ದರ್ಶನ್- ರೇಣುಕಾಸ್ವಾಮಿ ಕೇಸ್‌ನಲ್ಲಿ ಚಿಕ್ಕಣ ಪಾತ್ರವೇನು? ತನಿಖೆ ವೇಳೆ ಪೊಲೀಸರಿಗೆ ತಿಳಿದಿದ್ದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ಗೆ ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಲಾಗಿತ್ತು. ಆ ಅವಧಿ ಇನ್ನೇನು ಮುಗಿಯುತ್ತಿದ್ದು, ದರ್ಶನ್ ಮತ್ತೆ ಜೈಲು ಸೇರುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಅದಕ್ಕೀಗ ದರ್ಶನ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧಿಸಿದ ಬಳಿಕ ಚಿಕ್ಕಣ್ಣರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ಪೊಲೀಸರು ವಿಚಾರಣೆ ನಡೆಸಿದ ಬಳಿಕ ಚಿಕ್ಕಣ್ಣನ್ನು ಈ ಕೇಸ್‌ನಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದರು. ಅಲ್ಲದೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಚಿಕ್ಕಣ್ಣನ ಹೇಳಿಕೆ ಪಡೆಯಲಾಗಿದೆ ಎಂದು ವರದಿಗಳು ಆಗಿದ್ದವು.

ಮಧ್ಯಂತರ ಜಾಮೀನು ವಿಚಾರವಾಗಿ ಹೈ ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಪ್ರತಿವಾದವನ್ನು ಮಂಡಿಸಿದ್ದರು. ಈ ವೇಳೆ ಈ ಕೇಸ್‌ನಲ್ಲಿ ಚಿಕ್ಕಣ್ಣ ಹೇಳಿಕೆ ಪಡೆದಿದ್ದು ಏಕೆ? ಅನ್ನುವುದನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಾಡುವ ವೇಳೆ ರಿವೀಲ್ ಮಾಡಿದ್ದಾರೆ. ಪೊಲೀಸರು ಚಿಕ್ಕಣ್ಣನನ್ನು ವಿಚಾರಣೆ ಮಾಡಿದ್ದು ಏಕೆ? ತಿಳಿಯಲು ಮುಂದೆ ಓದಿ.
ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಸ್ಟೋನಿಬ್ರೂಕ್ ರೆಸ್ಟೋರೆಂಟ್‌ನಲ್ಲಿ ಜೂನ್ 8 ರಂದು ರೇಣುಕಾಸ್ವಾಮಿ ಹತ್ಯೆ ಆಗುವ ಮುನ್ನ ನಡೆದ ಪಾರ್ಟಿಯಲ್ಲಿ ದರ್ಶನ್‌ರನ್ನು ಚಿಕ್ಕಣ್ಣ ಭೇಟಿಯಾಗಿದ್ದರು. ಪೊಲೀಸರು ತನಿಖೆ ಮಾಡುವ ವೇಳೆ ಈ ಸುಳಿವು ಸಿಕ್ಕಿತ್ತು. ಆ ವೇಳೆ ದರ್ಶನ್ ಹಾಗೂ ಅವರ ಸಂಗಡಿಗರ ಮಧ್ಯೆ ನಡೆದ ಮಾತುಕತೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಹೇಳಿಕೆ ಪಡೆದಿದ್ದಾರೆ.

ಇಂದು (ಡಿಸೆಂಬರ್ 9) ಹೈಕೋರ್ಟ್‌ನಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸುವ ವೇಳೆ ಚಿಕ್ಕಣ್ಣನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ರೇಣುಸ್ವಾಮಿ ಹತ್ಯೆ ನಡೆಯುವುದಕ್ಕೂ ಮುನ್ನ ದರ್ಶನ್‌ರನ್ನು ಕೆಲವರು ಭೇಟಿಯಾಗಿದ್ದು, ಅವರಲ್ಲಿ ಚಿಕ್ಕಣ್ಣ ಕೂಡ ಇದ್ದರು. ಹಾಗಂತ ಅದೊಂದೇ ಕಾರಣಕ್ಕೆ ವಿಚಾರಣೆ ಮಾಡಿದ್ದರೇ ಎನ್ನುವ ಅನುಮಾನ ಕೂಡ ಇತ್ತು. ಅದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ನಿಖರ ಕಾರಣವೇನು ಅನ್ನೋದನ್ನು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಮೂರನೇ ಆರೋಪಿಯಾಗಿರುವ ಪವನ್ ಪಟ್ಟಣಗೆರೆ ಶೆಡ್‌ನಿಂದ ದರ್ಶನ್ ಪಾರ್ಟಿ ಮಾಡುತ್ತಿದ್ದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ಗೆ ಬಂದಿ ದರ್ಶನ್ ಜೊತೆ ಸಂಭಾಷಣೆ ನಡೆಸಿದ್ದ. ಆ ವೇಳೆ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡ ಇದ್ದರು. ಇದಕ್ಕೆ ಸಾಕ್ಷಿ ಎಂಬಂತೆ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಪಡೆಯಾಗಿದೆ. ದರ್ಶನ್ ಕಿವಿಯಲ್ಲಿ ಪವನ್ ಮಾತುಕತೆ ನಡೆಸಿದ್ದರು ಎನ್ನುವುದಕ್ಕೆ ಚಿಕ್ಕಣ್ಣ ಸಾಕ್ಷಿ ಹೇಳಿದ್ದಾರೆಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ಇದೇ ವೇಳೆ ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಮಂಡಿಸಿದ ವಾದಗಳಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದವನ್ನು ಮಾಡಿದ್ದಾರೆ. ದರ್ಶನ್ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಆರೋಪಿಗಳು ಕೆಲವು ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ರೇಣುಕಾಸ್ವಾಮಿ ರಕ್ತದ ಕಲೆಗಳಿರುವ ಬಟ್ಟೆಯನ್ನು ಒಗೆದಿದ್ದರೂ ಡಿಎನ್‌ಎ ಅವರನ್ನು ಬಿಟ್ಟಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











