For Quick Alerts
  ALLOW NOTIFICATIONS  
  For Daily Alerts

  ಸೈಮಾ ಪ್ರಶಸ್ತಿ : ಯಶ್ -ರಾಧಿಕಾ ಸೇರಿ ತಾರೆಯರ ರಂಗು

  By ಜೇಮ್ಸ್ ಮಾರ್ಟಿನ್
  |

  ಸೈಮಾ-ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ನಾಲ್ಕನೇ ಆವೃತ್ತಿ ಪ್ರಶಸ್ತಿ ಸಮಾರಂಭದಲ್ಲಿ ದಕ್ಷಿಣ ಭಾರತದ ಸಿನಿ ತಾರೆಯರ ದಂಡೇ ನೆರೆದಿದೆ.ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿನ ಪ್ರತಿಭಾವಂತರಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ಆರಂಭದಲ್ಲೇ ಕನ್ನಡ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಿ ಅಂಡ್ ಮಿಸೆಸ್ ರಾಮಾಚಾರಿಯಂತೆ ರೆಡ್ ಕಾರ್ಪೆಟ್ ನಲ್ಲಿ ಓಡಾಡಿದ್ದು ಎಲ್ಲರ ಗಮನ ಸೆಳೆಯಿತು. [ಸೈಮಾ ಅವಾರ್ಡ್ಸ್ 2014: ಪುನೀತ್ ಗೆ ವಿಶೇಷ ಗೌರವ]

  ಕಪ್ಪು-ಬಿಳಿ ಸ್ಲಿಮ್ ಸೂಟ್ ನಲ್ಲಿ ಯಶ್ ಮಿಂಚುತ್ತಿದ್ದರೆ, ಸ್ಯಾಂಡಲ್ ವುಡ್ ನ ರಾಜಕುಮಾರಿ ರಾಧಿಕಾ ಅವರು ಕೆಂಪು ಬಣ್ಣದ ಗೌನ್ ನಲ್ಲಿ ಎದ್ದುಕಾಣುತ್ತಿದ್ದರು. [ಸೈಮಾ ಅವಾರ್ಡ್ಸ್ 2015: ಕನ್ನಡದ ನಾಮೇಷನ್ಸ್ ಪಟ್ಟಿ]

  ಯಶ್ ಹಾಗೂ ರಾಧಿಕಾ ಮಾತ್ರವಲ್ಲದೆ ಪ್ರಣೀತಾ, ನಿಕಿತಾ ತುಕ್ರಲ್, ಶರ್ಮಿಳಾ ಮಾಂಡ್ರೆ, ಸಂಜನಾ ಗಲ್ರಾಣಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಾರೆಗಳ ತೋಟದಲ್ಲಿ ಮಿನುಗುತ್ತಿದ್ದರು.[ಸೈಮಾ ಅವಾರ್ಡ್ಸ್ ನಲ್ಲೂ ದಾಖಲೆ ಬರೆದ ಯಶ್ 'ರಾಮಾಚಾರಿ']

  ಸೈಮಾ ಪ್ರಶಸ್ತಿ ರೇಸಿನಲ್ಲಿ ಗಜಕೇಸರಿ, ರಾಮಾಚಾರಿ, ಉಗ್ರಂ, ದೃಶ್ಯ ಚಿತ್ರಗಳು, ಯಶ್, ರಕ್ಷಿತ್ ಶೆಟ್ಟಿ, ಸೇರಿ ಅನೇಕರು ಪ್ರಶಸ್ತಿ ರೇಸಿನಲ್ಲಿದ್ದರು. ಈ ಬಾರಿ ಸೈಮಾ ಪ್ರಶಸ್ತಿ ಸಮಾರಂಭ ಆಗಸ್ಟ್ 6 ಹಾಗೂ 7ರಂದು ದುಬೈನಲ್ಲಿ ನಡೆಯುತ್ತಿದೆ.

  13ಕ್ಕೂ ಹೆಚ್ಚು ಕೆಟಗೆರಿಗಳಲ್ಲಿ ಪ್ರಶಸ್ತಿ ಪ್ರದಾನ

  13ಕ್ಕೂ ಹೆಚ್ಚು ಕೆಟಗೆರಿಗಳಲ್ಲಿ ಪ್ರಶಸ್ತಿ ಪ್ರದಾನ

  ಶ್ರೇಷ್ಠ ನಟ, ನಟಿ, ಚಿತ್ರ ವಿಭಾಗವಲ್ಲದೆ ಛಾಯಾಗ್ರಾಹಕ ,ಸಾಹಸ ಸಂಯೋಜನೆ, ನೆಗಟೀವ್ ಪಾತ್ರ, ಬಾಲನಟಿ, ಚೊಚ್ಚಲ ನಿರ್ಮಾಪಕ ಹೀಗೆ 13ಕ್ಕೂ ಹೆಚ್ಚು ಕೆಟಗೆರಿಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸೈಮಾ ಚೇರ್ಮನ್ ಬೃಂದಾ ಪ್ರಸಾದ್ ಹೇಳಿದ್ದಾರೆ.

