'ಗತವೈಭವ'ಕ್ಕೆ ಸಜ್ಜಾದ ಸಿಂಪಲ್ ಸುನಿ; ದುಶ್ಯಂತ್-ಆಶಿಕಾ ರಂಗನಾಥ್ ಸಿನಿಮಾ ರಿಲೀಸ್‌ಗೆ ರೆಡಿ

ಸಿಂಪಲ್ ಸುನಿ ಸಾಮಾನ್ಯವಾಗಿ ತೆರೆಮೇಲೆ ಕಥೆಯನ್ನು ಸಿಂಪಲ್ ಆಗಿ ಹೇಳುತ್ತಾರೆ. ಜನರಿಗೆ ಬೇಗ ಮುಟ್ಟುತ್ತೆ. ನೀಟ್ ಆಗಿ ಅರ್ಥ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿ ಕಟ್ಟಿ ಹಾಕುತ್ತಾರೆ. ಹೀಗಾಗಿ ಇವರ ಸಿನಿಮಾಗಳನ್ನು ತಪ್ಪದೇ ವೀಕ್ಷಿಸುವ ಒಂದು ದೊಡ್ಡ ವರ್ಗವೇ ಇದೆ. ಇದೂವರೆಗೂ ಸಿಂಪಲ್ ಸುನಿ ನಿರ್ದೇಶಿಸಿರುವ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾಗಿ ಮೂಡಿ ಬಂದಿವೆ. ಈಗ ಮತ್ತೊಂದು ಸಿನಿಮಾ ಇವರ ಬತ್ತಳಿಕೆಯಿಂದ ಬರುತ್ತಿದೆ.

ಸಿಂಪಲ್ ಸುನಿ ಬಹಳ ದಿನಗಳ ಹಿಂದೆ 'ಗತವೈಭವ' ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ ನಾಯಕನಾಗಿ ಹೊಸ ಪ್ರತಿಭೆ ದುಶ್ಯಂತ್ ಆಯ್ಕೆಯಾಗಿದ್ದರು. ಇವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್‌ರನ್ನು ಕರೆದುಕೊಂಡು ಬಂದಿದ್ದರು. ಈ ಸಿನಿಮಾದ ಹೀರೋವನ್ನು ವಿಶಿಷ್ಠವಾಗಿ ಇಂಟ್ರುಡ್ಯೂಸ್ ಮಾಡುವ ಮೂಲಕ ಸಿಂಪಲ್ ಸುನಿ ಸಿನಿಪ್ರಿಯರನ್ನು ಸೆಳೆದಿದ್ದರು. ಹೀರೋ ಗೆಟಪ್, ಮ್ಯಾನರಿಸಂ, ಕಾಮಿಡಿ ಇಷ್ಟ ಆಗಿತ್ತು.

Simple Suni Directed Dushyanth and Ashika Ranganath Directed Gatha Vaibhava releasing on November 14th

ಆದರೆ, 'ಗತವೈಭವ' ಶೂಟಿಂಗ್ ಅನ್ನು ಸದ್ದಿಲ್ಲದೆ, ಸಮಯ ತೆಗೆದುಕೊಂಡು ಮಾಡಿ ಮುಗಿಸಿದ್ದಾರೆ. ಈಗ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಬಿಡುಡಗೆಯ ದಿನವನ್ನೂ ರಿವೀಲ್ ಮಾಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಸಿಂಪಲ್ ಸುನಿ, ದುಶ್ಯಂತ್ ಹಾಗೂ ಆಶಿಕಾ ರಂಗನಾಥ್ ತಮ್ಮ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ಗತವೈಭವ' ಸಿನಿಮಾದ ಟೀಸರ್ ಲಾಂಚ್ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮಾಹಿತಿ ಹಂಚಿಕೊಂಡಿದ್ದಾರೆ. "ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್. ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಈ ಸಿನಿಮಾ ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಇದರ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದ್ಮೇಲೆ ಪ್ರಚಾರವಾಗುತ್ತೆ. ನಾನು ಆಡಿಯನ್ಸ್ ರೀತಿ ಈ‌ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ಶಾರ್ಟ್ ತುಂಬಾ ಚೆನ್ನಾಗಿ ಬಂದಿದೆ. ಪ್ರೊಡ್ಯೂಸರ್ ದೀಪಕ್ ಸರ್ ಚಿತ್ರಕ್ಕೆ ಎಲ್ಲವನ್ನೂ ಒದಗಿಸಿದ್ದಾರೆ. ದುಶ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ಫ್ಯಾಮಿಲಿ ತರ ಆಗಿದ್ದಾರೆ. ಈ ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್, ಎಮೋಷನ್ ಎಲ್ಲವೂ ಇದೆ" ಎಂದು ಹೇಳಿದ್ದಾರೆ.

ಹಾಗೇ ಸಿನಿಮಾದ ನಾಯಕ ದುಶ್ಯಂತ್ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. "ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್‌ನಲ್ಲಿ ಚಿತ್ರೀಕರಣ ಆಗಿದೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು. ನಿರೀಕ್ಷೆಗೂ‌ ಮೀರಿದಷ್ಟು ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವ ಅದಕ್ಕೆ ಏನೂ ಬೇಕು ಅದು ತೆಗೆದುಕೊಳ್ತು. ಸುನಿ ಸರ್ ಅವರ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ. ಆಶಿಕಾ ಅವರ ಕರಿಯರ್‌ನಲ್ಲೂ ಇದು ಬೆಸ್ಟ್ ಚಿತ್ರ ಎನಿಸಿಕೊಳ್ಳಲಿದೆ. ನವೆಂಬರ್ 14ಕ್ಕೆ ಗತವೈಭವ ತೆರೆಗೆ ಬರಲಿದೆ. ಅಕ್ಟೋಬರ್‌ನಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ" ಎಂದಿದ್ದಾರೆ.

ಇನ್ನು ನಟಿ ಆಶಿಕಾ ರಂಗನಾಥ್ "ಗತವೈಭವ ತುಂಬಾ ಸ್ಪೆಷಲ್ ಸಿನಿಮಾ. ತಂಜಾವೂರಿನಲ್ಲಿ ಶೂಟಿಂಗ್ ಸಮಯದಲ್ಲಿ ಕೇಳಿದ ಕಥೆಯಿದು. ತುಂಬಾ ಎಂಜಾಯ್ ಮಾಡಿಕೊಂಡು ಕಥೆ ಕೇಳಿದೆ. ಕಥೆ ಹೊಸದಾಗಿ. ಸುನಿ ಸರ್‌ಗೂ ಇದು ಹೊಸದು ಅನಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಈ ರೀತಿ ಪಾತ್ರ ಸಿಗಲು ಅದೃಷ್ಟ ಮಾಡಿರಬೇಕು. ನನಗೆ ಈ ಸಿನಿಮಾದಲ್ಲಿ ನಾಲ್ಕು ಲುಕ್ ಇದೆ. ಗತವೈಭವದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ. ಹೋಮ್ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದೆ ಅನುಭವ. ತೆರೆಮೇಲೆ ವೈಭವವಾಗಿ ಕಾಣಿಸಲು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಅನುಭವ. ದುಶ್ಯಂತ್ ಅದ್ಭುತ ನಟ" ಎಂದು ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ.

ಇನ್ನು 'ಗತವೈಭವ' ಸಿನಿಮಾ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ನವೆಂಬರ್ 14ಕ್ಕೆ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X