Spandana Death: ಸ್ಪಂದನಾ ಅಂತಿಮ ದರ್ಶನ ಪಡೆದ ಯಶ್.. ವಿಜಯ್ ರಾಘವೇಂದ್ರರನ್ನು ಅಪ್ಪಿ ಸಂತೈಸಿದ ರಾಕಿ ಭಾಯ್!
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ದು:ಖದಲ್ಲಿದ್ದಾರೆ. ತನ್ನ ಬಾಳಲ್ಲಿ ದಿಢೀರನೇ ವಿಧಿಯಾಡಿದ ಆಟದಿಂದ ವಿಜಯ್ ರಾಘವೇಂದ್ರ ಇನ್ನೂ ಚೇತರಿಸಿಕೊಂಡಿಲ್ಲ. ಪತ್ನಿ ಮೃತದೇಹದ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಸ್ಪಂದನಾ ಅಂತಿಮ ದರ್ಶನಕ್ಕೆ ಕನ್ನಡ ಚಿತ್ರರಂಗದಿಂದ, ರಾಜಕೀಯ ಕ್ಷೇತ್ರದಿಂದ ಗಣ್ಯರು ಆಗಮಿಸಿ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ. ಶರಣ್, ತರುಣ್ ಸುಧೀರ್, ವಿನೋದ್ ರಾಜ್, ಉಮಾಶ್ರೀ, ಅಜಯ್ ರಾವ್, ಸೃಜನ್ ಲೋಕೇಶ್ ಸೇರಿದಂತೆ ಚಿತ್ರರಂಗದ ನಟರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಹಾಗೇ ಸ್ಯಾಂಡಲ್‌ವುಡ್ ಮತ್ತೊಬ್ಬ ಸ್ಟಾರ್ ನಟ ಯಶ್ ಕೂಡ ಅಂತಿಮ ದರ್ಶನ ಪಡೆದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಯಶ್ ಆಗಮಿಸಿ ಸ್ಪಂದನಾ ಅಂತಿಮ ದರ್ಶನ ಪಡೆದಿದ್ದಾರೆ. ಹಾಗೇ ಪತ್ನಿ ಕಳೆದುಕೊಂಡು ಶೋಕಸಾಗರದಲ್ಲಿರೋ ವಿಜಯ್ ರಾಘವೇಂದ್ರ ಅಪ್ಪಿಕೊಂಡು ಸಾಂತ್ವಾನ ಹೇಳಿದ್ದಾರೆ.
ಯಶ್ ನೋಡಿ ವಿಜಯ್ ರಾಘವೇಂದ್ರ ಮತ್ತಷ್ಟು ಭಾವುಕರಾಗಿದರು. ಕೆಲ ಹೊತ್ತು ಯಶ್ ಜೊತೆ ವಿಜಯ್ ರಾಘವೇಂದ್ರ ಮಾತಾಡಿದ್ದಾರೆ. ಇತ್ತ ದು:ಖದಲ್ಲಿರೋ ಚಿತ್ರರಂಗದ ಸಹೋದ್ಯೋಗಿಗೆ ಯಶ್ ಸಾಂತ್ವಾನ ಹೇಳಿದ್ದು, ಧೈರ್ಯ ತುಂಬಿದ್ದಾರೆ. ಜೊತೆ ಕೆಲ ಹೊತ್ತು ವಿಜಯ್ ರಾಘವೇಂದ್ರ ಜೊತೆನೇ ಇದ್ದು ನಂತರ ಅಲ್ಲಿಂದ ನಿರ್ಗಮಿಸಿದ್ದಾರೆ.
ಹಾಗೇ ಸ್ಪಂದನಾ ಸಹೋದರನಿಗೆ ಯಶ್ ಸಾಂತ್ವಾನ ಹೇಳಿ, ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ದು:ಖದಲ್ಲಿರೋ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬದೊಂದಿಗೆ ಇದ್ದು ಯಶ್ ನಿರ್ಗಮಿಸಿದ್ದಾರೆ.

ಸ್ಪಂದನಾ ವಿಜಯ್ ರಾಘವೇಂದ್ರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಇಂದು (ಆಗಸ್ಟ್ 9) ಮಧ್ಯಾಹ್ನ ಜರುಗಲಿದೆ. ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಸ್ಪಂದನಾ ಅಂತಿಮ ದರ್ಶನ ಪಡೆಯಲು ವಿಜಯ್ ರಾಘವೇಂದ್ರ ಅಭಿಮಾನಿಗಳು, ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಅಂತ್ಯಕ್ರಿಯೆ ಕಾರ್ಯ ಕೊಂಚ ತಡವಾಗುವ ಸಾಧ್ಯತೆಯಿದೆ.


Click it and Unblock the Notifications











