Dileep Raj: ದಿಲೀಪ್‌ ರಾಜ್ ಜೀವಕ್ಕೆ ಕುತ್ತು ತಂದಿತೇ ಸ್ಮಾರ್ಟ್ ವಾಚ್? ಎಡವಟ್ಟು ಆಗಿದ್ದು ಎಲ್ಲಿ?

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ನಟ ದಿಲೀಪ್ ರಾಜ್ ಸಾವು ಮತ್ತೆ ಆತಂಕ ಮೂಡಿಸಿದೆ. ದಿಲೀಪ್ ರಾಜ್ ಫಿಟ್ ಅಂಡ್ ಫೈನ್ ಆಗಿದ್ದರು. ತಪ್ಪದೇ ಜಿಮ್‌ಗೆ ಹೋಗುತ್ತಿದ್ದರು. ಆಹಾರದಲ್ಲಿ ಕಟ್ಟು ನಿಟ್ಟಾಗಿದ್ದರು. ಶಿಸ್ತಿನಿಂದ ಜೀವನ ನಡೆಸುತ್ತಿದ್ದರೂ ಯಾಕೆ ಹೀಗಾಯ್ತು? ಅನ್ನೋದು ಹಲವರನ್ನು ಕಾಡುತ್ತಿದೆ. ದಿಲೀಪ್ ರಾಜ್ ಎಲ್ಲಿ ಎಡವಟ್ಟು ಮಾಡಿಕೊಂಡರು? ಅಸಲಿಗೆ ಏನಾಯ್ತು? ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮೂವರು ನಟರು ಹೀಗೇ ಹೃದಯಾಘಾತದಿಂದಲೇ ಕೊನೆಯುಸಿರೆಳೆದಿದ್ದಾರೆ. ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಕೂಡ ಫಿಟ್ ಆಗಿದ್ದರು. ರೆಗ್ಯೂಲರ್ ಆಗಿ ಜಿಮ್‌ಗೆ ಹೋಗುತ್ತಿದ್ದರು. ಅವರೂ ಕೂಡ ಹೃದಯಾಘಾತದಿಂದ ಅಗಲಿದರು. ಹಾಸ್ಯ ನಟ ರಾಕೇಶ್ ಪೂಜಾರಿ ಕೂಡ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದರು. ಈಗ ದಿಲೀಪ್ ರಾಜ್ ಕೂಡ ಅದೇ ರೀತಿ ಸಾವನ್ನಪ್ಪಿದ್ದಾರೆ.

Speculation spreading is that Dileep Raj believed smart watch cause death

ದಿಲೀಪ್ ರಾಜ್ ಅಗಲಿದ ಕ್ಷಣದಿಂದ ಒಂದು ವಿಷಯ ಆತಂಕವನ್ನು ಮೂಡಿಸಿದೆ. ದಿಲೀಪ್ ರಾಜ್‌ಗೆ ಎದೆ ನೋವು ಕಾಣಿಸಿಕೊಂಡಾಗ ಅವರು ಸ್ಮಾರ್ಟ್‌ ವಾಚ್‌ನಲ್ಲಿ ಹೃದಯ ಬಡಿತವನ್ನು ಪರೀಕ್ಷಿಸಿಕೊಂಡಿದ್ದರು. ಅದೇ ಅವರ ಜೀವಕ್ಕೆ ಕಂಠಕವಾಯ್ತಾ? ಇಂತಹದ್ದೊಂದು ಚರ್ಚೆಯನ್ನು ಹುಟ್ಟಾಕಿದೆ. ಅಷ್ಟಕ್ಕೂ ನಿನ್ನೆ (ಮೇ 12) ದಿಲೀಪ್ ರಾಜ್ ಬಾಳಲ್ಲಿ ನಡೆದಿದ್ದು ಏನು? ತಿಳಿಯುವುದಕ್ಕೆ ಮುಂದೆ ಓದಿ.

