ದರ್ಶನ್ ಸೋದರಳಿಯನ ಜೊತೆ ಶ್ರುತಿ-ಶರಣ್‌ ಮನೆ ಮಗಳ 'ಕೋಳಿ ಜಗಳ'

ಸ್ಯಾಂಡಲ್‌ವುಡ್‌ಗೆ ಹೊಸ ತಲೆಮಾರುಗಳ ಆಗಮನವಾಗುತ್ತಿದೆ. ಇತ್ತೀಚೆಗೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಗ್ರ್ಯಾಂಡ್ ಎಂಟ್ರಿ ಆಗಿದೆ. ದರ್ಶನ್ 56ನೇ ಸಿನಿಮಾಗೆ ಇವರೇ ಹೀರೊಯಿನ್. ಕೆಲವು ದಿನಗಳ ಹಿಂದಷ್ಟೇ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಕೂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇವರೊಂದಿಗೆ ಶರಣ್ ಹಾಗೂ ಸಹೋದರಿ ಶ್ರುತಿ ಕುಟುಂಬ ಮೂರನೇ ತಲೆಮಾರಿನ ಮಕ್ಕಳು ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಶರಣ್ ಪುತ್ರ ಅವರದ್ದೇ 'ಗುರು ಶಿಷ್ಯರು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಈಗ ಇದೇ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ. ಪಕ್ಕಾ ದೇಸಿ ಲುಕ್‌ನಲ್ಲಿರೋ ಈ ಬ್ಯೂಟಿ ಕನ್ನಡ ಚಿತ್ರರಂಗಕ್ಕೆ ಅಸೆಟ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಅಂದ್ಹಾಗೆ ದರ್ಶನ್ ಸೋದರಳಿಯನ ಜೊತೆ ಕೋಳಿ ಜಗಳ ಮಾಡಿಕೊಂಡು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ನಟಿಯ ಹೆಸರೇನು? ಹಿನ್ನೆಲೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶ್ರುತಿ-ಶರಣ್ ಸಹೋದರಿಯ ಪುತ್ರ ಎಂಟ್ರಿ

ಶ್ರುತಿ-ಶರಣ್ ಸಹೋದರಿಯ ಪುತ್ರ ಎಂಟ್ರಿ

ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಶ್ರುತಿ ಹಾಗೂ ಶರಣ್ ಕುಟುಂಬದ ಮೂರನೇ ತಲೆಮಾರಿನ ನಟಿ ಕೀರ್ತಿ ಕೃಷ್ಣ. ಅಂದ್ಹಾಗೆ ಇವರು ಶರಣ್ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಪುತ್ರಿ. ಈಗಾಗಲೇ ದೊಡ್ಡಮ್ಮ ಶ್ರುತಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಇನ್ನು ಮಾವ ಶರಣ್ ಸ್ಯಾಂಡಲ್‌ವುಡ್‌ನ ಅಧ್ಯಕ್ಷರು. ಇವರ ಮನೆ ಮಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬರೋದಕ್ಕೆ ಸಾಕಷ್ಟು ಮಂದಿ ನಿರ್ದೇಶಕರು ಪ್ರಯತ್ನ ಪಟ್ಟಿದ್ದರು. ಕೊನೆಗೂ ಕೀರ್ತಿ ಕೃಷ್ಣ ಸಿನಿಮಾವನ್ನು ಮೊದಲ ಸಿನಿಮಾಗೆ ಒಪ್ಪಿಗೆ ಕೊಟ್ಟಿದ್ದಾರೆ. ಅದುವೇ 'ಧರಣಿ'.

ದರ್ಶನ್ ಸೋದರಳಿಯನ ಜೊತೆ ಕೀರ್ತಿ ಕೃಷ್ಣ 'ಧರಣಿ'

ದರ್ಶನ್ ಸೋದರಳಿಯನ ಜೊತೆ ಕೀರ್ತಿ ಕೃಷ್ಣ 'ಧರಣಿ'

'ಧರಣಿ' ಸಿನಿಮಾದಲ್ಲಿ ದರ್ಶನ್ ಸೋದರಳಿಯ ಮನೋಜ್ ಲೀಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಆ ಸಿನಿಮಾ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಇದೊಂದು ಕೋಳಿ ಪಂದ್ಯ ಹಿನ್ನೆಲೆಯಲ್ಲಿ ಕಾಡುವ ಪ್ರೇಮ ಕಥೆ. ಈ ಗ್ರಾಮೀಣ ಸೊಗಡಿನ ಕಮರ್ಷಿಯಲ್ ಸಿನಿಮಾದಲ್ಲಿ ಮನೋಜ್ ಜೊತೆ ಕೀರ್ತಿ ಕೃಷ್ಣ ಪ್ರೀತಿಯ ಕಾದಾಟಕ್ಕೆ ಸಜ್ಜಾಗಿದ್ದಾರೆ.

