ಸಿಂಪಲ್ ಸುನಿಯ 'ಲಂಬೋದರ 2.0' ಶೂಟಿಂಗ್ ನೋಡಲು ಬಂದ ವಿದೇಶಿಗರು; ಏನು ಸಮಾಚಾರ?

ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಲಂಬೋದರ 2.0' ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಹೊರಟಿದೆ. ಈ ಸೈನ್ಸ್‌-ಫಿಕ್ಷನ್ ಆಕ್ಷನ್ ಶೈಲಿಯ ಸಿನಿಮಾ ಇದಾಗಿದ್ದು, ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ವಿದೇಶಿ ತಂಡವೊಂದು ಸುನಿ ಸಿನಿಮಾ ಶೂಟಿಂಗ್ ಸೆಟ್‌ಗೆ ವಿಸಿಟ್ ಹಾಕಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್ಲ್ಯಾಂಡ್ಸ್ ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಹಾಗೂ ಇಂಡಿಯಾ ಗ್ಲೋಬಲ್ ಫೋರಂನ (IGF) ಸದಸ್ಯರು 'ಲಂಬೋದರ 2.0' ಶೂಟಿಂಗ್ ಸೆಟ್‌ಗೆ ವಿಸಿಟ್ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಕಾರ್ಯವೈಖರಿಯನ್ನು ಒಂದು ದಿನ ಪೂರ್ಣವಾಗಿ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಪ್ರತಿನಿಧಿ ಮಂಡಳಿಯ ಸದಸ್ಯರು ಸಿನಿಮಾದ ಕಲಾವಿದರು ಹಾಗೂ ತಾಂತ್ರಿಕ ತಂಡದೊಂದಿಗೆ ಸಂವಾದ ನಡೆಸಿದ್ದಾರೆ.

Simple Suni directed Lambodara 2 0 Sci-Fi movie got International Attention

'ಲಂಬೋದರ 2.0' ಸೈನ್ಸ್‌-ಫಿಕ್ಷನ್ ಆಕ್ಷನ್ ಸಿನಿಮಾ ಆಗಿದ್ದು, ಚಿತ್ರರಂಗದ ಸಮಕಾಲೀನ ಸಾಮಾಜಿಕ ವಿಷಯಗಳನ್ನು ಮಾಡರ್ನ್‌ ಟೆಕ್ನಾಲಜಿ ಸೇರಿಸಿ 'ಲಂಬೋದರ 2.0' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯ ಕುರಿತು ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್ಲ್ಯಾಂಡ್ಸ್ ಮೇಯರ್ ಕಚೇರಿಯ ಸದಸ್ಯರು ಮಾಹಿತಿ ಪಡೆದುಕೊಂಡರು.

ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಲಂಬೋದರ 2.0' ಸಿನಿಮಾ ಮೂಲಕ ಅನಿಲ್ ಶೆಟ್ಟಿ ಹಾಗೂ ಸಾಚಿ ಬಿಂದ್ರಾ ನಾಯಕ-ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. AI ತಂತ್ರಜ್ಞಾನ, ಡಿಜಿಟಲ್ ಪ್ರಭಾವ ಹಾಗೂ ಮಾನವನ ಖುಷಿಯ ಹಿನ್ನೆಲೆಯನ್ನು ಇಟ್ಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಸಿಂಪಲ್ ಸುನಿಯ ವಿಶಿಷ್ಟ ಶೈಲಿಯ ನಿರೂಪಣೆಯ ಸಿನಿಮಾ ಆಗಿದ್ದರಿಂದ ಈಗಾಗಲೇ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Also Read
ಕನ್ನಡ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ಕುಟುಂಬದ ಹೀರೋ ಗ್ರ್ಯಾಂಡ್ ಎಂಟ್ರಿ; ಸಿಂಪಲ್ ಸುನಿ ಡೈರೆಕ್ಟರ್
ಕನ್ನಡ ಚಿತ್ರರಂಗಕ್ಕೆ ಅಮಿತಾಭ್ ಬಚ್ಚನ್ ಕುಟುಂಬದ ಹೀರೋ ಗ್ರ್ಯಾಂಡ್ ಎಂಟ್ರಿ; ಸಿಂಪಲ್ ಸುನಿ ಡೈರೆಕ್ಟರ್

