂಗ್ ಈಗಾಗಲೇ ಶುರು ಕೂಡ ಮಾಡಿದ್ದಾರೆ. ಈ ವಿಷಯವನ್ನು ಆರ್. ಚಂದ್ರು ರಿವೀಲ್ ಮಾಡಿದ್ದು, ಶ್ರಿಯಾ ಸರಣ್ ಫೋಟೊಗಳನ್ನೂ ರಿವೀಲ್ ಮಾಡಿದ್ದಾರೆ. ಈ ಮೂಲಕ 'ಕಬ್ಜ'ಗೆ ಒಬ್ಬ ನಾಯಕಿ ಎಂಟ್ರಿ ಕೊಟ್ಟಂತಾಗಿದೆ.

ಇಬ್ಬರಲ್ಲಿ ಒಬ್ಬರು ನಾಯಕಿ ಮಾತ್ರ ಆಯ್ಕೆ
'ಕಬ್ಜ' ಸಿನಿಮಾಗೆ ಇಬ್ಬರು ನಾಯಕಿಯರು. ರಿಯಲ್‌ಸ್ಟಾರ್ ಉಪೇಂದ್ರಗೆ ಒಬ್ಬರು ನಾಯಕಿಯಾದರೆ, ಮತ್ತೊಬ್ಬರು ಕಿಚ್ಚ ಸುದೀಪ್‌ಗೆ ನಾಯಕಿ. ಆದರೆ, ಚಿತ್ರತಂಡ ಕೇವಲ ಶ್ರಿಯಾ ಸರಣ್ ಹೆಸರನ್ನು ಮಾತ್ರ ರಿವೀಲ್ ಮಾಡಿದೆ. ಕಿಚ್ಚ ಸುದೀಪ್‌ಗೆ ಯಾರು ಹೀರೊಯಿನ್ ಅನ್ನುವುದನ್ನು ಇನ್ನೂ ರಿವೀಲ್ ಮಾಡಿಲ್ಲ. ಇನ್ನೊಬ್ಬ ನಟಿ ಕೂಡ ಮುಂಬೈ ಮೂಲದವರು ಎಂಬ ಸುಳಿವು ಸಿಕ್ಕಿದೆ. "ಇವರೂ ಕೂಡ ಪ್ಯಾನ್ ಇಂಡಿಯಾ ಹೀರೊಯಿನ್. ಸಿನಿಮಾ ಸೆಟ್ಟಿಗೆ ಬರುವವರೆಗೂ ಹೆಸರು ರಿವೀಲ್ ಮಾಡುವಂತಿಲ್ಲ. ಅವರೇ ಬಂದು ಟ್ವೀಟ್ ಮೂಲಕ ಬಹಿರಂಗ ಪಡಿಸುತ್ತಾರೆ. ನಮ್ಮ ನಡುವೆ ಇಂತಹದ್ದೊಂದು ಒಡಂಬಡಿಕೆ ಮಾಡಿಕೊಂಡಿದ್ದೇವೆ." ಎನ್ನುತ್ತಾರೆ ನಿರ್ದೇಶಕ ಆರ್. ಚಂದ್ರು.

ಶ್ರಿಯಾ ಸರಣ್ 20 ದಿನ ಶೂಟಿಂಗ್
'ಕಬ್ಜ' ಸೆಟ್ಟಿಗೆ ಎಂಟ್ರಿಕೊಟ್ಟಿರುವ ಶ್ರಿಯಾ ಸರಣ್ ಈ ಪ್ಯಾನ್ ಇಂಡಿಯಾ ಸಿನಿಮಾಗೆ 20 ದಿನ ಕಾಲ್ ಶೀಟ್ ಕೊಟ್ಟಿದ್ದಾರೆ. ಇಷ್ಟು ದಿನಗಳ ಒಳಗೆ ನಿರ್ದೇಶಕ ಆರ್ ಚಂದ್ರು ಶ್ರಿಯಾ ಸರಣ್ ಭಾಗದ ಚಿತ್ರೀಕರಣವನ್ನು ಮುಗಿಸಬೇಕಿದೆ. ಹೀಗಾಗಿ ಇಂದಿನಿಂದ (ಮಾರ್ಚ್ 07) ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. "ಶ್ರಿಯಾ ಸರಣ್ ತುಂಬಾನೇ ಬ್ಯುಸಿ ಇದ್ದಾರೆ. ರಾಜಮೌಳಿಯ RRR ಸಿನಿಮಾದಲ್ಲಿ ನಟಿಸಿದ ಮೇಲಂತೂ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಜಯ್ ದೇವಗನ್ ನಟಿಸುತ್ತಿರುವ 300 ಕೋಟಿ ಬಜೆಟ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ನಟಿ ನಮ್ಮ ಸಿನಿಮಾದಲ್ಲೂ ನಟಿಸುತ್ತಿರುವುದು ಖುಷಿ ಕೊಟ್ಟಿದೆ." ಎನ್ನುತ್ತಾರೆ ನಿರ್ದೇಶಕ ಆರ್. ಚಂದ್ರು.

ಹೀರೊಯಿನ್ ಪೋಷನ್ ಮಾತ್ರ ಬಾಕಿ
ಬಹಳ ದಿನಗಳಿಂದ 'ಕಬ್ಜ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಸಿನಿಮಾಗೆ ಒಬ್ಬೊಬ್ಬರೇ ಆಯ್ಕೆಯಾಗಿದ್ದಾರೆ. " ಹೀರೊಯಿನ್ ಪೋಷನ್ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಶ್ರಿಯಾ ಸರಣ್ ಈಗಾಗಲೇ ಶೂಟಿಂಗ್‌ಗೆ ಹಾಜರಾಗಿದ್ದಾರೆ. ಮತ್ತೊಬ್ಬ ನಾಯಕಿಯ ಪೋಷನ್ ಮುಗಿದರೆ, ಸಿನಿಮಾ ಮುಗಿಯುತ್ತೆ. ಉಳಿದಂತೆ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಭಾಗದ ಚಿತ್ರೀಕರಣ ಮುಗಿದಿದೆ." ಎನ್ನುತ್ತಾರೆ ಆರ್ ಚಂದ್ರು. ಆದರೆ, ಮತ್ತೊಬ್ಬ ನಾಯಕಿ ಯಾರು? ಅವರ ಎಂಟ್ರಿ ಯಾವಾಗ? ಆ ಶೂಟಿಂಗ್ ಯಾವಾಗ ಮುಗಿಯುತ್ತೆ? ಅನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗಿದೆ.


Click it and Unblock the Notifications











