For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ಪ್ರಿಯಾಮಣಿಗೆ ಅತ್ಯುತ್ತಮ ನಟ ನಟಿ ಪ್ರಶಸ್ತಿ

  By Rajendra
  |

  ಅತ್ಯುತ್ತಮ ಚಿತ್ರವಾಗಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಅವರು ಅಭಿನಯ 3d ಚಿತ್ರ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಆಯ್ಕೆಯಾಗಿದೆ. ಶಾರ್ಜಾದಲ್ಲಿ ನಡೆದ ಎರಡನೇ ಆವೃತ್ತಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಪ್ರಶಸ್ತಿಗೆ ಚಿತ್ರ ಭಾಜನವಾಗಿದೆ.

  ಸೆಪ್ಟೆಂಬರ್ 12, 13ರಂದು ಎರಡು ದಿನಗಳ ಕಾಲ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 'ಕನ್ನಡದ ಕಠಾರಿವೀರ ಸುರಸುಂದರಾಂಗಿ' ಚಿತ್ರ ಆಯ್ಕೆಯಾಗಿದೆ. ಚಿತ್ರದ ನಿರ್ಮಾಪಕ ಹಾಗೂ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಅವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. [ಗ್ಯಾಲರಿ]

  ಈ ಬಾರಿ ಸ್ಪರ್ಧೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಣ್ಣಾಬಾಂಡ್, ಅದ್ದೂರಿ ಹಾಗೂ ಡ್ರಾಮಾ ಚಿತ್ರಗಳಿದ್ದವು. ಅಂತಿಮವಾಗಿ ವಿಜಯಮಾಲೆ ಕಠಾರಿವೀರನಿಗೆ ಬಿದ್ದಿದೆ. ಅತ್ಯುತ್ತಮ ನಟನಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಶಿವ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಈ ಪ್ರಶಸ್ತಿ ಪಡೆದಿದ್ದಾರೆ.

  ಅತ್ಯುತ್ತಮ ನಟ ವಿಭಾಗದಲ್ಲಿ ಈ ಬಾರಿ ದುನಿಯಾ ವಿಜಯ್ (ಭೀಮಾ ತೀರದಲ್ಲಿ), ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ), ಪುನೀತ್ ರಾಜ್ ಕುಮಾರ್ (ಅಣ್ಣಾಬಾಂಡ್), ದರ್ಶನ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಸ್ಪರ್ಧಿಸಿದ್ದರು.

  ಅತ್ಯುತ್ತಮ ನಟಿಯಾಗಿ ಪ್ರಿಯಾಮಣಿ (ಚಾರುಲತಾ) ಆಯ್ಕೆಯಾಗಿದ್ದಾರೆ. ಇನ್ನು ಅತ್ಯುತ್ತಮ ಋಣಾತ್ಮಕ ಪಾತ್ರ ಪ್ರಶಸ್ತಿಗೆ ಪೂಜಾಗಾಂಧಿ (ದಂಡುಪಾಳ್ಯ) ಪಾತ್ರರಾಗಿದ್ದಾರೆ. ನಟ ಸುದೀಪ್ (ತೆಲುಗು 'ಈಗ' ಚಿತ್ರ) ಸಹ ಅತ್ಯುತ್ತಮ ಋಣಾತ್ಮಕ ನಟ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಪ್ರಶಸ್ತಿಗಳ ವಿವರ ಕೆಳಕಂಡಂತಿದೆ.

  ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಶಿವ)

  ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಶಿವ)

  ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಶಿವ)

  ಅತ್ಯುತ್ತಮ ನಟಿ (ವಿಮರ್ಶಕರ ಮೆಚ್ಚುಗೆ) : ರಾಗಿಣಿ ದ್ವಿವೇದಿ (ಶಿವ)

  ಅತ್ಯುತ್ತಮ ನಟಿ (ವಿಮರ್ಶಕರ ಮೆಚ್ಚುಗೆ) : ರಾಗಿಣಿ ದ್ವಿವೇದಿ (ಶಿವ)

  ಅತ್ಯುತ್ತಮ ನಟಿ (ವಿಮರ್ಶಕರ ಮೆಚ್ಚುಗೆ) : ರಾಗಿಣಿ ದ್ವಿವೇದಿ (ಶಿವ)

  ಅತ್ಯುತ್ತಮ ಪೋಷಕ ನಟಿ: ನಿಧಿ ಸುಬ್ಬಯ್ಯ (ಅಣ್ಣಾಬಾಂಡ್)

