"ದರ್ಶನ್‌ಗೆ 2.25 ಪೈಸೆ ಮಾತ್ರೆ ನೀಡಿದರೆ ಬಿಪಿ ಕಂಟ್ರೋಲ್‌ಗೆ ಬರುತ್ತೆ, ಸರ್ಜರಿ ಯಾಕಾಗಿಲ್ಲ"; ಎಸ್‌ಪಿಪಿ ಪ್ರಸನ್ನಕುಮಾರ್

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಉಳಿದವರ ಜಾಮೀನು ಅರ್ಜಿ ವಿಚಾರಣೆ ಹೈ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ದರ್ಶನ್ ಹಾಗೂ ಪವಿತ್ರಾ ಗೌಡ ಪರ ವಕೀಲರು ಜಾಮೀನು ನೀಡುವಂತೆ ವಾದವನ್ನು ಮಂಡಿಸಿದ್ದರು. ಇಂದು (ಡಿಸೆಂಬರ್ 6) ಎಸ್‌ಪಿಪಿ ಪ್ರಸನ್ನ ಕುಮಾರ್ ವಾದವನ್ನು ಮಂಡಿಸಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಆರೋಗ್ಯ ಸಮಸ್ಯೆಯಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು, ಸರ್ಜರಿ ಆಗಬೇಕು ಎಂದು ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ವಾದವನ್ನು ಮಂಡಿಸಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ದರ್ಶನ್‌ಗೆ ಹೈಕೋರ್ಟ್‌ ನ್ಯಾಯಾಧೀಶರು ಮಧ್ಯಂತರ ಜಾಮೀನನ್ನು ನೀಡಿದ್ದರು. ಬಳಿಕ ದರ್ಶನ್‌ಗೆ ಪೂರ್ಣ ಪ್ರಮಾಣದ ಜಾಮೀನಿಗಾಗಿ ವಕೀಲರು ಹೈ ಕೋರ್ಟ್‌ನಲ್ಲಿ ವಾದವನ್ನು ಮಂಡಿಸುತ್ತಿದ್ದರು.

SPP Prasanna Kumar interesting argument on Darshan involvement in Renukaswamy case

ಇಂದು (ಡಿಸೆಂಬರ್ 6) ದರ್ಶನ್ ಜಾಮೀನು ಅನ್ನು ವಿರೋಧಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಖಡಕ್ ವಾದವನ್ನು ಮಂಡಿಸಿದ್ದರು. ಇವರ ವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೋಮವಾರ ( ಡಿಸೆಂಬರ್ 9) ಮಧ್ಯಾಹ್ನ 2.30ಕ್ಕೆ ಮುಂದೂಡಿಸಿದ್ದಾರೆ. ಆದರೆ, ಇಂದು (ಡಿಸೆಂಬರ್ 6) ಎಸ್‌ಪಿಪಿ ಪ್ರಸನ್ನ ಕುಮಾರ್ ಮಂಡಿಸಿದ ವಾದ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು.

ದರ್ಶನ್ ಹಾಗೂ ಪವಿತ್ರಾ ಗೌಡ ಪರ ವಕೀಲರು ಮಂಡಿಸಿದ ವಾದದ ವಿರುದ್ಧ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಶ್ನೆ ಮಾಡಿದ್ದರು. ಹಿರಿಯ ವಕೀಲರಾದ ಸಿ. ವಿ. ನಾಗೇಶ್ ಅವರ ವಾದವನ್ನು ಕಟುವಾಗಿ ಟೀಕೆ ಮಾಡಿದ್ದಾರೆ. ದರ್ಶನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆಯಲಾಗಿದೆ. ಆದರೆ, ಇನ್ನೂ ಯಾಕೆ ಸರ್ಜರಿ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ತಕ್ಷಣವೇ ಸರ್ಜರಿ ಆಗಬೇಕೆಂದು ಜಾಮೀನು ಪಡೆದು ಐದು ವಾರ ಆದರೂ ಇನ್ನೂ ಯಾಕೆ ಸರ್ಜರಿ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದರು.

