ದರ್ಶನ್ ಆರೋಪಗಳಿಗೆ ತಿರುಗೇಟು; ಸುಪ್ರೀಂ ಕೋರ್ಟ್‌ಗೆ ಸಾಕ್ಷ್ಯ ಸಮೇತ ಎಸ್‌ಎಸ್‌ಪಿ ವರದಿ.. ಮುಂದೇನು?
ದರ್ಶನ್ ಜಾಮೀನಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸುಪ್ರೀಂ ಕೋರ್ಟ್ ಹೊರ ಹೋಗಿದ್ದರು. ಜೈಲಿನಲ್ಲಿ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಇಟ್ಟುಕೊಂಡು ಸಲ್ಲಿದ್ದ ಅರ್ಜಿಯಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಈ ಸಂಬಂಧ ಕಾರಾಗೃಹ ಇಲಾಖೆ ಬಳಿ ಸುಪ್ರೀಂ ಕೋರ್ಟ್ ವರದಿ ಕೇಳಿತ್ತು. ಅದಕ್ಕೆ ಎಸ್‌ಪಿಪಿ ಸಾಕ್ಷ್ಯ ಸಮೇತ ವರದಿ ಸಲ್ಲಿಕೆ ಮಾಡಿದ್ದಾರೆಂದು ವರದಿಯಾಗಿದೆ.
ಇತ್ತೀಚೆಗೆ ದರ್ಶನ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮಾಡಿದ ಗಂಭೀರ ಆರೋಪಗಳನ್ನು ಕಾರಾಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ ಹಾಕಿದೆ. ಹೀಗಾಗಿ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿರುವ ಸೌಲಭ್ಯಗಳು ಹಾಗೂ ಅವರು ಮಾಡಿರುವ ಆರೋಪಗಳಿಗೆ ಒಂದೊಂದಾಗಿಯೇ ವಿವರಣೆ ನೀಡಿ, ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು, ದರ್ಶನ್‌ಗೆ ಜಾಮೀನು ವಿಚಾರವಾಗಿ ಮತ್ತೆ ಹೆದರಿಕೆ ಶುರುವಾಗಿದೆ ಎನ್ನಲಾಗಿದೆ.

ಒಂದಿಷ್ಟು ದಿನಗಳು ಸೈಲೆಂಟ್ ಆಗಿದ್ದ ದರ್ಶನ್ ಮತ್ತೆ ಜಾಮೀನಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಅವರು ಜೈಲಿನಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಿದ್ದಾರೆಂಬುವುದನ್ನು ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಅದಕ್ಕೆ ಕಾರಾಗೃಹದ ಅಧಿಕಾರಿಗಳು ಸಿಸಿಟಿವಿ ಹಾಗೂ ಬಾಡಿ ವೋರ್ನ್ ವಿಡಿಯೋ ಸಮೇತ ಎಸ್‌ಪಿಪಿ ಮೂಲಕ ವರದಿ ಸಲ್ಲಿಕೆ ಮಾಡಿದ್ದಾರೆಂದು ವರದಿ ಮಾಡಲಾಗಿದೆ. ಅಷ್ಟಕ್ಕೂ ದರ್ಶನ್ ಮಾಡಿರೋ ಆರೋಪಗಳೇನು ಎಂದು ನೋಡುವುದಾರೇ..
ದರ್ಶನ್ ಸಹ ಖೈದಿಗಳಿಂದ ಬೆದರಿಕೆ ಬರುತ್ತಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಇದು ದರ್ಶನ್ ಮಾಡಿದ ಆರೋಪಗಳಲ್ಲಿ ಪ್ರಮುಖವಾಗಿತ್ತು. ಹಾಗೇ ಜೈಲಿನಲ್ಲಿ ನಿಂದನೆ ಮಾಡಲಾಗುತ್ತಿದೆ. ಪ್ರಚೋದನೆ ನೀಡಲಾಗುತ್ತಿದೆ ಎಂದು ಕೂಡ ಆರೋಪ ಮಾಡಲಾಗಿತ್ತು. ಈ ಎರಡು ಆರೋಪಗಳಿಗೆ ವರದಿ ಸಲ್ಲಿಸಲಾಗಿದೆ. ಅದರಲ್ಲಿ ಜೈಲಿನಲ್ಲಿ ಸಹ ಖೈದಿಗಳ ಜೊತೆ ದರ್ಶನ್‌ಗೆ ಸಂಪರ್ಕವಿಲ್ಲ. ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ವರದಿಯಲ್ಲಿ ಸಲ್ಲಿಸಲಾಗಿದೆ.
"ನನ್ನ ಬದುಕಿನ ಹಕ್ಕನ್ನೇ ಕಸಿಯಲಾಗಿದೆ" ಎಂದು ದರ್ಶನ್ ಮಾಡಿದ ಮತ್ತೊಂದು ಗಂಭೀರ ಆರೋಪ. ಇದಕ್ಕೆ ಕಾರಾಗೃಹ ಇಲಾಖೆ ಸುದೀರ್ಘವಾದ ವರದಿಯನ್ನು ರೆಡಿ ಮಾಡಿಕೊಟ್ಟಿದೆ ಎನ್ನಲಾಗಿದೆ. ಜೈಲಿನ ನಿಯಮಾವಳಿಯ ಅನುಗುಣವಾಗಿ ದರ್ಶನ್‌ಗೆ ನೀಡಲಾಗುತ್ತಿರುವ ಸವಲತ್ತುಗಳನ್ನು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೇ ಕುಟುಂಬದವರ ಭೇಟಿಗೆ ಸಮಾನ ಅವಕಾಶ ನೀಡಿಲ್ಲ, ಆಹಾರ, ಬಟ್ಟೆ ಪಡೆಯಲು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇತ್ತು. ಅದಕ್ಕೂ ವರದಿ ನೀಡಿದ್ದು, ಜೈಲಿನ ನಿಯಾಮವಳಿಗೆ ತಕ್ಕಂತೆ ಸೌಲಭ್ಯಗಳನ್ನ ನೀಡಿದ್ದು, ವಿಚಾರಣಾಧೀನ ಖೈದಿಗಳಿಗೆ ಏನೆಲ್ಲಾ ಸವಲತ್ತುಗಳು ಇವೆಯೋ ಅದನ್ನು ನೀಡಲಾಗಿದೆ ಎಂದು ಉತ್ತರ ನೀಡಲಾಗಿದೆ.

