ಹರಿಕೃಷ್ಣ ಸಾವನ್ನ ಕಣ್ಣಾರೆ ಕಂಡ ವ್ಯಕ್ತಿ ಹೇಳಿದ 'ಆಕ್ಸಿಡೆಂಟ್' ಕಥೆ

By Bharath Kumar

ತೆಲುಗು ನಟ ಹಾಗೂ ಖ್ಯಾತ ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರೀಗ ಬರಿ ನೆನೆಪು ಮಾತ್ರ. ಇಂದು (ಆಗಸ್ಟ್ 29) ಮುಂಜಾನೆ ನೆಲ್ಲಗೊಂಡ ಹೆದ್ದಾರಿಯ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.

61 ವರ್ಷದ ಹರಿಕೃಷ್ಣ ಅವರ ಸಾವಿನ ಸುದ್ದಿ ಕೇಳಿ ಒಂದು ಕ್ಷಣ ಎಲ್ಲರು ಆಶ್ಚರ್ಯಕ್ಕೆ ಒಳಗಾಗಿರುವುದಂತೂ ಸುಳ್ಳಲ್ಲ. ಆದ್ರೆ, ತುಂಬಾ ಚೆನ್ನಾಗಿ, ಆರೋಗ್ಯವಾಗಿ ಓಡಾಡಿಕೊಂಡಿದ್ದ ವ್ಯಕ್ತಿ ಹೀಗೆ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಸಾವಿಗೀಡಾಗ್ತಾರೆ ಅಂದ್ರೆ ನಿಜಕ್ಕೂ ಅದಕ್ಕಿಂತ ಘೋರ ಮತ್ತೊಂದಿಲ್ಲ.

ಅಷ್ಟಕ್ಕೂ, ಮುಂಜಾನೆಯೇ ಎದ್ದು ಹರಿಕೃಷ್ಣ ಅವರು ಎಲ್ಲಿಗೆ ಹೊರಟಿದ್ರು.? ಅವರ ಜೊತೆಯಲ್ಲಿ ಯಾರ್ ಇದ್ರು.? ಅವರಿಗೇನಾಗಿದೆ.? ಯಾವ ಕಾರಿನಲ್ಲಿ ಹೊರಿಟಿದ್ದರು ಎಂಬ ಕುತೂಹಲ ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ಮುಂದೆ ಓದಿ.....

ಶುಭಕಾರ್ಯಕ್ಕಾಗಿ ಹೊರಟ್ಟಿದ್ದ ಹರಿಕೃಷ್ಣ.?

ಶುಭಕಾರ್ಯಕ್ಕಾಗಿ ಹೊರಟ್ಟಿದ್ದ ಹರಿಕೃಷ್ಣ.?

ಸದ್ಯದ ಮಾಹಿತಿ ಪ್ರಕಾರ, ಸ್ನೇಹಿತರೊಬ್ಬರ ಮಗನ ಮದುವೆಗೆಂದು ನಟ ಹರಿಕೃಷ್ಣ ಅವರು ಮುಂಜಾನೆಯೇ ಎದ್ದು ನೆಲ್ಲೂರು ಕಡೆಗೆ ಪ್ರಯಾಣ ಬೆಳಸಿದ್ದರಂತೆ. ಆದ್ರೆ, ಇದೇ ಅವರ ಕೊನೆಯ ಪ್ರಯಾಣ ಆಗುತ್ತೆ ಎಂಬುದನ್ನ ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ಶುಭಕಾರ್ಯಕ್ಕಾಗಿ ಹೋಗುತ್ತಿದ್ದವರಿಗೆ ಅಶುಭವಾಗಿದೆ.

ಒಟ್ಟು ಮೂರು ಜನ ಇದ್ರು...

ಒಟ್ಟು ಮೂರು ಜನ ಇದ್ರು...

ನಂದಮೂರಿ ಹರಿಕೃಷ್ಣ ಅವರು ತೆರೆಳುತ್ತಿದ್ದ ಕಾರಿನಲ್ಲಿ ಒಟ್ಟು ಮೂರು ಜನ ಇದ್ದರು ಎಂದು ತಿಳಿದುಬಂದಿದೆ. ಸ್ವತಃ ಹರಿಕೃಷ್ಣ ಅವರೇ ಕಾರು ಚಾಲನೆ ಮಾಡುತ್ತಿದ್ದರು. ಅವರ ಜೊತೆ ಶಿವಾಜಿ ಮತ್ತು ಇನ್ನೊಬ್ಬರು ಇದ್ದರು. ಹರಿಕೃಷ್ಣ ಅವರಿಗೆ ಗಂಭೀರ ಗಾಯವಾಗಿ ಸಾವನ್ನಪಿದರು. ಆದ್ರೆ, ಶಿವಾಜಿ ಮತ್ತು ಇನ್ನೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನ ಸ್ಕಿಡ್ ಆಯ್ತು

ವಾಹನ ಸ್ಕಿಡ್ ಆಯ್ತು

ಪ್ರಾಥಮಿಕ ವರದಿ ಪ್ರಕಾರ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಕಾರಿನಲ್ಲಿ ಹರಿಕೃಷ್ಣ ಅವರ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಶಿವಾಜಿ ಕೂಡ ಅದನ್ನೇ ಹೇಳ್ತಾರೆ. ''ಫಂಕ್ಷನ್ ಗೆಂದು ಹೋಗುತ್ತಿದ್ದೇವು, ನಾನು, ಹರಿಕೃಷ್ಣ ಸರ್, ಇನ್ನೊಬ್ರು ಸ್ನೇಹಿತರು ಇದ್ವಿ. ಸರ್ ಕಾರ್ ಡ್ರೈವ್ ಮಾಡ್ತಿದ್ರು. ಏನಾದರೂ ಅಡ್ಡ ಬಂತಾ ಎನ್ನುವುದರ ಬಗ್ಗೆ ಗೊತ್ತಾಗಿಲ್ಲ, ಆದ್ರೆ, ಕಲ್ಲು ಸಿಕ್ಕಿ ಸ್ಕಿಡ್ ಆಯ್ತು '' ಎಂದು ಶಿವಾಜಿ ಹೇಳಿದ್ದಾರೆ.

ಎನ್.ಟಿ.ಆರ್ ಪುತ್ರ ಹರಿಕೃಷ್ಣ

ಎನ್.ಟಿ.ಆರ್ ಪುತ್ರ ಹರಿಕೃಷ್ಣ

ತೆಲುಗು ಸೂಪರ್ ಸ್ಟಾರ್ ಹಾಗೂ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮ ರಾವ್ (ಎನ್ ಟಿ ಆರ್) ಅವರ ನಾಲ್ಕನೇ ಪುತ್ರ ಹರಿಕೃಷ್ಣ. ಜಾನಕಿ ರಾಮ್, ಕಲ್ಯಾಣ ರಾಮ್, ಸುಹಾಸಿನಿ ಮತ್ತು ಜೂನಿಯರ್ ಎನ್‌ಟಿಆರ್ ನಾಲ್ಕು ಜನ ಮಕ್ಕಳು. ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ಹರಿಕೃಷ್ಣ 'ರಾಮ್ ರಹೀಮ್' (1974), 'ಲಹಿರಿ ಲಹಿರಿ ಲಹಿರಿ' (2002), 'ಸೀತಯ್ಯ' (2003) ಅಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು.

More from Filmibeat

English summary
Sivaji, who is travelled with harikrishna in car, he has revealed that the car has skidded all of a sudden and met with the accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X