"ಅವನಿಗೆ ಕೆಲಸ ಬರಲ್ಲ.. ಸುಮ್ಮನೆ ಅಲ್ಲಾಡಿಸ್ತಾನೆ ಅಷ್ಟೆ"; ರಾಹುಲ್ ವಿರುದ್ಧ ಸಿಡಿದೆದ್ದ ಬೆಳ್ಳುಳ್ಳಿ ಕಬಾಬ್ ಭಟ್ರು!

ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಆಕ್ಟಿವ್ ಆಗಿರೋರು, ಯಾರು ಬೇಕಾದರೂ, ಯಾವಾಗ ಬೇಕಾದ್ರೂ ಫೇಮಸ್ ಆಗಬಹುದು. ಒಂದೇ ಒಂದು ವಿಡಿಯೋ ರಾತ್ರೋ ರಾತ್ರಿ ಅವರನ್ನು ಸ್ಟಾರ್ ಮಾಡಿಬಿಡಬಹುದು. ಇಂತಹ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಸದ್ಯ ಇಬ್ಬರು ವ್ಯಕ್ತಿಗಳು ಕರ್ನಾಟಕದಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಅವರೇ ಬೆಳ್ಳುಳ್ಳಿ ಕಬಾಬ್ ಚಂದ್ರು. ಇನ್ನೊಬ್ಬರು ರಾಹಲ್ಲಾ ಅಲಿಯಾಸ್ ರಾಹುಲ್.

ಬೆಳ್ಳುಳ್ಳಿ ಕಬಾಬ್ ಮಾಡುವ ಆತುರದಲ್ಲಿ ಹೋಟೆಲ್ ಮಾಲೀಕ ಚಂದ್ರು, "ಅಲ್ಲಾಡ್ಸು ರಾಹುಲ್ಲಾ" ಅಂದಿದ್ದಷ್ಟೇ. ರಾಹುಲ್‌ ಕೂಡ ಫೇಸ್ ಆಗಿಬಿಟ್ಟ. ಈಗ ದಿನ ಬೆಳೆಗಾದರೆ, ಸೋಶಿಯಲ್ ಮೀಡಿಯಾಗಳಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಹಾಗೂ ರಾಹುಲ್ ಬಗ್ಗೆನೇ ಚರ್ಚೆ. ಇವರನ್ನಿಟ್ಟುಕೊಂಡು ದಿನಕ್ಕೆ ಒಂದಲ್ಲ ಒಂದು ವಿಡಿಯೋ ಮಾಡುತ್ತಲೇ ಇರುತ್ತಾರೆ. ಇಷ್ಟು ದಿನ ಕನ್ನಡಿಗರ ಬಾಯಲ್ಲಿ ರಾಹುಲ್ಲಾ ಹೊಗಳಿಕೆ ಮಾತುಗಳನ್ನೇ ಕೇಳುತ್ತಿದ್ದ. ಈಗ ಒಬ್ಬ ವಿರೋಧಿ ಹುಟ್ಟಿಕೊಂಡಿದ್ದಾರೆ.

Social media star Bellulli Kabab Chandru head cook Nagaraj angry on Rahul

ಇದೇ ಬೆಳ್ಳುಳ್ಳಿ ಕಬಾಬ್ ಹೊಟೇಲ್‌ನಲ್ಲಿ ಹೆಡ್ ಕುಕ್ ಆಗಿ ಕೆಲಸ ಮಾಡುತ್ತಿರುವ ನಾಗರಾಜ್ ಎಂಬುವವರು ರಾಹುಲ್ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ರಾಹುಲ್ ವಿರುದ್ಧ ಹೆಡ್ ಕುಕ್ ನಾಗರಾಜ್ ಗರಂ ಆಗಿದ್ದೇಕೆ? ವಿಡಿಯೋದಲ್ಲಿ ರಾಹುಲ್ ಬಗ್ಗೆ ಅಂತಹದ್ದೇನಿದೆ? ತಿಳಿಯಲು ಮುಂದೆ ಓದಿ.

ಬೆಳ್ಳುಳ್ಳಿ ಕಬಾಬ್ ಚಂದ್ರು ಹೆಡ್ ಕುಕ್ ಗರಂ

ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದ್ದಂತೆ ನಾಗರಾಜ್ ರಾಂಗ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದರಲ್ಲಿ ರಾಹುಲ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. "ನಮಸ್ಕಾರ.. ನಾನು ನಿಮ್ಮ ಮನೆಯ ಚಂದ್ರು ಬಲಗೈ ಭಂಟ ನಾಗರಾಜ್. ಚಂದ್ರು ಮಿಲಿಟರಿ ಹೋಟೆಲ್‌ನ ಹೆಡ್ ಲುಕ್. ಇಲ್ಲಿ ಯಾವನೂ ರಾಹುಲ್ ಅಲ್ಲ. ನಮ್ಮ ಬಾಸ್ ಚಂದ್ರಣ್ಣ, ಅವರಿದ್ದರೆ ನಾನು. ನಾನಿದ್ದರೆ ಚಂದ್ರಣ್ಣ. ಅದರ ಮುಂದೆ ಬಿಗ್ ಬಾಸ್ ಅದು ಇದು ಯಾವುದೂ ಇಲ್ಲ. ಇಲ್ಲಿ ನಾನು ಕಷ್ಟ ಪಟ್ಟರೆ, ನಮ್ಮ ಯಜಮಾನರು ಕಷ್ಟ ಪಟ್ಟರೆ ಶ್ರಮ. ಆ ಶ್ರಮ ಜೀವಿಗಳ ಫೋಟೊ ತೆಗೆದುಕೊಳ್ಳಿ, ಲೈವ್ ಕೊಡಿ. ಕಮೆಂಟ್ ಹಾಕಿ ಇಷ್ಟಪಡ್ತೀನಿ." ಎಂದು ನಾಗರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.

