'ಕೋಟಿಗೊಬ್ಬ 3' ಬಳಿಕ ದರ್ಶನ್ ಜೊತೆ ಸೂರಪ್ಪ ಬಾಬು ಸಿನಿಮಾ: ದಾಸನ ಬರ್ತ್‌ಡೇಯಂದು ಅಧಿಕೃತ ಘೋಷಣೆ!

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಒಂದಿಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗುತ್ತವೆ. ಚಾಲೆಂಜಿಂಗ್ ಸ್ಟಾರ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ಕೂಡ ಕ್ಯೂನಲ್ಲಿ ನಿಂತಿದ್ದಾರೆ. ಈ ಹೊತ್ತಲ್ಲೇ ಸೂರಪ್ಪ ಬಾಬುಗೂ ದರ್ಶನ್ ಕಾಲ್‌ ಶೀಟ್ ಕೊಟ್ಟಿದ್ದಾರೆ ಅನ್ನೋ ಸುದ್ದಿನೂ ಇತ್ತು. ಆ ಸುದ್ದಿ ಈಗ ನಿಜವಾಗಿದೆ.

ನಿರ್ಮಾಪಕ ಸೂರಪ್ಪ ಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಧಿಕೃತವಾಗಿ 'ಪ್ರೊಡಕ್ಷನ್ ನಂ 1' ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅನೌನ್ಸ್ ಮಾಡಿದ್ದಾರೆ.

Soorappa Babu Officially Announced Movie With Darshan On Birthday

ಸೂರಪ್ಪ ಬಾಬು ಈ ಹಿಂದೆ 'ಕೋಟಿಗೊಬ್ಬ 3' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ರಿಲೀಸ್ ವೇಳೆ ವಿತರಕರು ಹಾಗೂ ಸೂರಪ್ಪ ಬಾಬು ನಡುವಿನ ವ್ಯವಹಾರ ಹಿಂದೆ ಮುಂದೆ ಆಗಿದ್ದರಿಂದ ಒಂದು ದಿನ ತಡವಾಗಿ ರಿಲೀಸ್ ಆಗಿತ್ತು. ಹೀಗಾಗಿ ನಷ್ಟ ಆನುಭವಿಸಿದ್ದರು. ಈಗ ಆ ಎಲ್ಲಾ ಸಂಕಷ್ಟದಿಂದ ಹೊರಬಂದು ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ.

ಈಗಾಗಲೇ ದರ್ಶನ್ ಹಾಗೂ ಸೂರಪ್ಪ ಬಾಬು ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆ ಬಳಿಕಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

Soorappa Babu Officially Announced Movie With Darshan On Birthday

ದರ್ಶನ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಆಗಿರೋದು ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ. ಸದ್ಯ ದರ್ಶನ್ ಬರ್ತ್‌ಡೇ ಸಂಭ್ರಮದಲ್ಲಿ ಮಿಂದೇಳುತ್ತಿರುವ ಅಭಿಮಾನಿಗಳಿಗೆ ಒಂದ್ಕಡೆ 56ನೇ ಸಿನಿಮಾ ಟೈಟಲ್ ಹಾಗೂ ಹೊಸ ಸಿನಿಮಾ ಅನೌನ್ಸ್ ಆದ್ದು ಉಡುಗೊರೆಯನ್ನೇ ನೀಡಿದಂತಾಗಿದೆ.

More from Filmibeat

English summary
Soorappa Babu Officialy Announced Movie With Darshan On Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X