'ಮದಗಜ' ರೋರಿಂಗ್ ಸ್ಟಾರ್ ಶ್ರೀಮುರಳಿ ಕೊರಳಿಗೆ ಬರೋಬ್ಬರಿ 450 ಕೆಜಿ ಸೇಬಿನ ಹಾರ
ಮದಗಜ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾವಿದು. ಎಲ್ಲಕ್ಕಿಂತ ಹೆಚ್ಚಾಗಿ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಸಿನಿಮಾ. ಈಗಾಗಲೇ ಕೊನೆಯ ಹಂತ ತಯಾರಿ ಜೋರಾಗಿ ನಡೆಯುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳು ಮದಗಜನ ಅಬ್ಬರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಒಂದು ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತೆ. ಚಿತ್ರಮಂದಿರಗಳನ್ನು ಸುಂದರವಾಗಿ ಸಿಂಗಾರಗೊಳಿಸುತ್ತಾರೆ. ಕಟೌಟ್‌ಗಳಿಗೆ ಹೂವಿನ ