"ತೆಲುಗಿನಲ್ಲಿ ಯಾರ ಜೊತೆನೋ ಮಲಗಿದ್ಲು ಚಾನ್ಸ್ ಸಿಗ್ತು ಅಂದ್ರು.. ಅಲ್ಲಿ ಬರತ್ತೆ ಅಂದ್ರೆ ಕನ್ನಡದಲ್ಲಿ ಬರೋದಿಲ್ವಾ?"

ಕನ್ನಡದ ನಟಿ ಸೌಮ್ಯಾ ರಾವ್ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇದ್ದಾರೆ. ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದವರು ಕಿರುತೆರೆ ಕಡೆ ವಾಲಿದ್ದರು. ಆದರೆ, ಅದ್ಯಾಕೋ ಕನ್ನಡದಲ್ಲಿ ಅವರು ಹೆಚ್ಚು ಸೀರಿಯಲ್‌ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ತನ್ನ ವೃತ್ತಿ ಬದುಕನ್ನು ಮುಂದುವರೆಸುವುದಕ್ಕೆ ತೆಲುಗು ಹಾಗೂ ತಮಿಳು ಕಿರುತೆರೆಯ ಕಡೆಗೆ ಪಯಣ ಬೆಳೆದಿದ್ದರು. ಅಲ್ಲಿ ಅವರಿಗೆ ತಕ್ಕ ಮಟ್ಟಿಗೆ ಯಶಸ್ಸು ಕೂಡ ಸಿಕ್ಕಿದೆ.

ಒಂದಿಷ್ಟು ವರ್ಷಗಳಿಂದ ಸೌಮ್ಯಾ ರಾವ್ ಕನ್ನಡ ಕಿರುತೆರೆಯಿಂದ ದೂರವೇ ಉಳಿದಿದ್ದರು. ಆದ್ರೀಗ ದಿಢೀರನೇ ಸದ್ದು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತೆಲುಗಿನಲ್ಲಿ ನೀಡಿದ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡಿದ್ದರು. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಕನ್ನಡದ ಸಿನಿಮಾ ಮಂದಿಯ ಕಣ್ಣುಗಳನ್ನು ಕೆಂಪಾಗಿಸಿತ್ತು.

Sowmya Rao Controversial Statements on negative comments about getting offers from the Telugu

ಸೌಮ್ಯಾ ರಾವ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕನ್ನಡದ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದರು. ಇದರಲ್ಲಿ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು, ಟ್ರೋಲ್‌ಗಳು, ಕೆಟ್ಟ ಕಾಮೆಂಟ್‌ಗಳಿಗೆ ತಿರುಗೇಟು ನೀಡಿದ್ದಾರೆ. ಅದರಲ್ಲೂ ಅವ್ಯಾಚ ಶಬ್ಧಗಳಿಂದ ನಿಂದಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಯಾವನ ಜೊತೆ ಮಲಗಿದ್ದಾಳೋ ಅದಕ್ಕೆ ಚಾನ್ಸ್ ಕೊಟ್ಟರು ಎಂದು ನಿಂದಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟ ನಟಿಯರನ್ನು ನಿಂದಿಸುವುದು ಇದೇ ಮೊದಲೇನು ಅಲ್ಲ. ಕೆಲವು ಕಿಡಿಗೇಡಿಗಳು ಮನಸ್ಸಿಗೆ ಬಂದಂತೆ ಕಾಮೆಂಟ್‌ಗಳನ್ನು ಮಾಡುತ್ತಾರೆ. ಹಾಗೇ ಸೌಮ್ಯಾ ರಾವ್ ವಿರುದ್ಧವೂ ಹೀಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದರು. ಪಲ್ಲಂಗ ಏರಿದ್ದಕ್ಕೆ ತೆಲುಗು, ತಮಿಳು ಅವಕಾಶಗಳು ಸಿಕ್ಕಿದ್ದು ಅಂತ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರಂತೆ. ಅದಕ್ಕೆ ರಾಜೇಶ್ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೀಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

