ಮದುವೆ ಬಳಿಕ ಪತಿ ಜೊತೆ ರಾಯರ ದರ್ಶನ; ಹಂಸಲೇಖ ಸಂಗೀತ ಸಂಜೆಯಲ್ಲಿ ಸರಿಗಮಪ ಗಾಯಕಿ ಪೃಥ್ವಿ ಭಟ್
ಜೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಾನು ಪ್ರೀತಿಸಿ ಹುಡುಗನನ್ನು ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಗಳ ವಿವಾಹದ ಬಳಿಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಲ್ಲಿಂದ ಗಾಯಕಿಯ ಮದುವೆ ವಿವಾದ ವಿಷಯವಾಗಿತ್ತು.
ಮದುವೆ ಬಳಿಕ ಮನೆಯವರ ವಿರೋಧ, ರಂಪಾಟದ ಬಳಿಕ ಗಾಯಕಿ ಪೃಥ್ವಿ ಭಟ್ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ವಿವಾದದ ಬಳಿಕ ಪತಿ ಅಭಿಷೇಕ್ ಜೊತೆಗಿನ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಸಂಗೀತ ಸಂಜೆಯಲ್ಲಿ ಭಾಗವಹಿಸಿದ್ದಾರೆ. ಈ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ನವ ದಂಪತಿಗೆ ಶುಭವನ್ನು ಹಾರೈಸಿದ್ದಾರೆ.

ಜೀ ಕನ್ನಡದ ಸರಿಗಮಪ ಶೋನಲ್ಲಿ ಪೃಥ್ವಿ ಭಟ್ ಭಾಗವಹಿಸಿದ ವೇಳೆ ಅಭಿಷೇಕ್ ಜೊತೆ ಪ್ರೀತಿ ಹುಟ್ಟಿತ್ತು. ಅಭಿಷೇಕ್ ಜೀ ಕನ್ನಡದಲ್ಲಿ ಎಕ್ಸ್‌ಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದಿಷ್ಟು ವರ್ಷ ಪ್ರೀತಿ ಮಾಡಿದ ಬಳಿಕ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು. ಆದರೆ, ಪೃಥ್ವಿ ಭಟ್ ಮನೆಯಲ್ಲಿ ವಿರೋಧವಿತ್ತು. ಮಗಳು ಹವ್ಯಕ ಸಮುದಾಯದವರನ್ನೇ ಮದುವೆ ಆಗಬೇಕು ಎಂದು ತಂದೆ-ತಾಯಿ ಬಯಸಿದ್ದರು. ಹೀಗಾಗಿ ಅವರ ವಿರೋಧ ನಡುವೆ ಮದುವೆ ಆಗಿದ್ದು, ಪೋಷಕರ ಕೋಪಕ್ಕೆ ಎಡೆ ಮಾಡಿಕೊಟ್ಟಿತ್ತು. ಮದುವೆ ವಿವಾದಕ್ಕೆ ಎಡಿ ಮಾಡಿಕೊಟ್ಟ ಬಳಿಕ ಪೃಥ್ವಿ ಭಟ್ ಪತಿಯೊಂದಿಗೆ ಮೊದಲ ಫೋಟೊವನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಎಂದಿನಂತೆ ಸಂಗೀತ ಸಂಜೆಯಲ್ಲಿ ಭಾಗಿಯಾಗಿದ್ದಾರೆ.
ಗಾಯಕಿ ಪೃಥ್ವಿ ಭಟ್ ಮದುವೆ ಬಳಿಕ ಇದೇ ಮೊದಲ ಬಾರಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೊಗೆ ನೆಟ್ಟಿಗರು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಸಮಾಜಕ್ಕೆ ಇಬ್ಬರೂ ಮಾದರಿಯಾಗಿ ಬದುಕಿ ಎಂದು ಕೆಲವರು ಸಲಹೆಯನ್ನು ನೀಡುತ್ತಿದ್ದಾರೆ. ಸಂಗೀತ ಕ್ಷೇತ್ರದಿಂದಲೂ ಈ ಜೋಡಿಗೆ ಬೆಂಬಲ ಸಿಕ್ಕಿದೆ. ವಿವಾದಾತ್ಮಕ ವಿವಾಹದ ಬಳಿಕ ಮತ್ತೆ ಎಂದಿನಂತೆ ಬದುಕು ಆರಂಭಿಸಿದ್ದು, ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಹೇಳುತ್ತಿವೆ.
ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಫೋಟೊಗೆ ನೆಟ್ಟಿಗರೊಬ್ಬರು "ಸುಖವಾಗಿ ಬಾಳಿ ಖುಷಿಯಾಗಿರಿ ಇಬ್ಬರೂ. ಸಮಾಜಕ್ಕೆ ಮಾದರಿ ಜೋಡಿಯಾಗಿರಿ" ಎಂದು ಕಮೆಂಟ್ ಮಾಡಿದ್ದಾರೆ. "ಪೃಥ್ವಿ ಮತ್ತು ಅಭಿ ದೇವರು ನಿಮಗೆ ಒಳ್ಳೆಯದು ಮಾಡಲಿ. ಯಾವಾಗಲೂ ನೀವಿಬ್ಬರೂ ಜೊತೆಯಾಗಿರಿ, ಖುಷಿಯಾಗಿರಿ. ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ" ಎಂದಿದ್ದಾರೆ. ಇನ್ನೊಬ್ಬರು "ಇಬ್ಬರು ರಾಯರ ಸನಿಧಾನದಲ್ಲಿದ್ದೀರಿ. ಒಳ್ಳೆಯದ್ದೇ ಆಗುತ್ತೆ" ಎಂದಿದ್ದಾರೆ. ಮತ್ತೊಬ್ಬರು "ನನ್ನ ಅಚ್ಚಿಮೆಚ್ಚಿನ ಗಾಯಕಿಗೆ ವಿವಾಹದ ಶುಭಾಶಯಗಳು. ಬೇಗ ನಿಮ್ಮ ಅಪ್ಪ ಅಮ್ಮನ ಜೊತೆ ಸಂಬಂಧ ಚೆನ್ನಾಗಿ ಆಗ್ಲಿ" ಎಂದಿದ್ದಾರೆ.
ಮತ್ತೊಂದು ಕಡೆ ಹಾಡುಗಾರಿಗೆ ಪೃಥ್ವಿ ಭಟ್ ಮರಳಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಸಂಜೆಯಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ 30ರಂದು ಕೂಡಲ ಸಂಗಮದಲ್ಲಿ ಸಂಜೆ 6 ಗಂಟೆಯಿಂದ ಸಂಗೀತ ಸಂಜೆ ಇತ್ತು. ಈ ಕಾರ್ಯಕ್ರಮದಲ್ಲಿ ಸರಿಗಮಪ ಗಾಯಕಿ ಪೃಥ್ವಿ ಭಟ್ ಪರ್ಫಾಮೆನ್ಸ್ ನೀಡಿದ್ದಾರೆ. ಪೃಥ್ವಿ ಭಟ್ ಇದೇ ವೇಳೆ ಹಂಸಲೇಖ ಅವರೊಂದಿಗೆ ನಿಂತು ಫೋಟೊವನ್ನು ತೆಗೆಸಿಕೊಂಡಿದ್ದಾರೆ. ಆ ಫೋಟೊವನ್ನು ಶೇರ್ ಮಾಡಿದ್ದಾರೆ.
ಇನ್ನು ಅಭಿಷೇಕ್ ಜೊತೆ ಪೃಥ್ವಿ ಭಟ್ ವಿವಾಹವಾಗುತ್ತಿದ್ದಂತೆ ಹಿರಿಯ ಗಾಯಕ ಹಾಗೂ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಅವರ ಮೇಲೆ ಆರೋಪ ಹೊರಿಸಲಾಗಿತ್ತು. ಪೃಥ್ವಿ ಭಟ್ ಪೋಷಕರ ವಿರೋಧದ ನಡುವೆ ಅಭಿಷೇಕ್ ಅವರನ್ನು ಮದುವೆ ಆಗಿದ್ದಕ್ಕೆ ನರಹರಿ ದೀಕ್ಷಿತ್ ಅವರೇ ಕಾರಣ ತಂದೆ ಶಿವಪ್ರಸಾದ್ ಆರೋಪಿಸಿದ್ದರು. ಅದಕ್ಕೆ ಪೃಥ್ವಿ ಭಟ್ ಕೂಡ ಕ್ಲಾರಿಟಿ ಕೊಟ್ಟಿದ್ದರು. ಹಾಗೇ ನರಹರಿ ದೀಕ್ಷಿತ್ ಅವರು ಕೂಡ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದರು.


Click it and Unblock the Notifications











