Spandana Death: 'ಚಿನ್ನಾರಿ ಮುತ್ತ'ನಿಗೀಗ ಪತ್ನಿ ನೆನಪು ಮಾತ್ರ.. ಅಂತ್ಯಕ್ರಿಯೆ ಬಳಿಕ ಸ್ಪಂದನಾ ಟೀನೇಜ್ ಫೋಟೊಗಳು ವೈರಲ್
ಸ್ಯಾಂಡಲ್‌ವುಡ್‌ನ 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಸದಾ ನಗುಮುಖದ ನಟ. ನಗು ನಗುತ್ತಲೇ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಿದ್ದ ಸ್ಟಾರ್ ನಟ. ಬಾಲ ನಟನಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯ್ ರಾಘವೇಂದ್ರ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಾಗೇ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಮುದ್ದಾದ ಹೆಂಡ್ತಿ, ಮಗ ಅಂತ ತನ್ನದೇ ಸುಂದರ ಸಂಸಾರ ಕಟ್ಟಿಕೊಂಡು ಬದುಕು ನಡೆಸುತ್ತಿದ್ದ ವಿಜಯ್ ರಾಘವೇಂದ್ರ ಬಾಳಲ್ಲಿ ಬಿರುಗಾಳಿ ಬೀಸಿತ್ತು. ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದ ವಿಜಯ್ ಪತ್ನಿ ಸ್ಪಂದನಾ ಅಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.

ಪ್ರವಾಸಕ್ಕೆ ತೆರಳಿದ್ದ ಪತ್ನಿ ಮತ್ತೆಂದೂ ಮರಳಿ ಮನೆಗೆ ಬರೋದಿಲ್ಲ ಅನ್ನೋದು ವಿಜಯ್ ರಾಘವೇಂದ್ರ ಊಹಿಸಿರಲೂ ಸಾಧ್ಯವಿಲ್ಲ. ತನಗಿಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ತನ್ನನ್ನೇ ಬಿಟ್ಟು ಬಾರದೂರಿಗೆ ಹೋಗಿದ್ದಾರೆ. ಈ ನೋವನ್ನು ವಿಜಯ್ ರಾಘವೇಂದ್ರ ಅದ್ಹೇಗೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಇದೊಂದು ಕಡೆಯಾದರೆ, ಸ್ಪಂದನಾ ಅವರ ಓಲ್ಡ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸ್ಪಂದನಾ ಟೀನೇಜ್‌ನಲ್ಲಿದ್ದ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸ್ಪಂದನಾ ಅಂತ್ಯಕ್ರಿಯೆಗೂ ಮುನ್ನ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿತ್ತು. ಅಂತ್ಯಕ್ರಿಯೆ ಮುಗಿದ ಬಳಿಕವೂ ಆ ಫೋಟೊ ವೈರಲ್ ಆಗುತ್ತಿದೆ. ವಿಜಯ್ ರಾಘವೇಂದ್ರ ಅಭಿಮಾನಿಗಳು ಸ್ಪಂದನಾರನ್ನು ನೆನೆದು ಭಾವುಕರಾಗಿದ್ದಾರೆ.

ಈ ಟೀನೇಜ್ ಫೋಟೊದಲ್ಲಿ ಸ್ಪಂದನಾ ತೀಳಿ ನೀಲಿ ಹಾಗೂ ನೇರಳೆ ಬಣ್ಣದ ಕಾಂಬಿನೇಷನ್ ಸೀರೆಯುಟ್ಟು ಫೋಟೊ ತೆಗೆಸಿಕೊಂಡಿದ್ದಾರೆ. ಬಹುಶ: ಆ ವೇಳೆಗೆ ಸ್ಪಂದನಾ ವಯಸ್ಸು 13 ರಿಂದ 14 ವರ್ಷ ಇದ್ದಿರಬಹುದು. ಆಗ ಸೀರೆಯುಟ್ಟು ತೆಗೆಸಿಕೊಂಡಿದ್ದ ಫೋಟೊ ನಿಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದರೊಂದಿಗೆ ಶಾಲಾ ದಿನಗಳಲ್ಲಿ ಸ್ನೇಹಿತೆಯರೊಂದಿಗೆ ನಿಂತು ತೆಗೆಸಿಕೊಂಡಿದ್ದ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ಪಂದನಾ ಶೈಕ್ಷಣಿಕ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ತೆಗೆಸಿಕೊಂಡಿದ್ದ ಫೋಟೊ ಎನ್ನಲಾಗಿದ್ದು, ವಿಜಯ್ ಅಭಿಮಾನಿಗಳು ಈ ಫೋಟೊ ನೋಡಿ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ಸ್ಪಂದನಾ ಅಗಲಿದ ಬಳಿಕ ಈ ಎರಡೂ ಫೋಟೊಗಳು ವೈರಲ್ ಆಗಿವೆ. ವಿಜಯ್ ರಾಘವೇಂದ್ರ ಅಭಿಮಾನಿಗಳು ಈ ಫೋಟೊಗಳನ್ನು ಕಣ್ತುಂಬಿಕೊಂಡು ಭಾವುಕರಾಗುತ್ತಿದ್ದಾರೆ. ಇತ್ತ ಸ್ಪಂದನಾ ತನ್ನ ಹಳೆಯ ನೆನಪುಗಳನ್ನೆಲ್ಲ ಬಿಟ್ಟು ಹೋಗಿದ್ದಾರೆ. ವಿಜಯ್ ರಾಘವೇಂದ್ರ ಈಗ ಅವರ ನೆನಪುಗಳಲ್ಲಿಯೇ ಬದುಕಬೇಕಿದೆ.


Click it and Unblock the Notifications











