ತಮಿಳು 'ಲೂಸಿಯಾ' ಚಿತ್ರಕ್ಕೆ ಕಮಲ್ ಚಿತ್ರ ಶೀರ್ಷಿಕೆ

By ಜೇಮ್ಸ್ ಮಾರ್ಟಿನ್

ಪವನ್ ಕುಮಾರ್ ನಿರ್ದೇಶನದ ನೀನಾಸಂ ಸತೀಶ್, ಶ್ರುತಿ ಹರಿಹರನ್ ನಟನೆಯ ಲೂಸಿಯಾ ಚಿತ್ರ ತಮಿಳಿನಲ್ಲಿ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ಹಳೆ ಚಿತ್ರದ ಹೆಸರನ್ನೇ ಆಯ್ಕೆ ಮಾಡಲಾಗಿದೆ. ತನ್ನ ಚಿತ್ರಕ್ಕೆ ಕಮಲ್ ಅವರ ಹೆಸರು ಸಿಕ್ಕಿರುವುದಕ್ಕೆ ನಾಯಕ ನಟ ಸಿದ್ದಾರ್ಥ್ ಸೂರ್ಯನಾರಾಯಣ್ ಸಕತ್ ಖುಷಿಯಲ್ಲಿದ್ದಾರೆ.

ಈಗಿನ್ನೂ ಜಿಗರ್ತಾಂಡ ಚಿತ್ರದ ಯಶಸ್ಸಿನಿಂದ ಸುಧಾರಿಸಿಕೊಳ್ಳುತ್ತಿರುವ ಸಿದ್ದಾರ್ಥ್ ಮುಂದಿನ ಚಿತ್ರ ಕಾವಿಯಾ ತಲೈವನ್ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಟನೆ ಕನ್ನಡದ ಲೂಸಿಯಾ ಚಿತ್ರ ತಮಿಳಿನಲ್ಲಿ ಪೋಸ್ಟ್ ಪ್ರೊಡೆಕ್ಷನ್ ಹಂತದಲ್ಲಿದ್ದು, ಚಿತ್ರದ ಬಗ್ಗೆ ಸಿದ್ದಾರ್ಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಈ ಚಿತ್ರಕ್ಕೆ ಕನ್ನಡತಿ ದೀಪಾ ಸನ್ನಿಧಿ ನಾಯಕಿ.

Siddharth’s Lucia gets Kamal’s title

ಮೇರು ನಟ ಕಮಲ್ ಹಾಸನ್ ದ್ವಿಪಾತ್ರದಲ್ಲಿ ನಟಿಸಿದ್ದ 'ಎನಕ್ಕುಲ್ ಒರುವನ್' ಚಿತ್ರದ ಹೆಸರನ್ನು ತಮಿಳಿನ ಲೂಸಿಯಾಗೆ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ಪ್ರಸಾದ್ ಹೇಳಿದ್ದಾರೆ. ಈ ಚಿತ್ರಕ್ಕೆ ಈ ಶೀರ್ಷಿಕೆ ಸಕತ್ ಆಗಿ ಹೊಂದಿಕೆಯಾಗುತ್ತದೆ. ಚಿತ್ರದ ಫಸ್ಟ್ ಲುಕ್ ಇನ್ನೊಂದು ವಾರದಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಸಾಗಿದೆ.ಕನ್ನಡದ ಲೂಸಿಯಾಗಿಂತ ತಮಿಳಿನ ಲೂಸಿಯಾ ಕೊಂಚ ಭಿನ್ನವಾಗಿರಲಿದೆ ಎಂದಿದ್ದಾರೆ.

2013ರಲ್ಲಿ ತೆರೆ ಕಂಡ ಪ್ರೇಕ್ಷಕರೇ ಹಣ ತೊಡಗಿಸಿ ಚಿತ್ರ ವಿತರಣೆ ಮಾಡಿದ ಕನ್ನಡದ ಲೂಸಿಯಾ ಚಿತ್ರ ವಿಶ್ವದ ಸಿನಿಪ್ರಿಯರ ಗಮನ ಸೆಳೆದಿತ್ತು. ಈಗ ಇದೇ ಚಿತ್ರ ತಮಿಳಿನಲ್ಲಿ ಬರಲಿದ್ದು, ಸಿ.ವಿ ಕುಮಾರ್ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದು, ಸಿದ್ದಾರ್ಥ್, ದೀಪಾ ಸನ್ನಿಧಿ ಅಲ್ಲದೆ ತನುಶ್ರೀ, ಆಡುಕಾಲಂ ನರೇನ್ ಪ್ರಮುಖ ಪಾತ್ರದಲ್ಲಿದ್ದಾರೆ. ಗೋಪಿ ಅಮರನಾಥ್ ಕೆಮೆರಾ ವರ್ಕ್ ಚಿತ್ರಕ್ಕಿದೆ.

More from Filmibeat

English summary
The critically-acclaimed Kannada film Lucia, which has been remade in Tamil has been titled as Ennakul Oruvan. After Jigardhanda, Siddharth, whose career is on a high, is awaiting the release of Kaaviya Thalaivan, and is also busy with the post production work of the Tamil remake of the super hit, Lucia. The original film directed by Pawan Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X