For Quick Alerts
  ALLOW NOTIFICATIONS  
  For Daily Alerts

  'ಸಾವಿರುಪಾಯಿಗೆ ಸ್ವರ್ಗ' ಈ ಕಿರುಚಿತ್ರಕ್ಕೆ ಕಾಶಿನಾಥ್, ಉಪ್ಪಿನೇ ಸ್ಪೂರ್ತಿ!

  |

  ಸಿನಿಪ್ರಿಯರಿಗೆ ಜೀವನದಲ್ಲೊಂದು ಸಿನಿಮಾವನ್ನಾದರೂ ನಿರ್ದೇಶನ ಮಾಡಬೇಕು ಅನ್ನೋ ಆಸೆ ಇರುತ್ತೆ. ಟಿಕ್ ಟಾಕ್ ಸ್ಟಾರ್ ಅಲ್ಲು ರಘುಗೆ ಕೂಡ ಇಂತಹ ಆಸೆ ಇದ್ದೇ ಇತ್ತು. ಅದಕ್ಕೆ ತಮ್ಮ ಜೀವನದಲ್ಲಿ ಹೊಸದೊಂದು ಹೆಜ್ಜೆಯನ್ನು ಇಟ್ಟಿದ್ದಾರೆ. ಅದುವೇ ಸಿನಿಮಾ ನಿರ್ದೇಶನ.

  ಟಿಕ್ ಟಾಕ್ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾ ಮಿಂಚಿದ್ದ ಅಲ್ಲು ರಘು ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಕಿರುಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸದ್ಯ 'ಸಾವಿರುಪಾಯಿಗೆ ಸ್ವರ್ಗ' ಅನ್ನೋ ಟೈಟಲ್ ಇಟ್ಟು ಶಾರ್ಟ್ ಫಿಲ್ಮ್ ಮಾಡಿದ್ದಾರೆ. ಈ ಕಿರುಚಿತ್ರ ಈಗಾಗಲೇ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

  'ಸಾವಿರುಪಾಯಿಗೆ ಸ್ವರ್ಗ' ಕಿರುಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಗೇ ಈ ಕಿರುಚಿತ್ರದಲ್ಲಿ ಶಿವಪುತ್ರ ಯಶಾರಾದ, ವರುಣ್ ಆರಾಧ್ಯಾ, ರಶ್ಮಿತಾ ಗೌಡ ಕೂಡ ನಟಿಸಿದ್ದಾರೆ. ಡಿಂಡಿಮ ಸಂಭಾಷಣೆ, ರಾಘವ್ ಹಾಗೂ ಅಭಿನಂದನ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಚಲ್ಲ ಛಾಯಾಗ್ರಾಹಣ, ಕೃಷ್ಣ ಸುಜನ್ ಸಂಕಲನವಿದೆ.

  ಮೊದಲ ಕಿರು ಚಿತ್ರ ನಿರ್ದೇಶನದ ಖುಷಿಯಲ್ಲಿರೋ ಅಲ್ಲು ರಘು "ಇದು ನನ್ನ ನಿರ್ದೇಶನದ ಮೊದಲ ಕಿರುಚಿತ್ರ. ಈ ಚಿತ್ರಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಜನ ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಈ ಕಿರುಚಿತ್ರ ಮಾಡಲು ಸಾಧ್ಯವಾಯ್ತು ಎಲ್ಲರಿಗೂ ನನ್ನ ಧನ್ಯವಾದಗಳು. ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಪೂರ್ತಿ. " ಎಂದು ಹೇಳಿದ್ದಾರೆ.

  Social Media Star Allu Raghu Directed Debut Short Movie Savirupayige Swarga
  ಇನ್ನು ಸಿನಿಮಾ ಹೀರೊ ನಿರ್ದೇಶಕ ರಘುಗೆ ಧನ್ಯವಾದಗಳನ್ನು ಹೇಳಿದ್ದಾರೆ. " ನನಗೆ ಹೀರೋ ಆಗಬೇಕು ಎಂದು ಬಹಳ ಆಸೆ ಇತ್ತು ಈ ಚಿತ್ರದ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇನ್ನು ಹೆಚ್ಚು ಸಿನಿಮಾಗಳನ್ನು ಮಾಡುತ್ತೇವೆ. ಎಲ್ಲರ ಸಪೋರ್ಟ್ ನಮ್ಮ ತಂಡದ ಮೇಲೆ ಹೀಗೆ ಇರಲಿ. ಅಲ್ಲು ರಘು ಅವರ ಬಳಿ ಹಲವಾರು ಕಥೆಗಳಿವೆ ಅವರಿಗೂ ನಿಮ್ಮ ಸಹಕಾರ ಹೀಗೆ ಇರಲಿ" ಎಂದು ವರುಣ್ ಆರಾಧ್ಯ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

  ಹಾಗೇ ನಟಿ ರಶ್ಮಿತ ಗೌಡಗೂ ಇದು ಮೊದಲ ಕಿರುಚಿತ್ರ. ಅಲ್ಲದೆ ಭರತನಾಟ್ಯಂ ಡಾನ್ಸರ್ ಆಗಿದ್ದರೂ, ಮಾಡೆಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಟನೆ ಇಷ್ಟವಿದ್ದಿದ್ದರಿಂದ ಈ ಚಿತ್ರದಲ್ಲಿ ನಟಿಸಿದ್ದಾರೆ. " ಈ ಸಿನಿಮಾದಲ್ಲಿ ನಟಿಸಿದ್ದು ತುಂಬಾ ಖುಷಿ ಇದೆ. ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ತುಂಬಾ ಧನ್ಯವಾದಗಳು." ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

  English summary
  Social Media Star Allu Raghu Directed Debut Short Movie Savirupayige Swarga,Know More.
  Wednesday, December 28, 2022, 23:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X