"ಕೆಲವು ಕಾಮೆಂಟ್‌ಗಳನ್ನು ನೋಡಬೇಕು. ಅವಳು ತೆಲುಗಿನಲ್ಲಿ ಯಾವನ ಜೊತೆ ಮಲಗಿದ್ದಾಳೋ ಏನೋ ಅದಕ್ಕೆ ಚಾನ್ಸ್ ಕೊಟ್ಟರು ಅಂತಾರೆ. ಅರೇ ತೆಲುಗಿನಲ್ಲಿ ಮಲಗುವುದಕ್ಕೆ ಬರೋಳಿಗೆ ಕನ್ನಡದಲ್ಲಿ ಮಲಗೋಕೆ ಬರುವುದಿಲ್ಲವೇ? ಅಲ್ಲಿರೋನು ಗಂಡಸೇ.. ಇಲ್ಲಿರೋನೂ ಗಂಡಸೇ ಅಲ್ವಾ? ಹೀಗೆ ಮಾತಾಡ್ತಿದ್ದಾಳಲ್ಲ ಅಂದುಕೊಳ್ಳಬೇಡಿ. ಅಲ್ಲಿರೋ ಕಾಮೆಂಟ್‌ಗಳಿಗೆ ತಕ್ಕಂತೆ ಉತ್ತರ ಕೊಡಬೇಕು. ಕಲಾವಿದರ ಜೀವನ ತುಂಬಾನೇ ಕಷ್ಟ. ಅಷ್ಟು ಸುಲಭ ಅಲ್ಲ" ಎಂದು ಸೌಮ್ಯಾ ರಾವ್ ಆಕ್ರೋಶ ಹೊರಹಾಕಿದ್ದಾರೆ.

Sowmya Rao Controversial Statements on negative comments about getting offers from the Telugu

ಇಷ್ಟೇ ಅಲ್ಲ, ಸೌಮ್ಯಾ ರಾವ್ ಧರಿಸುವ ಡ್ರೆಸ್ ಬಗ್ಗೆನೂ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುತ್ತಾರಂತೆ. "ನಿಮ್ಮ ಸೆಗ್ಮೆಂಟ್‌ಗೆ ನಾನು ಬ್ಲಾಕ್ ಡ್ರೆಸ್ ಹಾಕಿಕೊಂಡು ಬಂದಿದ್ದೆ. ಅದಕ್ಕೆ ಕನೆಕ್ಟ್ ಮಾಡಿ ಅವಳ ಡ್ರೆಸ್ ನೋಡೋ. ಜಾಕೆಟ್ ಹಾಕೊಂಡು ಬಂದಿಲ್ಲ ಅಂತ ಯಾವನೋ ಕಾಮೆಂಟ್ ಮಾಡುತ್ತಾನೆ. ಅಷ್ಟೊಂದು ಕೆಟ್ಟದಾಗಿದೆಯಾ? ನನಗೇನು ಅನಿಸಲ್ವೇ? ಫುಲ್ ಇರುವ ಗೌನ್ ಅದು. ನಾನು ನಿಂತುಕೊಂಡು ತೋರಿಸಿಲ್ಲ ಅಷ್ಟೆ. ಯಾಕೆ ಆ ಬಟ್ಟೆ ಬಗ್ಗೆ ಕಾಮೆಂಟ್ ಮಾಡುತ್ತಾರೆ? ಇವರಿಗೆ ಬಟ್ಟೆ ಬಿಚ್ಚಿಕೊಂಡು ನಿಂತಿರುವವರೆಲ್ಲ ದೇವತೆಗಳ ತರ ಕಾಣಿಸುತ್ತಾರೆ. ನಾನು ಸ್ವಲ್ಪ ಗ್ಲಾಮರ್ ಆಗಿ ಕಾಣಿಸಿಕೊಂಡರೆ ಗಲೀಜಾಗಿ ಕಾಣಿಸುತ್ತೆವಾ? ಇವೆಂಟ್ ಇದ್ದಾಗ ಎಲ್ಲಾ ಕಡೆ ಪಿನ್ ಹಾಕೊಂಡು ಹೋಗ್ತಿನಿ. ಏನಾದರೂ ಕಂಡರೆ ಚೆನ್ನಾಗಿರಲ್ಲ. ಅದನ್ನು ತೋರಿಸಿ ಫ್ಯಾನ್ ಫಾಲೋಯಿಂಗ್ ಹುಟ್ಟಾಕಿಕೊಳ್ಳುವ ಅವಶ್ಯಕತೆಯಿಲ್ಲ. ಗಾಳಿ ಬಂದಾಗೆಲ್ಲ ತೋರಿಸೋದೆಲ್ಲ ಮಾಡಲ್ಲ" ಎಂದು ಹೇಳಿದ್ದಾರೆ.

