»   » ವಿಜಯ್ ಮೇಲೆ ಮಲಗೊಲ್ಲ,ಸಿಂಗಾಪುರದಲ್ಲಿ ಐಂದ್ರಿತಾ

ವಿಜಯ್ ಮೇಲೆ ಮಲಗೊಲ್ಲ,ಸಿಂಗಾಪುರದಲ್ಲಿ ಐಂದ್ರಿತಾ

Posted By:
Subscribe to Filmibeat Kannada
Spat between Imran Sardaria and Aindrita Ray
ಐಂದ್ರಿತಾ ರೇಗೆ ವಿದೇಶದಲ್ಲಿ ಶೂಟಿಂಗ್ ಮಾಡೋದು ಅಷ್ಟೇನೂ ಕೂಡಿ ಬರಲ್ವೋ ಏನೋ. ಅದೂ ಸಿಂಗಾಪುರದಲ್ಲಿ. ನಾಗತಿಹಳ್ಳಿ ಮೇಷ್ಟ್ರ ಜೊತೆ ಕಿರಿಕ್ ಮಾಡಿ ಆವಾಂತರ ಸೃಷ್ಟಿಸಿದ್ದ ಐಂದ್ರಿತಾ ಈಗ ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಜೊತೆ ಮನಸ್ತಾಪ ಮಾಡಿಕೊಂಡಿದ್ದಾಳೆ.

ಕೊಬ್ಬರಿ ಮಂಜು ನಿರ್ಮಾಣದ ಚಿತ್ರ ರಜನಿಕಾಂತ ಚಿತ್ರದ ಹೀರೋ ದುನಿಯಾ ವಿಜಯ್. ಆ ಚಿತ್ರದ ಹಾಡಿನ ಶೂಟಿಂಗ್ ಗಾಗಿ ಕೊಬ್ಬರಿ ಮಂಜು ಕೈತುಂಬಾ ದುಡ್ಡು ಕೊಟ್ಟು ಇಮ್ರಾನ್ ಸರ್ದಾರಿಯಾ ಅವರನ್ನು ಸಿಂಗಾಪುರಕ್ಕೆ ಶೂಟಿಂಗ್ ಮಾಡಲು ಕಳುಹಿಸಿದ್ದರು.

ಹಾಡಿನ ದೃಶ್ಯವೊಂದರಲ್ಲಿ ಐಂದ್ರಿತಾ ರೇ ದುನಿಯಾ ವಿಜಯ್ ಮೇಲೆ ಮಲಗುವ ದೃಶ್ಯದ ಶೂಟಿಂಗ್ ನಡೆಯಬೇಕಿತ್ತು. ಆದರೆ ನಾನು ವಿಜಯ್ ಮೇಲೆ ಮಲಗೋಲ್ಲ ನನ್ನಿಂದ ಆ ಶೂಟ್ ಮಾಡೋಕಾಗಲ್ಲಾ ಎಂದು ಐಂದ್ರಿತಾ ರೇ ಹಠ ಹಿಡಿದಿದ್ದಾರೆ.

ಇಮ್ರಾನ್ ಎಷ್ಟು ಕೇಳಿಕೊಂಡರೂ ಐಂದ್ರಿತಾ ಈ ಸನ್ನಿವೇಶದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿಲ್ಲ. ಇದರಿಂದ ಸಿಟ್ಟುಗೊಂಡ ಇಮ್ರಾನ್ 'ನೀನೊಬ್ಬ ವೃತ್ತಿಪರ ಕಲಾವಿದೆಯೇ ಅಲ್ಲ' ಎಂದು ಗುಡುಗಿದ್ದಾರಂತೆ.

ಆ ಘಟನೆಯ ನಂತರ ಐಂದ್ರಿತಾ ಕಣ್ಣೀರ ಕೊಡಿ ಹರಿಸಿದ್ದಾರೆ, ಇಮ್ರಾನ್ ಸಮಾಧಾನ ಪಡಿಸಿದ್ದಾರೆ. ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರದ ಈ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಮಧ್ಯಂತರದ ಮೇಲೆ ನೋಡಿ ಅನ್ನೋ ಹಾಗೆ..

ಬೆಂಗಳೂರಿಗೆ ಬಂದ ಮೇಲೆ ಇಮ್ರಾನ್ ತಾನು ನಿರ್ಮಿಸುತ್ತಿರುವ ಚಿತ್ರವೊಂದಕ್ಕೆ ಫೋಟೋ ಶೂಟ್ ಔಟಿಗಾಗಿ ದಿಗಂತ್ ಅನ್ನು ಸಂಪರ್ಕಿಸಿದ್ದಾರೆ. ದಿಗಂತ್ ಈಗ ಬರುತ್ತೇನೆ, ಅಮೇಲೆ ಬರುತ್ತೇನೆ ಎಂದು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.