Social media star Bellulli Kabab Chandru head cook Nagaraj angry on Rahul

ಇದೇ ಬೆಳ್ಳುಳ್ಳಿ ಕಬಾಬ್ ಚಂದ್ರು ಜೊತೆ ಸುಮಾರು 12 ವರ್ಷಗಳಿಂದ ನಾಗರಾಜ್ ಕೆಲಸ ಮಾಡಿಕೊಂಡಿದ್ದಾರೆ. ಈ ಬಗ್ಗೆನೂ ಹೇಳಿಕೊಂಡಿದ್ದಾರೆ. "ಸುಮ್ಮನೆ ಅಲ್ಲಾಡಿಸೋಕೆ ಏನು? ನಾನು ಅಲ್ಲಾಡಿಸಿಬಿಡ್ತೀನಿ ಏನಾಗುತ್ತೆ. ಶ್ರಮ ಪಡೆಬೇಕಲ್ಲ. ನನ್ನ ಎದುರು ಶ್ರಮ ಪಡುವುದಕ್ಕೆ ಹೇಳಿ. ಆಗ ನಾನು ಮಾತಾಡುತ್ತೇನೆ. ಇವನು ಏನು ಶ್ರಮ ಪಡ್ತಾನೆ. ದುರಹಂಕಾರ ಜಾಸ್ತಿ. ನೋಡಿ ಇಲ್ಲಿ ಚಂದ್ರು ಸರ್ ನಮಗೆ ಬಾಸ್. ಅವರೇ ನಮ್ಮನ್ನು ಕರ್ಕೊಂಡು ಬಂದು ಟ್ರೈನಿಂಗ್ ಕೊಟ್ಟಿದ್ದಾರೆ. ನಾನು ಅವರ ಹತ್ತಿರ 12 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅವರಿಂದ ನಾನು. ನನ್ನಿಂದ ಅವರಲ್ಲ. " ಎಂದಿದ್ದಾರೆ.

"ರಾಹುಲ್ ಒಬ್ಬ ವೇಸ್‌ಬಾಡಿ"

ಇದೇ ವಿಡಿಯೋದಲ್ಲಿ ಶ್ರಮ ಜೀವಿಗಳನ್ನು ಬೆಳೆಸಿ, ವೇಸ್ಟ್ ಬಾಡಿಗಳನ್ನಲ್ಲ ಅಂತ ಖಾರವಾಗಿ ಹೇಳಿದ್ದಾರೆ. "ಒಂದು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಶ್ರಮ ಜೀವಿಯನ್ನು ಬೆಳೆಸಿ. ವೇಸ್ಟ್ ಬಾಡಿಯನ್ನು ಬಿಟ್ಟು ಬಿಡಿ. ಕರಿಮಣಿ ಮಾಲೀಕ ಅಂತ ಬಿಟ್ಬಿಟ್ರೆ ಅವನು ಟ್ರೆಂಡ್ ಆಗ್ಬಿಟ್ಟ. ಸುಮ್ಮನೆ ವೇಸ್ಟ್. ಅವನು ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದಾನಾ? ಇದೊಂದು ಡೈಲಾಗ್‌ಗೆ ಎಲ್ಲಾ ಕಡೆ ಹೈಲೈಟ್ ಆಗ್ಬಿಟ್ಟ." ಎಂದು ಹೇಳಿದ್ದಾರೆ.

"ರಾಹುಲ್‌ಗೆ ದುರಹಂಕಾರ ಬಂದಿದೆ"

ರಾಹುಲ್ ಸೋಶಿಯಲ್‌ ಮೀಡಿಯಾ ಸ್ಟಾರ್ ಆದ್ಮೇಲೆ ದುರಹಂಕಾರ ಬಂದಿದೆ. ಕೆಲಸ ಮಾಡಲ್ಲ ಅಂತ ಸಿಟ್ಟಿಗೆದ್ದಿದ್ದಾರೆ. "ಇವನಿಗೂ ತುಂಬಾ ದುರಹಂಕಾರ ಬಂದಿದೆ. ಏನು ಕೆಲಸ ಬರೋದಿಲ್ಲ. ಸುಮ್ಮನೆ ಅಲ್ಲಾಡಿಸುತ್ತಾನೆ ಅಷ್ಟೆ. ಏನಿದ್ರೂ ಶ್ರಮ ಜೀವಿ ನಾನು. ನಾಗರಾಜ್ ಅಂತ. ಚಂದ್ರಣ್ಣನ ಬಲಗೈ ಭಂಟ. ನಾವು ಈತರ ಮುಂದೆ ಬರೋದಿಲ್ಲ. ಈ ಪೋಸ್ ಕೊಟ್ಕೊಂಡು ಹೈಲೈಟ್ ಆಗೋದು ನಮಗೆ ಇಷ್ಟವಿಲ್ಲ. ನಮ್ಮದೇನಿದ್ದರೂ, ಕಷ್ಟ ಪಡಬೇಕು ಅಷ್ಟೇ." ಎಂದಿದ್ದಾರೆ.

More from Filmibeat

English summary
Bellulli Kabab Chandru hotel head cook Nagaraj angry on Rahul.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X