ಇನ್ನು ಕಿರುತೆರೆಯಲ್ಲಿ ಅನುಭವ ಹೆಚ್ಚಾದರೆ ಅವರು ಮನೆಗೆ ಹತ್ತಿರ ಆಗುತ್ತಿದ್ದಾರೆ ಅಂತಲೇ ಅರ್ಥ ಎಂದು ಅಲ್ಲಿನ ಸಮಸ್ಯೆಗಳನ್ನು ರಿವೀಲ್ ಮಾಡಿದ್ದಾರೆ. "ಈಗಿನ ಕಾಲದ ಸೀರಿಯಲ್‌ಗಳನ್ನು ನೋಡಿ. 18 ವರ್ಷದ ಹುಡುಗಿಯರೇ ಇವರಿಗೆ ಹೀರೋಯಿನ್‌ಗಳಾಗಬೇಕು. 25 ವರ್ಷ ಆದರೆ, ಹೀರೋಯಿನ್‌ಗಳನ್ನು ಸೇರಿಸಿಕೊಳ್ಳಲ್ಲ. ಅವರಿಗೆ ಗಂಧ-ಗಾಳಿ ಗೊತ್ತಿರಲ್ಲ. ರಂಗಭೂಮಿ ಹಿನ್ನೆಲೆ ಇಲ್ಲದವರೆನ್ನೆಲ್ಲ ತೆಗೆದುಕೊಳ್ಳುತ್ತಾರೆ. ರೀಲ್ಸ್ ಮಾಡೋರು ಬರೋದು ತಪ್ಪಿಲ್ಲ. ಆದರೆ, ರಂಗಭೂಮಿ ಕಲಾವಿದರು ಅವಕಾಶ ವಂಚಿತರಾಗುತ್ತಾರೆ. ಅವರೆಲ್ಲ ಪಾಪ ಹೊಟ್ಟೆಗೆ ಏನು ತಿನ್ನಬೇಕು ಹೇಳಿ? ಇಲ್ಲಿ ಎಕ್ಸ್‌ಪೀರಿಯನ್ಸ್ ಆಗುತ್ತಿದ್ದಂತೆ ಮನೆಗೆ ಹತ್ತಿರ ಆಗುತ್ತಾ ಹೋಗುತ್ತೇವೆ." ಎಂದಿದ್ದಾರೆ.

ಕನ್ನಡದ ಕಿರುತೆರೆಯಲ್ಲಿ 25 ವರ್ಷ ದಾಟಿದವರಿಗೆ ಬೆಲೆನೇ ಇಲ್ಲ ಎಂದು ಆರೋಪಿಸಿದ್ದಾರೆ. "32 ವರ್ಷದ ಹೀರೋಗೆ 28 ವರ್ಷದ ನಟಿ ಅಮ್ಮನ ಕ್ಯಾರೆಕ್ಟರ್ ಮಾಡ್ಬೇಕು ಅಂದರೆ ಸಿಟ್ಟು ಬರಲ್ವಾ? 30 ವರ್ಷಕ್ಕೆಲ್ಲ ಇವರಿಗೆ ಅಮ್ಮನ ಕ್ಯಾರೆಕ್ಟರ್ ಮಾಡಬೇಕಾ? ನಯನತಾರಾ, ಕಾಜಲ್ ಅಗರ್ವಾಲ್ ಎಲ್ಲ ಈಗಲೂ ಹೀರೋಯಿನ್‌ಗಳೇ. 40 ದಾಟಿದ್ದಾರೆ. ಇನ್ನೂ ಅವರು ನಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಸೀರಿಯಲ್‌ಗಳಲ್ಲಿ ಹೆಣ್ಣು ಮಕ್ಕಳೇ ಬೇಕು ಅಂತ ಯಾಕಂತಾರೆ? 25-30 ವರ್ಷದವರು ಮನೆಯಲ್ಲಿ ಕೂರಬೇಕಾ? ಪಾಪ ಅವರು ಹೊಟ್ಟೆಗೆ ಅನ್ನ ತಿನ್ನುವುದು ಬೇಡ್ವಾ?" ಎಂದಿದ್ದಾರೆ.

More from Filmibeat

English summary
Sowmya Rao gets angry about negative comments about getting offers from the Telugu film industry;
Read more about: actress controversy tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X