ಹೊಸ ಅವತಾರದಲ್ಲಿ ಬಂದ ಸಿಂಧು ಲೋಕನಾಥ್ ಕಿಡಿಕಾರಿದ್ದು ಯಾರ ಮೇಲೆ?

ಕನ್ನಡ ಚಿತ್ರರಂಗದಲ್ಲಿನ ಅತಿ ಸೌಮ್ಯ ಸ್ವಭಾವದ, ಮಿತ ಭಾಷಿ ನಟಿಯರಲ್ಲಿ ಸಿಂಧು ಲೋಕನಾಥ್ ಒಬ್ಬರು. ಅವರ ಸಿನಿಮಾಗಳಲ್ಲಿನ ಪಾತ್ರಗಳೂ ಹಾಗೆಯೇ ಇದ್ದವು. ಸಾಂಪ್ರದಾಯಿಕ ಕುಟುಂಬದ ಅವರ ಲುಕ್ ಎಲ್ಲರಿಗೂ ಇಷ್ಟವಾಗುತ್ತಿತ್ತು. ಆದರೆ ಸಿಂಧು ತಮ್ಮ ಅವತಾರ ಬದಲಿಸಿಕೊಂಡಿದ್ದಾರೆ. ಅದರ ಜತೆಗೆ ಗಂಭೀರ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ. ತಮ್ಮ ಬದಲಾದ ಅವತಾರವನ್ನು ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡು ತಪ್ಪು ಮಾಹಿತಿ ಹರಿಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Recommended Video

ಇದ್ದಕ್ಕಿದ್ದಂತೆ ಲುಕ್ ಬದಲಿಸಿಕೊಂಡು ಮಾಧ್ಯಮಗಳ ಮೇಲೆ ಕಿಡಿಕಾರಿದ ಸಿಂಧು ಲೋಕನಾಥ್. | Sindhu Lokanath

ತಮ್ಮ ನೀಳ ಕೇಶರಾಶಿಗೆ ಕತ್ತರಿಗೆ ಹಾಕಿರುವ ಸಿಂಧು, ಫುಟ್ಬಾಲ್ ಆಡುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. 'ನನ್ನನ್ನು ಅನಾರೋಗ್ಯ ಪೀಡಿತೆ ಎಂದು ಬಿಂಬಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಿದ ಮಾಧ್ಯಮದ ಜನರಿಗೆ ಈ ಫೋಟೊಗಳನ್ನು ಅರ್ಪಿಸುತ್ತೇನೆ. ನಾನು ಹುಷಾರಾಗಿ ಇದ್ದೇನೆಯೇ ಎಂದು ಜನರು ಮೆಸೇಜ್‌ಗಳ ಮೂಲಕ ಕೇಳುತ್ತಿದ್ದಾರೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ಜನರಿಗೆ ಕೆಲವು ಅಮೂಲ್ಯ ಮಾತುಗಳನ್ನು ಹೇಳುತ್ತೇನೆ..' ಎಂದು ಸಿಂಧು ತಮ್ಮ ಬದಲಾದ ಲುಕ್ ಕುರಿತು ಮತ್ತು ಅದರ ಸುತ್ತಲಿನ ಊಹಾಪೋಹಗಳ ಕುರಿತು ಮಾತನಾಡಿದ್ದಾರೆ. ಮುಂದೆ ಓದಿ...

ಕೂದಲಿಗೆ ಕತ್ತರಿ ಹಾಕಿದರೆ ಖಿನ್ನತೆಯೇ?

ಕೂದಲಿಗೆ ಕತ್ತರಿ ಹಾಕಿದರೆ ಖಿನ್ನತೆಯೇ?

ನನ್ನ ಕೂದಲನ್ನು ಕತ್ತರಿಸಿರುವುದರ ಅರ್ಥ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ ಎಂದಲ್ಲ. ಕೂದಲು ಕತ್ತರಿಸಿರುವುದು ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದಲ್ಲ. ಕೂದಲು ಕತ್ತರಿಸುವುದು ಲಿಂಗತಾರತಮ್ಯ ಆಗುವುದಿಲ್ಲ. ನನ್ನ ಕೂದಲು ಮತ್ತು ನನಗೆ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತೇನೆ. ನನ್ನ ಕತ್ತರಿಸಿದ ಕೂದಲಿನ ಬಗ್ಗೆಯೇ ವಿವಾದ ಸೃಷ್ಟಿಸುವುದು ನಿಮ್ಮ ಕೀಳು ವರ್ತನೆ. ಅದು ಮುಂಚಿಗಿಂತಲೂ ಚೆನ್ನಾಗಿ ಮತ್ತೆ ಬೆಳೆಯುತ್ತದೆ.

