"ದೊಡ್ಮನೆ ಹುಡುಗ ಆಗಿದ್ಕೊಂಡು ಕ್ಯಾರೆಕ್ಟರ್ ಸರಿಯಿಲ್ಲದವ್ರನ್ನು ಮದ್ವೆ ಆಗಿದ್ದೇಕೆ?"; ಶ್ರೀದೇವಿ ಪರ ವಕೀಲರ ಪ್ರಶ್ನೆ
ದೊಡ್ಮೆನೆಯ ಕುಡಿ ಯುವ ರಾಜ್‌ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. 5 ವರ್ಷದ ಸಾಂಸಾರಿಕ ಜೀವನವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಯುವ ಬಂದಿದ್ದಾರೆ. ಯುವ ರಾಜ್‌ಕುಮಾರ್ ಕೌಟುಂಬ ನ್ಯಾಯಾಲಯದ ಮೊರೆ ಹೋಗಿದ್ದರೆ, ಇತ್ತ ಪತ್ನಿ ಶ್ರೀದೇವಿ ವಿಚ್ಛೇದನದ ವಿರುದ್ಧ ಹೋರಾ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ಹೀಗಾಗಿ ದೊಡ್ಮನೆ ಕುಡಿಯ ಸಾಂಸಾರಿಕ ಜೀವನ ಬೀದಿಗೆ ಬಂದಿದೆ. ಶ್ರೀದೇವಿ ಬೈರಪ್ಪ ಸದ್ಯ ಶಿಕ್ಷಣದ ಸಲುವಾಗಿ ಅಮೆರಿಕದಲ್ಲಿ ಇದ್ದಾರೆ. ಈ ಗ್ಯಾಪ್‌ನಲ್ಲಿ ಯುವ ಡಿವೋರ್ಸ್ ನೋಟೀಸ್ ಕಳುಹಿಸಿದ್ದಾರೆ. ಅದರಲ್ಲಿ ಕಾಂತಾರ ನಟಿ ಸಪ್ತಮಿಗೌಡ ಜೊತೆ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಯುವ ವಕೀಲರು ಶ್ರೀದೇವಿ ನಡತೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಟ್ಟಿದ್ದರು.

ಈ ಘಟನೆಗೆ ಪ್ರತಿಯಾಗಿ ಶ್ರೀದೇವಿ ಪರ ವಕೀಲರಾಗಿರುವಂತಹ ದೀಪ್ತಿ ಅಯಾಥಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯುವ ಪರ ವಕೀಲರು ವೃತ್ತಿ ಧರ್ಮವನ್ನು ಪಾಲಿಸಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀದೇವಿ ಬೈರಪ್ಪ ಪರ ವಕೀಲರು ನೀಡಿರುವ ಹೇಳಿಕೆಗಳು ಇವೆ.
"ಒಬ್ಬ ಪ್ರೊಫೆಷನಲ್ ಲಾಯರ್ ಆಗಿ ಹುಡುಗಿಯ ಚಾರಿತ್ರ್ಯವಧೆ ಮಾಡಿರುವುದು ದುರಾದೃಷ್ಟಕರ. ಅದರಲ್ಲೂ ಕೋರ್ಟ್‌ನಿಂದ ಇನ್ನೂ ನೋಟಿಸ್ ಸಿಕ್ಕಿಲ್ಲ. ಕೋರ್ಟ್ ಇವತ್ತು ನೋಟಿಸ್ ಕೊಟ್ಟಿದೆ. ಅದಕ್ಕೆ ಇನ್ನೂ ಪ್ರತಿಕ್ರಿಯೆ ಕೊಡುವುದು ಇದೆ. ಅವರು ಮಾಡಿರುವ ಆರೋಪಗಳನ್ನೆಲ್ಲವನ್ನೂ ಅವರು ಕೋರ್ಟ್‌ನಲ್ಲಿ ಪ್ರೂವ್ ಮಾಡಬೇಕು. ಆ ಮೇಲೆ ಇಂತಹ ಆರೋಪಗಳು ಮಾಡುತ್ತಿರುವುದರ ಬಗ್ಗೆ ತೀರ್ಮಾನ ಆಗುತ್ತೆ." ಎಂದಿದ್ದಾರೆ.