'ಲಂಬೋದರ 2.0' ಸಿನಿಮಾದ ಪರಿಕಲ್ಪನೆ ಹಾಗೂ ನಿರ್ಮಾಣದ ವೈಖರಿಯನ್ನು ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್ಲ್ಯಾಂಡ್ಸ್ ಮೇಯರ್ ಕಚೇರಿಯ ಅಧಿಕೃತ ಪ್ರತಿನಿಧಿ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಸಿನಿಮಾದ ಕಲಾವಿದರು ಮತ್ತು ತಾಂತ್ರಿಕ ತಂಡವನ್ನು ಯುನೈಟೆಡ್ ಕಿಂಗ್‌ಡಮ್‌ಗೆ ಆಹ್ವಾನಿಸಿದ್ದು, ಬರ್ಮಿಂಗ್‌ಹ್ಯಾಮ್ ನಗರದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸುವ ಆಸಕ್ತಿಯನ್ನು ವ್ಯಕ್ತಪಡಿಸಿತು. ಈ ಭೇಟಿ ಭವಿಷ್ಯದಲ್ಲಿ ಸಾಂಸ್ಕೃತಿಕ ಹಾಗೂ ಚಲನಚಿತ್ರ ಸಹಯೋಗಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

Simple Suni directed Lambodara 2 0 Sci-Fi movie got International Attention

ಇಷ್ಟೇ ಅಲ್ಲದೆ, ಯುಕೆ ಪ್ರತಿನಿಧಿ ಮಂಡಳಿಯ ಸದಸ್ಯರು ಈ ಸಿನಿಮಾದ ಕಲಾವಿದರು ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಮ್ಯಾಕ್ ಮಾಚಾ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಕಾರ್ಯನಿರ್ವಾಹಕ ನಿರ್ಮಾಪಕಿ ನಿದಿಶಾ ಸುವರ್ಣ ಜೊತೆಗೆ ಸಿನಿಮಾ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಂತ್ರಿಕ ತಂಡದ ಸದಸ್ಯರೊಂದಿಗೆ ಸಂವಾದ ನಡೆಸಿದರು.

2026ರಲ್ಲಿ ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಲಂಬೋದರ 2.0' ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜಾಗತಿಕ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ನಿರ್ಮಾಪಕರು ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾವನ್ನು ವಿತರಣೆ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

ಮಾಸ್ ಪ್ರೊಡಕ್ಷನ್ ಸಂಸ್ಥೆ 'ಲಂಬೋದರ 2.0' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕನ್ನಡ ಚಿತ್ರರಂಗದಿಂದ ಹೊರಬರುತ್ತಿರುವ ಅತ್ಯಂತ ಮಹತ್ವಾಕಾಂಕ್ಷೆಯ ಸೈನ್ಸ್-ಫಿಕ್ಷನ್ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಈ ಸಿನಿಮಾ ಕೂಡ ಒಂದಾಗಿದೆ. ವಿಶಿಷ್ಟ ಶೈಲಿಯ ಸಿನಿಮಾ ಮೂಲಕ ವಿಶ್ವದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಈ ಸಿನಿಮಾ ತಂಡದ್ದು. ಸದ್ಯ 'ಲಂಬೋದರ 2.0' ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ರಿಲೀಸ್ ಬಗ್ಗೆ ಮಾಹಿತಿ ಹೊರ ಬೀಳಬೇಕಿದೆ.

English summary
Simple Suni directed Lambodara 2.0 Sci-Fi movie got International Attention.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X