twitter
    For Quick Alerts
    ALLOW NOTIFICATIONS  
    For Daily Alerts

    ಫೋಟೋ ಆಲ್ಬಂ: ತಮಿಳು ಸ್ಟಾರ್ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ-ಶಿವಣ್ಣ ಭಾಗಿ

    By Suneetha
    |

    ದಕ್ಷಿಣ ಭಾರತದ ಕಲಾವಿದರ ಸಂಘದ ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ ದಕ್ಷಿಣ ಭಾರತದ ಎಲ್ಲಾ ನಟರು ಒಗ್ಗೂಡಿದ್ದಾರೆ. ಈ ಕಟ್ಟಡ ನಿರ್ಮಾಣದ ಅಂಗವಾಗಿ ಒಂದು ದಿನದ ಸ್ಟಾರ್ಸ್ ಕ್ರಿಕೆಟ್ ಲೀಗ್ ಅನ್ನು ಹಮ್ಮಿಕೊಳ್ಳಲಾಗಿತ್ತು.

    ಹೌದು ಏಪ್ರಿಲ್ 17, ಭಾನುವಾರದಂದು ಎಲ್ಲಾ ತಮಿಳು ಸ್ಟಾರ್ ನಟ-ನಟಿಯರು ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ಚೆನ್ನೈ ನಲ್ಲಿ ಒಂದಾಗಿದ್ದರು. 'ನಡಿಗರ ಸಂಘ'ದ ವತಿಯಿಂದ 'ನಚ್ಚತ್ತಿರ (ನಕ್ಷತ್ರ) ಕ್ರಿಕೆಟ್' ಅಂತ ತಮಿಳು ಸ್ಟಾರ್ ನಟರಿಗಾಗಿಯೇ ಈ ಕ್ರಿಕೆಟ್ ಲೀಗ್ ಹಮ್ಮಿಕೊಳ್ಳಲಾಗಿತ್ತು.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

    ಈ ಸ್ಟಾರ್ ಕ್ರಿಕೆಟ್ ಲೀಗ್ ಅನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ನಟರೊಂದಿಗೆ 'ನಡಿಗರ ಸಂಘ'ದ ಪದಾದಿಕಾರಿಗಳು, ಅಧ್ಯಕ್ಷ ನಾಸಿರ್, ಪ್ರಧಾನ ಕಾರ್ಯದರ್ಶಿ ವಿಶಾಲ್ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.

    ಇನ್ನು ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ಮತ್ತು ಮಾಲಿವುಡ್ ನ ಸ್ಟಾರ್ ನಟರೂ ಪಾಲ್ಗೊಂಡಿದ್ದರು. ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟ ಅಂಬರೀಶ್ ದಂಪತಿಗಳು, ತೆಲುಗು ನಟ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಮಲಯಾಳಂ ನಟ ಮಮ್ಮೂಟ್ಟಿ, ನಿವಿನ್ ಪೌಲ್ ಸೇರಿದಂತೆ ಅನೇಕ ನಟರು ಭಾಗವಹಿಸಿದ್ದರು.

    ಲೀಗ್ ಪಂದ್ಯ ನಡೆದ ಬಳಿಕ ನಟ ಸೂರ್ಯ ನೇತೃತ್ವದ 'ಸಿಂಗಮ್ಸ್' ತಂಡ ಹಾಗೂ ಜೀವಾ ನೇತೃತ್ವದ 'ತಂಜಾವೂರ್' ತಂಡದ ನಡುವೆ ಅಂತಿಮ ಪಂದ್ಯ ನಡೆದು ಸೂರ್ಯ ಅವರ ತಂಡ ಜಯಗಳಿಸಿತು. ಇನ್ನು ಏಪ್ರಿಲ್ 17ರಂದು ನಟ ಚಿಯಾನ್ ವಿಕ್ರಂ ಅವರ ಹುಟ್ಟುಹಬ್ಬವಿದ್ದು, ಇದೇ ಸಂದರ್ಭದಲ್ಲಿ ಅವರ ಹುಟ್ಟುಹಬ್ಬ ಕೂಡ ಆಚರಿಸಲಾಯಿತು.[ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!]

    ಚೆನ್ನೈನ ಟಿ.ನಗರ್ ನಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಕ್ರಿಕೆಟ್ ಲೀಗ್ ಪಂದ್ಯಾಟದ ಫೋಟೋ ಆಲ್ಬಂ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...(ಚಿತ್ರಕೃಪೆ: ಫೇಸ್ ಬುಕ್, ಟ್ವಿಟ್ಟರ್)

    English summary
    South film industry actors and actress on Sunday (April 17) came together and took part in a one-day Lebara Natchathira (stars) Cricket League organised in Chennai by the South Indian Artist’s Association (SIAA) for raising funds for construction of a building for it, a long standing dream.
    Tuesday, April 19, 2016, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X