ಯೂಟ್ಯೂಬ್‌ನಲ್ಲಿ 'ಮದಗಜ' ರೋರಿಂಗ್: ಶ್ರೀಮುರಳಿ ಸಿನಿಮಾ ಫುಲ್ ರಾಕಿಂಗ್
ಶ್ರೀಮುರಳಿ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಮದಗಜ'. ಈ ಸಿನಿಮಾವನ್ನು 'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿದ್ದರು. ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಸಿನಿಮಾ 2021, ಡಿಸೆಂಬರ್ 03 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಕನ್ನಡ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೂ ಈ ಸಿನಿಮಾ ಡಬ್ ಆಗಿತ್ತು. 'ಮದಗಜ' ಕನ್ನಡದ ಥಿಯೇಟರ್‌ಗಳಲ್ಲಿ ಡಬ್ ಆಗಿದ್ದರೆ, ಇನ್ನೊಂದು ಕಡೆ ಡಬ್ಬಿಂಗ್ ಸಿನಿಮಾಗಳು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿವೆ.

'ಮದಗಜ' ಯಶಸ್ಸಿನ ಹಿನ್ನೆಲೆಯಲ್ಲೇ ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಒಟ್ಟಿಗೆ ಸೇರಿ ಸಂಭ್ರಮಸಿದ್ದರು. ಕರ್ನಾಟಕದಲ್ಲಿ ಈ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿತ್ತು. ಹೆಚ್ಚು ಕಡಿಮೆ 'ಮದಗಜ' ಬಿಡುಗಡೆಯಾದ ಎರಡು ವರ್ಷಗಳ ಬಳಿಕ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಈ ಸಿನಿಮಾವೀಗ ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಯೂಟ್ಯೂಬ್‌ನಲ್ಲಿ 'ಮದಗಜ' ರೋರಿಂಗ್
ಶ್ರೀಮುರಳಿ 'ಮದಗಜ' ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ಕಂಡಿದ್ದರು. ದೊಡ್ಡ ಸ್ಟಾರ್ ಕಾಸ್ಟ್ ಇದ್ದ ಈ ಸಿನಿಮಾ ರೋರಿಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಈ ಸಿನಿಮಾ ತೆಲುಗು ಹಾಗೂ ತಮಿಳು ಜೊತೆ ಹಿಂದಿ ಭಾಷೆಗೂ ಡಬ್ ಆಗಿತ್ತು. ಹಿಂದಿ ವರ್ಷನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾದೇ ಹೋದರೂ, ಯೂಟ್ಯೂಬ್‌ನಲ್ಲಿ ಪ್ರದರ್ಶನ ಕಂಡಿತ್ತು. ಹಿಂದಿ ಸಿನಿಮಾ ಪ್ರಿಯರು ಕನ್ನಡದ ಡಬ್ಬಿಂಗ್ ಸಿನಿಮಾಗೆ ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ.

ಯೂಟ್ಯೂಬ್‌ನಲ್ಲಿ ದಾಖಲೆ ವೀವ್ಸ್
ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಹಿಂದಿ ಡಬ್ಬಿಂಗ್ ಸಿನಿಮಾ ಯೂಟ್ಯೂಬ್‌ನಲ್ಲಿ 100 ಮಿಲಿಯನ್ ವೀವ್ಸ್ ಸಿಕ್ಕಿದೆ. ಅತೀ ವೇಗವಾಗಿ ಕನ್ನಡದ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ಯೂಟ್ಯೂಬ್‌ನಲ್ಲಿ 100 ಮಿಲಿಯನ್ಸ್ ವೀವ್ಸ್ ಪಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪಕ್ಕಾ ಮಾಸ್ ಕಮ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವನ್ನು ಹಿಂದಿ ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.
ದಿಗ್ಗಜರ ಮಹಾಸಂಗಮ
ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ದೊಡ್ಡ ತಾರಾ ಬಳಗವೇ ನಟಿಸಿತ್ತು. ತೆಲುಗು ನಟ ಜಗಪತಿಬಾಬು, ಆಶಿಕಾ ರಂಗನಾಥ್, ರಂಗಾಯಣ ರಘು, ಶಿವು ಕೆಆರ್ ಪೇಟೆ, ಚಿಕ್ಕಣ್ಣ, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಬಳವೇ ಇತ್ತು. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಕ್ಯಾಮರಾ ಕೈ ಚಳಕವಿತ್ತು. ಅಯೋಗ್ಯ ಬಳಿಕ ಮಹೇಶ್ ಕುಮಾರ್ ನಿರ್ದೇಶಿಸಿದ ಎರಡನೇ ಸಿನಿಮಾ ಇದಾಗಿತ್ತು.


Click it and Unblock the Notifications