ಇನ್ನು ಕೋರ್ಟ್‌ನಿಂದ ನೋಟಿಸ್ ಬರುವುದಕ್ಕೂ ಮುನ್ನವೇ ಯುವ ಪರ ವಕೀಲರು ಮೀಡಿಯಾ ಮುಂದೆ ಬಹಿರಂಗ ಪಡಿಸಿದ್ದು ಸರಿಯಲ್ಲ ಎಂದಿದ್ದಾರೆ. "ನನಗೆ ಇನ್ನೂ ಕೋರ್ಟ್‌ನಿಂದ ನೋಟಿಸ್ ಬಂದಿಲ್ಲ. ಅಷ್ಟರೊಳಗೆ ಅವರ ಕಡೆಯ ಲಾಯರ್ ಮೀಡಿಯಾದ ಮುಂದೆ ಸಂಪೂರ್ಣವಾಗಿ ಓದಿಬಿಟ್ಟಿದ್ದಾರೆ. ಲೀಗಲ್ ಪ್ರೋಫೆಷನ್‌ನಲ್ಲಿ ಇದು ನಿಜಕ್ಕೂ ದುರಾದೃಷ್ಟಕರ. ಫ್ಯಾಮಿಲಿ ಕೋರ್ಟ್‌ನಲ್ಲಿ ಕೆಲವೊಂದು ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಿ ಹುಡುಕಿದರೂ ಪಾರ್ಟಿ ಹೆಸರು ಬರೋದಿಲ್ಲ. ನಮಗೆ ಬಂದ ಕೂಡಲೇ ನಾವು ಕಾನೂನನ್ನು ಫಾಲೋ ಮಾಡಿಯೇ ಮಾಡುತ್ತೇವೆ." ಎಂದು ಶ್ರೀದೇವಿ ಪರ ವಕೀಲರು ಹೇಳಿದ್ದಾರೆ.
ಇದೇ ವೇಳೆ ಶ್ರೀದೇವಿ ಕ್ಯಾರೆಕ್ಟರ್ ಸರಿಯಿಲ್ಲ ಎಂದು ಆರೋಪ ಮಾಡಿದ್ದು, ಹೇಗೆ ಮದುವೆ ಆದರು ಎಂದಿದ್ದಾರೆ. "ಇಷ್ಟೊಂದು ಆರೋಪಗಳನ್ನು ಇಟ್ಕೊಂಡು ಗುರು ಹೇಗೆ ಬಾಳುತ್ತಿದ್ದರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ದೊಡ್ಮನೆ ಹುಡುಗ ಆಗಿದ್ದುಕೊಂಡು ಈ ರೀತಿ ಕ್ಯಾರೆಕ್ಟರ್ ಸರಿ ಇಲ್ಲದೆ ಇರುವವಳನ್ನ ಮದುವೆ ಆಗಿದ್ದಾರೆ. ಅದಾದ್ಮೇಲೆ 9 ವರ್ಷ ಅವರೊಂದಿಗೆ ಸಂಸಾರ ಮಾಡಿದ್ದಾರೆ. ಅವರು ಲೈಫ್‌ನಲ್ಲಿ ಮುಂದಕ್ಕೆ ಹೋಗ್ಬೇಕು ಅನ್ನುವ ಸಂದರ್ಭದಲ್ಲಿ ಇಂತಹದ್ದೊಂದು ಸನ್ನಿವೇಶವನ್ನು ತಂದು, ಹೆಣ್ಣಿನ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಿಲ್ಲ." ಎಂದಿದ್ದಾರೆ.
ಹಾಗೇ ಶ್ರೀದೇವಿ ಪರ ವಕೀಲರು ತಮ್ಮ ಬಳಿ ಸಾಕ್ಷಿಗಳು ಇವೆ ಎಂದಿದ್ದಾರೆ. "ಅವರು ಮಾಡಿರುವ ಪ್ರತಿಯೊಂದು ಆರೋಪಕ್ಕೂ ನಮ್ಮ ಬಳಿ ಸಾಕಷ್ಟು ಸಾಕ್ಷಿಗಳು ಇವೆ. ನಮಗೆ ಅವರ ಕಾಪಿ ಸಿಕ್ಕಿದಾಗ ಅದಕ್ಕೆ ನಾವು ಅಬ್ಜೆಕ್ಷನ್ ಅನ್ನು ಹಾಕುತ್ತೇವೆ." ಎಂದು ಹೇಳಿದ್ದಾರೆ.


Click it and Unblock the Notifications