ದೊಡ್ಡಮ್ಮ ಶೃತಿ ಜೊತೆ ಕೀರ್ತಿ ಕೃಷ್ಣ ನಟನೆ

ದೊಡ್ಡಮ್ಮ ಶೃತಿ ಜೊತೆ ಕೀರ್ತಿ ಕೃಷ್ಣ ನಟನೆ

ಕೀರ್ತಿ ಕೃಷ್ಣ ನಾಯಕಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದೇನೆ. ಆದರೆ, ಸುಮಾರು 12 ವರ್ಷಗಳ ಹಿಂದೆನೇ ದೊಡ್ಡಮ್ಮ ಶ್ರುತಿ ಹಾಗೂ ರಾಮ್‌ ಕುಮಾರ್ ನಟಿಸಿದ್ದ ʻಶ್ರೀ ನಾಗ ಶಕ್ತಿʼ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ಆ ಬಳಿಕ ವಿದ್ಯಾಭ್ಯಾಸದ ಹಿನ್ನೆಲೆಯಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಅಂದ್ಹಾಗೆ ಕೀರ್ತಿ ಕೃಷ್ಣ ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌fಮೆಂಟ್ ಕಾಲೇಜಿನಲ್ಲಿ ಕೀರ್ತಿ ಬಿಬಿಎ ಮುಗಿಸಿದ್ದಾರೆ. ಈಗ ಶಿಕ್ಷಣ ಮುಗಿದ ಬೆನ್ನಲ್ಲೇ ಕೀರ್ತಿ ಕೃಷ್ಣ ಸಿನಿಮಾದಲ್ಲಿ ನಟಿಸುವುದಕ್ಕೆ ಮನಸ್ಸು ಮಾಡಿದ್ದಾರೆ.

'ಅನಂತು ವರ್ಸಸ್ ನುಸ್ರತ್' ನಿರ್ದೇಶಕ ಆಕ್ಷನ್ ಕಟ್

'ಅನಂತು ವರ್ಸಸ್ ನುಸ್ರತ್' ನಿರ್ದೇಶಕ ಆಕ್ಷನ್ ಕಟ್

ವಿನಯ್ ರಾಜ್‌ಕುಮಾರ್ ಅಭಿನಯದ 'ಅನಂತು ವರ್ಸಸ್ ಸುಸ್ರುತ್' ಸಿನಿಮಾ ನಿರ್ದೇಶಿಸಿದ್ದ ಸುಧೀರ್ ಶಾನುಭೋಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಹೀಗಾಗಿ ಮತ್ತೊಂದು ಡಿಸೆಂಟ್ ಸಿನಿಮಾ ಪ್ರೇಕ್ಷಕರಿಗೆ ಸಿಗುವ ಎಲ್ಲಾ ಸಾಧ್ಯತೆಗಳೂ ಇವೆ. ಅಂದ್ಹಾಗೆ ಶ್ರುತಿ ಹಾಗೂ ಶರಣ್ ತಂದೆ ತಾಯಿಯಂದಿರೂ ಕೂಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಹೆಸರು ಮಾಡಿದವರೇ. ಹಾಗೇ ಶ್ರುತಿ ಹಾಗೂ ಶರಣ್ ಕೂಡ ಜನಪ್ರಿಯ ಕಲಾವಿದರೇ, ಈಗ ಇವರ ಮೂರನೇ ತಲೆಮಾರು ಕೀರ್ತಿ ಕೃಷ್ಣ ಎಂಟ್ರಿ ಕೊಡುತ್ತಿದ್ದಾರೆ. ಇವರಿಗೆ ಹೇಗೆ ಸಕ್ಸಸ್ ಸಿಗುತ್ತೆ ಅನ್ನೋದನ್ನು ಚಿತ್ರರಂಗ ಎದುರು ನೋಡುತ್ತಿದೆ.

More from Filmibeat

English summary
Shruti And Sharan Younger Sister Usha Krishna Daughter Keerthi Krishna Debut Movie Dharani, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X