ನಾನು ನನ್ನ ಹಿಂದಿನ ಪೋಸ್ಟ್‌ನಲ್ಲಿ ಬರೆದಿರುವ ಪದಗಳು ನಿಮಗೆ ಅರ್ಥವಾಗದೆ ಇದ್ದರೆ ಹತ್ತು ಬಾರಿ ಓದಿ. ನಿಮಗೆ ಅರ್ಥವಾಗಬಹುದು.

ನೀವು ಹೊಣೆಗಾರರಾಗುತ್ತೀರಾ?

ನೀವು ಹೊಣೆಗಾರರಾಗುತ್ತೀರಾ?

ಒಬ್ಬರನ್ನು ಅನಾರೋಗ್ಯಪೀಡಿತರು, ಖಿನ್ನತೆಗೆ ಒಳಗಾದವರು ಎಂದು ತೋರಿಸುವುದು, ಒಬ್ಬರ ವೈಯಕ್ತಿಕ ಜೀವನ, ಅವರ ವೈವಾಹಿಕ ಸ್ಥಿತಿಗತಿಗಳನ್ನು ಕೆದಕುವುದು, ನಿಮ್ಮದೇ ಕಲ್ಪನೆಗಳಲ್ಲಿ ಕಥೆ ಕಟ್ಟುವುದು ನಿಮಗೆ ಟಿಆರ್‌ಪಿ ತಂದುಕೊಡಬಹುದು. ಆದರೆ ಅವರ ಬದುಕಿನಲ್ಲಿ ಪ್ರಮಾದಗಳಾದಾಗ ಅವರ ಹೆಸರನ್ನೂ ಕೆಡಿಸುವ ಪ್ರಯತ್ನ ಮಾಡಿದ್ದಕ್ಕೆ ನೀವು ಹೊಣೆ ಹೊರುತ್ತೀರಾ? ಈ ದೋಷಾರೋಪಣೆಯ ಆಟದಲ್ಲಿ ನೀವೂ ಭಾಗಿಯಾಗುತ್ತೀರಾ?

ನನಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ...

ನನಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ...

ಈ ಸಂಕಷ್ಟದ ಸಮಯದಲ್ಲಿ ನೀವು ಸಕಾರಾತ್ಮಕತೆಯನ್ನು ಹರಡಿಸುವುದು ಮುಖ್ಯ. ಜನರನ್ನು ಅವರ ಅಂಚಿನತ್ತ ತಳ್ಳುವುದನ್ನು ನಿಲ್ಲಿಸಿ. ನಾನು ಮೌನವಹಿಸಿ ಸಾಕಾಗಿದೆ. ನಿಮಗೆ ಪ್ರದರ್ಶಿಸುವ ಸ್ವಾತಂತ್ರ್ಯವಿದ್ದರೆ, ನನಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನನ್ನವೃತ್ತಿಯ ಹೊರತಾಗಿ ನಿಮಗೆ ವಿವರಣೆ ನೀಡುವುದು ಏನೂ ಇಲ್ಲ.

ನನ್ನಲ್ಲಿಯೂ ಭಾವನೆಗಳಿವೆ

ನನ್ನಲ್ಲಿಯೂ ಭಾವನೆಗಳಿವೆ

ನನ್ನ ಆರೋಗ್ಯ ಅಥವಾ ನನ್ನ ಮಾನಸಿಕ ಸ್ಥಿತಿಯ ಬಗ್ಗೆ ಕಾಳಜಿಯುಳ್ಳ ಎಲ್ಲ ಇತರೆ ಜನರಿಗೂ ಧನ್ಯವಾದಗಳು. ನಾನು ಬಹಳ ಆರಾಮಾಗಿ ಇದ್ದೇನೆ ಎಂದು ಸಿಂಧು ಹೇಳಿದ್ದಾರೆ. 'ತೆರೆಯ ಮೇಲಷ್ಟೇ ನಾನು ನಟಿ. ಅದರಾಚೆ ಸಾಮಾನ್ಯಳು. ನನ್ನ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನನ್ನಲ್ಲೂ ಭಯ, ಕಷ್ಟ, ನಗು ಅಳು ಇದೆ' ಎಂದು ಹೇಳಿಕೊಂಡಿದ್ದರು. ಆದರೆ ಅವರ ಅನಿಸಿಕೆಗಳನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಕೋಪಗೊಂಡಿದ್ದಾರೆ.

More from Filmibeat

English summary
Actress Sindhu Loknath shares some pics with a post on Instagram and said that chopping my hair doesn't mean am sick and depressed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X