  ಪ್ರಣೀತಾ ಡ್ಯಾನ್ಸ್ ಝಲಕ್ ನೋಡಿ

  ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಪ್ರಣೀತಾ ಸುಭಾಷ್ ಡ್ಯಾನ್ಸ್ ಝಲಕ್ ನೋಡಿ

  ಹಾಟ್ ಅಂಡ್ ಕ್ರೇಜಿ ನೈಟ್ ಎಂದ ನಿಕಿಶಾ

  ಹಾಟ್ ಅಂಡ್ ಕ್ರೇಜಿ ನೈಟ್ ಎಂದ ನಿಕಿಶಾ ಪಟೇಲ್ ಟ್ವೀಟ್

  ಭಲೇ ನಿಖಿತಾ ತುಕ್ರಲ್

  ಭಲೇ ನಿಖಿತಾ ತುಕ್ರಲ್

  ನಟಿ ನಿಖಿತಾ ತುಕ್ರಲ್ ಅವರು ಟ್ವೀಟ್ ಮಿರರ್ ಬಳಸಿ ತಮ್ಮ ಹಸ್ತಾಕ್ಷರವನ್ನು ಕನ್ನಡ ಭಾಷೆಯಲ್ಲಿ ಮಾಡಿದ್ದು ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

  ವಾಸ್ಕೋಡಗಾಮಾ ಚಿತ್ರದ ನಾಯಕಿ ಪಾರ್ವತಿ

  ವಾಸ್ಕೋಡಗಾಮಾ ಚಿತ್ರದ ನಾಯಕಿ ಪಾರ್ವತಿ

  ಕಿಶೋರ್ ಅಭಿನಯದ ಕನ್ನಡ ಚಿತ್ರ ವಾಸ್ಕೋಡಗಾಮಾದ ನಾಯಕಿ ಪಾರ್ವತಿ ನಾಯರ್.

  ಯೋಗಗುರು ಪತಿಯೊಂದಿಗೆ ಭೂಮಿಕಾ ಚಾವ್ಲಾ

  ಯೋಗಗುರು ಪತಿಯೊಂದಿಗೆ ಭೂಮಿಕಾ ಚಾವ್ಲಾ ಅವರು ಸಮಾರಂಭಕ್ಕೆ ಬಂದಿದ್ದು ಹೀಗೆ...

  ದುಬೈನ ಹಯಾತ್ ಹೋಟೆಲಿನಲ್ಲಿ ಸಂಭ್ರಮ

  ದುಬೈನ ಹಯಾತ್ ಹೋಟೆಲಿನಲ್ಲಿ ಸಂಭ್ರಮ, ನಟಿ ಖುಷ್ಬೂ ಜೊತೆ ಮಾತುಕತೆ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಅವರಿಂದ ಟ್ವೀಟ್.

  ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರಣೀತಾ

  ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರಣೀತಾ

  ಸೆಲ್ಫಿ ತೆಗೆದುಕೊಳ್ಳುತ್ತಿರುವ ನಟಿ ಪ್ರಣೀತಾ ಸುಭಾಷ್.

  ರಾಣಾ ಜೊತೆ ಶ್ರೀಯಾ ಹಾಗೂ ಅದಾ ಶರ್ಮ

  ರಾಣಾ ದಗ್ಗುಬಾತಿ ಜೊತೆ ಶ್ರೀಯಾ ಹಾಗೂ ಅದಾ ಶರ್ಮ ಪೋಸ್.

  ಹಿರಿಯ ನಟಿ ಸರಿತಾ ಜೊತೆ ರಾಣಾ

  ಹಿರಿಯ ನಟಿ ಸರಿತಾ ಜೊತೆ ನಟ ರಾಣಾ ದಗ್ಗುಬಾತಿ.

  ಗಲ್ ರಾಣಿ ಸಿಸ್ಟರ್ಸ್ ಪೋಸ್

  ಸಂಜನಾ ಗಲ್ ರಾಣಿ ಹಾಗೂ ನಿಕ್ಕಿ ಗಲ್ ರಾಣಿ ಸಿಸ್ಟರ್ಸ್ ಪೋಸ್

  ಖುಷ್ಬೂ ಸರಿತಾ ಹಾಗೂ ಸುಹಾಸಿನಿ

  ಹಿರಿಯ ತಾರೆಗಳಾದ ಖುಷ್ಬೂ, ಸರಿತಾ ಹಾಗೂ ಸುಹಾಸಿನಿ

  ಬ್ಯಾಕ್ ಸ್ಟೇಟ್ ನಲ್ಲಿ ಬೆಂಗಳೂರು ಹುಡ್ಗಿ ಪೂಜಾ

  ಬ್ಯಾಕ್ ಸ್ಟೇಟ್ ನಲ್ಲಿ ಬೆಂಗಳೂರು ಹುಡ್ಗಿ ಪೂಜಾ ಹೆಗಡೆ ಪೋಸ್

  English summary
  Film industry's biggest event SIIMA Awards 2015 opened today(August 6). The grand event is taking place in Dubai. The red carpet has just begun and we see Mr and Mrs Ramachari pair Yash and Radhika Pandit were spotted together at the event.
  Friday, May 27, 2016, 14:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X