ಇಮ್ರಾನ್ ಖುದ್ದು ದಿಗಂತ್ ಅನ್ನು ಭೇಟಿ ಮಾಡಲು ಹೋದಾಗ ನಿಮ್ಮ ಚಿತ್ರದಲ್ಲಿ ನಟಿಸಬಾರದೆಂದು ನನ್ನ ಕ್ಲೋಸ್ ಫ್ರೆಂಡ್ ಐಂದ್ರಿತಾ ಹೇಳಿದ್ದಾರೆ. ಹಾಗಾಗಿ ನಿಮ್ಮ ಚಿತ್ರದಲ್ಲಿ ನಾನು ನಟಿಸೊಲ್ಲ.

ನನಗೆ ನನ್ನ ಪರ್ಸನಲ್ ಲೈಫ್ ಮೊದಲು ಆಮೇಲೆ ಸಿನಿಮಾ ಎಂದು ಇಮ್ರಾನ್ ಗೆ ದಿಗಂತ್ ತಿರುಗೇಟು ನೀಡಿದ್ದಾರೆ. ನನ್ನ ಹೊಸ ಚಿತ್ರಕ್ಕೆ ಈಗಾಗಲೇ ಲಕ್ಷ ಲಕ್ಷ ಸುರಿದಿದ್ದೇನೆ ಎಂದು ಇಮ್ರಾನ್ ತನ್ನ ನೋವು ವ್ಯಕ್ತ ಪಡಿಸುತ್ತಿದ್ದಾರೆ.

ಮೇಕಪ್ ಮ್ಯಾನ್ ಕರೆದುಕೊಂಡು ಬರುವ ಬದಲು ತಾಯಿಯನ್ನು ಸಿಂಗಾಪುರಕ್ಕೆ ಕರೆದುಕೊಂಡು ಬಂದಿದ್ರು . ಇಲ್ಲಿ ಮೇಕಪ್ ಮಾಡುವವರನ್ನು ಕರೆಸಿ ಚಿತ್ರೀಕರಣ ಮಾಡಲು ಆರಂಭಿಸಿದೆವು.

ಕ್ಲೋಸಪ್ ಶಾಟ್ ನಲ್ಲಿ ಭಾಗವಹಿಸೋಲ್ಲಾಂತ ಹೇಳಿದ್ದಕ್ಕೆಲ್ಲಾ ಉಲ್ಟಾ ಹೊಡೆತಾ ಅಂದ್ರು ಐಂದ್ರಿತಾ ಎನ್ನೋದು ಇಮ್ರಾನ್ ಅಳಲು.

ನನ್ನ ನಂಬಿ ನಿರ್ಮಾಪಕರು ಹಾಡಿನ ಚಿತ್ರೀಕರಣಕ್ಕೆ ಕಳುಹಿಸಿದ್ರು, ಅವರಿಗೆ ಏನು ಉತ್ತರ ಹೇಳೋಣ ಎಂದು ಇಮ್ರಾನ್ ಸರ್ದಾರಿಯಾ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ, ಇಮ್ರಾನ್ ಹೇಳಿಕೆ ಎಲ್ಲಾ ಸುಳ್ಳು ಎಂದು ಐಂದ್ರಿತಾ ರೇ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ನಾಯಕ ನಟ ವಿಜಯ್ ಯಾವುದೇ ಹೇಳಿಕೆ ನೀಡಿಲ್ಲ.

ದುನಿಯಾ ಸೂರಿ ನಿರ್ದೇಶನದ ಜಂಗ್ಲಿ ಚಿತ್ರದಲ್ಲಿ ಹಳೇ ಪಾತ್ರೆ.. ಹಳೇ ಕಬ್ಬಿಣ.. ಅನ್ಕೊಂಡು ವಿಜಯ್ ಮತ್ತು ಐಂದ್ರಿತಾ ಹಾಟ್ ಹಾಟ್ ಆಗಿ ಹೆಜ್ಜೆ ಹಾಕಿದ್ದು ಮರೆಯಲಾಗುತ್ತದೆಯೇ?

English summary
Choreographer Imran Sardaria claims, Aindrita Ray refuse to dance some of the steps as per my instruction.
Please Wait while comments are loading...