ಕೆಲವು ಮೂಲಗಳ ಪ್ರಕಾರ, ಇತ್ತೀಚೆಗೆ ದಿಲೀಪ್ ರಾಜ್ ಸ್ನೇಹಿತರೊಂದಿಗೆ ಗೋವಾಗೆ ಹೋಗಿದ್ದರು. ಅಲ್ಲಿಯೇ ಅವರಿಗೆ ಲೈಟ್ ಆಗಿ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಅಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಬೆಂಗಳೂರಿಗೆ ಹಿಂತಿರುಗಿದ್ದರು. ಇಂದು (ಮೇ 13) ವೈದ್ಯರೊಂದಿಗೆ ಅಪಾಯಿಂಟ್ಮೆಂಟ್‌ ಕೂಡ ಇತ್ತು. ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು ಎಂದು ಆಪ್ತರು ಹೇಳುತ್ತಾರೆ. ಅಷ್ಟರಲ್ಲೇ ಇಷ್ಟೆಲ್ಲ ನಡೆದು ಹೋಗಿದೆ.

ನಿನ್ನೆ (ಮೇ 12) ರಾತ್ರಿಯೇ ದಿಲೀಪ್ ರಾಜ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು. ಆ ದಿಲೀಪ್ ರಾಜ್ ತಾವು ಧರಿಸಿದ್ದ ಸ್ಮಾರ್ಟ್ ವಾಚ್‌ನಲ್ಲಿ ಹೃದಯ ಬಡಿತವನ್ನು ಪರೀಕ್ಷೆ ಮಾಡಿಕೊಂಡಿದ್ದಾರೆ. ಅದರಲ್ಲಿ ಎಲ್ಲವೂ ನಾರ್ಮಲ್ ಎಂದು ಬಂದಿದೆ. ಹೀಗಾಗಿ ಎದೆ ನೋವನ್ನು ನಿರ್ಲಕ್ಷ್ಯ ಮಾಡಿದರೇ? ಅಥವಾ ವೈದ್ಯಕೀಯ ಪರೀಕ್ಷೆಗೆ ಹೋಗಬೇಕಿದ್ದರಿಂದ ಸುಮ್ಮನಾದರೇ..? ಅದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಸ್ಮಾರ್ಟ್‌ ವಾಚ್ ಈಗ ಚರ್ಚೆಗೆ ಬಂದಿದೆ.

Speculation spreading is that Dileep Raj believed smart watch cause death

ಫಿಟ್ನೆಸ್ ಫ್ರೀಕ್ ಇರುವ ಸಾಕಷ್ಟು ಮಂದಿ ಸ್ಮಾರ್ಟ್ ವಾಚ್ ಅನ್ನು ಧರಿಸುತ್ತಾರೆ. ಅದರಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತಿರುತ್ತಾರೆ. ದಿಲೀಪ್ ರಾಜ್ ಕೂಡ ಹಾಗೇ ಹೃದಯ ಬಡಿತವನ್ನು ಪರೀಕ್ಷೆ ಮಾಡಿಕೊಂಡಿದ್ದಾರೆ. ಅದೇ ಅವರ ಜೀವಕ್ಕೆ ಕುತ್ತು ತಂದಿದೆ. ಈಗ ಯುವಕರಲ್ಲಿ ಸ್ಮಾರ್ಟ್ ವಾಚ್‌ ಅನ್ನು ಎಷ್ಟು ನಿಖರವಾಗಿದೆ? ಅದನ್ನು ನಂಬಬಹುದೇ? ಅನ್ನೋ ಗೊಂದಲ ಮೂಡಿದೆ.

ದಿಲೀಪ್ ರಾಜ್ ಸ್ಮಾರ್ಟ್ ವಾಚ್ ನೋಡಿ ಎಲ್ಲಾ ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡು ಮಲಗಿದ್ದರು. ಆದರೆ, ಮಧ್ಯರಾತ್ರಿ ಮತ್ತೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್ ರಾಜ್ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕ ಶೋಕ ಸಾಗರದಲ್ಲಿ ಮುಳುಗಿದೆ.

English summary
Speculation spreading is that Dileep Raj believed smart watch cause death.
Read more about: heart attack kannada actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X