  ಅತ್ಯುತ್ತಮ ಪೋಷಕ ನಟಿ: ನಿಧಿ ಸುಬ್ಬಯ್ಯ (ಅಣ್ಣಾಬಾಂಡ್)

  ಅತ್ಯುತ್ತಮ ಪೋಷಕ ನಟಿ: ನಿಧಿ ಸುಬ್ಬಯ್ಯ (ಅಣ್ಣಾಬಾಂಡ್)

  ಅತ್ಯುತ್ತಮ ನಟಿ: ಪ್ರಿಯಾಮಣಿ (ಚಾರುಲತಾ)

  ಅತ್ಯುತ್ತಮ ನಟಿ: ಪ್ರಿಯಾಮಣಿ (ಚಾರುಲತಾ)

  ಅತ್ಯುತ್ತಮ ನಟಿ: ಪ್ರಿಯಾಮಣಿ (ಚಾರುಲತಾ)

  ಅತ್ಯುತ್ತಮ ಋಣಾತ್ಮಕ ಪಾತ್ರ : ಪೂಜಾಗಾಂಧಿ (ದಂಡುಪಾಳ್ಯ)

  ಅತ್ಯುತ್ತಮ ಋಣಾತ್ಮಕ ಪಾತ್ರ : ಪೂಜಾಗಾಂಧಿ (ದಂಡುಪಾಳ್ಯ)

  ಅತ್ಯುತ್ತಮ ಋಣಾತ್ಮಕ ಪಾತ್ರ : ಪೂಜಾಗಾಂಧಿ (ದಂಡುಪಾಳ್ಯ)

  ಅತ್ಯುತ್ತಮ ನಿರ್ದೇಶಕ: ಎಪಿ ಅರ್ಜುನ್ (ಅದ್ದೂರಿ)

  ಅತ್ಯುತ್ತಮ ನಿರ್ದೇಶಕ: ಎಪಿ ಅರ್ಜುನ್ (ಅದ್ದೂರಿ)

  ಅತ್ಯುತ್ತಮ ನಿರ್ದೇಶಕ: ಎಪಿ ಅರ್ಜುನ್ (ಅದ್ದೂರಿ)

  ಅತ್ಯುತ್ತಮ ಚಿತ್ರ: ಕಠಾರಿವೀರ ಸುರಸುಂದರಾಂಗಿ (ನಿರ್ಮಾಪಕ ಮುನಿರತ್ನ)

  ಅತ್ಯುತ್ತಮ ಚಿತ್ರ: ಕಠಾರಿವೀರ ಸುರಸುಂದರಾಂಗಿ (ನಿರ್ಮಾಪಕ ಮುನಿರತ್ನ)

  ಅತ್ಯುತ್ತಮ ಚಿತ್ರ: ಕಠಾರಿವೀರ ಸುರಸುಂದರಾಂಗಿ (ನಿರ್ಮಾಪಕ ಮುನಿರತ್ನ)

  ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ರೋಮಿಯೋ)

  ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ರೋಮಿಯೋ)

  ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ರೋಮಿಯೋ)

  ಅತ್ಯುತ್ತಮ ಹಾಸ್ಯ ನಟ: ಸಾಧು ಕೋಕಿಲ (ಯಾರೇ ಕೂಗಾಡಲಿ)

  ಅತ್ಯುತ್ತಮ ಹಾಸ್ಯ ನಟ: ಸಾಧು ಕೋಕಿಲ (ಯಾರೇ ಕೂಗಾಡಲಿ)

  ಅತ್ಯುತ್ತಮ ಹಾಸ್ಯ ನಟ: ಸಾಧು ಕೋಕಿಲ (ಯಾರೇ ಕೂಗಾಡಲಿ)

  ಅತ್ಯುತ್ತಮ ನಟ (ವಿಮರ್ಶಕರ ಮೆಚ್ಚುಗೆ): ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ)

  ಅತ್ಯುತ್ತಮ ನಟ (ವಿಮರ್ಶಕರ ಮೆಚ್ಚುಗೆ): ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ)

  ಅತ್ಯುತ್ತಮ ನಟ (ವಿಮರ್ಶಕರ ಮೆಚ್ಚುಗೆ): ಉಪೇಂದ್ರ (ಕಠಾರಿವೀರ ಸುರಸುಂದರಾಂಗಿ)

  English summary
  SIIMA 2013 Awards winner list for Kannada films category. Century Star Shivarajkumar bagged the Best Actor award for his work in the film Shiva. Priya Mani bagged the Best Actress award at SIIMA too for her role(s) as conjoined twins in Charulatha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X