SPP Prasanna Kumar interesting argument on Darshan involvement in Renukaswamy case

ವೈದ್ಯರು ನವೆಂಬರ್ 1 ರಿಂದ ದರ್ಶನ್‌ಗೆ ಬಿಪಿ ಇರುವ ಬಗ್ಗೆ ವರದಿಯನ್ನು ನೀಡುತ್ತಿದ್ದಾರೆ. ಬಿಪಿ ಇರುವುದರಿಂದ ದರ್ಶನ್‌ಗೆ ಸರ್ಜರಿ ಮಾಡಿಲ್ಲ ಎಂದು ವೈದ್ಯರು ವರದಿಯನ್ನು ನೀಡಿದ್ದಾರೆ. ಆದರೆ, 2.25 ಪೈಸೆ ಮಾತ್ರೆ ನೀಡಿದರೆ, ಬಿಪಿ ಕಂಟ್ರೋಲ್‌ಗೆ ಬರುತ್ತೆ. ನಾನು ಮಾತನಾಡಿರುವ ವೈದ್ಯರು ನೀಡಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಾದವನ್ನು ಮಂಡಿದ್ದರು.

ವೈದ್ಯರು ಯಾಕೆ ಸರ್ಜರಿಗೆ ಡೇಟ್ ಫಿಕ್ಸ್ ಆಗಿಲ್ಲ. ಹೌದು, ಇನ್ನೂ ಫಿಸಿಯೋಥೆರಪಿ ಮಾತ್ರ ಮಾಡಿಸುತ್ತಿದ್ದಾರೆ. ಅದನ್ನೇ ಮಾಡುವ ಹಾಗಿದ್ದರೆ, ಜೈಲಿನಲ್ಲಿಯೇ ಮಾಡಬಹುದಿತ್ತು. ವೈದ್ಯರು ಕೊಟ್ಟ ವರದಿ ಸೋಪ್ ಹಾಕೊಳ್ಳಿ, ತಲೆ ಬಾಚಿಕೊಳ್ಳಿ, ಪೌಡರ್ ಹಾಕಿಕೊಳ್ಳಿ ಸಿನಿಮಾ ಹಾಡಿನಂತೆ ವರದಿಯನ್ನು ಸಲ್ಲಿಸುತ್ತಿದ್ದಾರೆ. ಬಿಪಿಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು 2ನೇ ವರದಿಯಲ್ಲೂ ಅದನ್ನೇ ಹೇಳಿದ್ದಾರೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಈ ವೇಳೆ ನ್ಯಾಯಧೀಶರು ಕೂಡ ಜಾಮೀನನ್ನು ಕ್ಯಾನ್ಸಲ್ ಮಾಡುವುದಕ್ಕೆ ಯಾಕೆ ಅರ್ಜಿ ಸಲ್ಲಿಸಿಲ್ಲ ಎಂದು ನ್ಯಾಯಾಧೀಶರು ಕೇಳಿದ್ದರು. ಅದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ಇಂದಲ್ಲ ನಾಳೆ ಸರ್ಜರಿ ಮಾಡುತ್ತಾರೆ ಅಂತಲೇ ಕಾಯುತ್ತಿದ್ದೆ ಎಂದು ಉತ್ತರ ಕೊಟ್ಟಿದ್ದಾರೆ. ಆಗ ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಧ್ಯಂತರ ಜಾಮೀನು ರದ್ದು ಮಾಡುವುದಕ್ಕೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈಗ ಸರ್ಜರಿ ಯಾಕೆ ಮಾಡಿಲ್ಲ ಅನ್ನೋದನ್ನು ಕೋರ್ಟ್‌ಗೆ ಮಾಹಿತಿ ಕೊಡುತ್ತೇವೆ. ವೈದ್ಯರು ಸರ್ಜರಿ ಮಾಡುವ ಬಗ್ಗೆ ನಿರ್ಧರಿಸುತ್ತಾರೆ ಎಂದಿದ್ದಾರೆ.

ಹಾಗೇ ಪವಿತ್ರಾ ಗೌಡ ಪರ ವಕೀಲರು ಮಂಡಿಸಿದ ವಾದಕ್ಕೂ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪವನ್ನು ಮಂಡಿಸಿದ್ದರು. ಫೆಬ್ರವರಿಯಲ್ಲೇ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದರು. ಅದನ್ನು ಪವಿತ್ರಾ ಗೌಡ ಬ್ಲಾಕ್ ಮಾಡಬಹುದಿತ್ತು. ಬೇಕಂತಲೇ ಆ ನಂಬರ್ ಅನ್ನು ಕಳಿಸಿ, ಪವನ್‌ಗೆ ಮೆಸೇಜ್ ಮಾಡುವಂತೆ ಹೇಳಿದ್ದಾರೆ. ಬಳಿಕ ರೇಣುಕಾಸ್ವಾಮಿಯ ಲೋಕೇಶ್ ತಿಳಿದು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ.

More from Filmibeat

English summary
SPP Prasanna Kumar interesting argument on Darshan involvement in Renukaswamy case;
Read more about: darshan case sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X