ಕ್ವಾರಂಟೆನ್ ಸೆಲ್‌ನಲ್ಲಿ ಇಡಲಾಗಿದೆ ಎಂದು ದರ್ಶನ್ ಸಲ್ಲಿಸಿದ ಆರೋಪ ಪಟ್ಟಿಯಲ್ಲಿರುವ ಮತ್ತೊಂದು ಅಂಶ. ಅದಕ್ಕೆ ಎಸ್‌ಪಿಪಿ ಸಲ್ಲಿಸಿದ ವರದಿಯಲ್ಲಿ ನಿಖರವಾದ ಉತ್ತರ ಕೊಡಲಾಗಿದೆ. ಕೊವಿಡ್ ವೇಳೆ ಜೈಲಿನಲ್ಲಿ ಪ್ರತ್ಯೇಕ ಕ್ವಾರಂಟೆನ್ ಸೆಲ್ ಅನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೀಗ ಆ ವ್ಯವಸ್ಥೆ ಇಲ್ಲ. ಹೀಗಾಗಿ ದರ್ಶನ್ ಅವರನ್ನು ಸಾಮಾನ್ಯ ಸೆಲ್‌ನಲ್ಲಿ ಇಡಲಾಗಿದೆಯೆಂದು ಉತ್ತರ ನೀಡಲಾಗಿದೆ. ಈ ಎಲ್ಲಾ ವರದಿಗಳಿಗೆ ದರ್ಶನ್ ಇರುವ ಸೆಲ್ ವಿಡಿಯೋ, ಸಿಸಿಟಿವಿ ದೃಶ್ಯಗಳನ್ನು ಸಾಕ್ಷ್ಯಗಳಾಗಿ ಸಲ್ಲಿಕೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಪ್ರಕರಣದ ಟ್ರಯಲ್ ಬಗ್ಗೆನೂ ವರದಿಯನ್ನು ಕೇಳಿತ್ತು. ಈ ಕುರಿತು ವರದಿ ಸಲ್ಲಿಸಿಕೆ ಮಾಡಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಡಿಸೆಂಬರ್‌ನಿಂದ ಟ್ರಯಲ್ ನಡೆಯುತ್ತಿದೆ. ಆದರೆ, ಈ ವೇಳೆ ಆರೋಪಿಗಳು ಡಿಸ್ಚಾರ್ಚ್ ಅಪ್ಲಿಕೇಶನ್, ಊಟ, ನಾರ್ಮಲ್ ಸೆಲ್‌ಗೆ ಶಿಫ್ಟ್, ಜೈಲಿಗೆ ನ್ಯಾಯಾಧೀಶರ ಭೇಟಿ ಸೇರಿದಂತೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದರು. ಹೀಗಾಗಿ ತಡವಾಗಿದೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವರದಿ ಸಲ್ಲಿಸಲಾಗಿದೆ.


Click it and Unblock the Notifications
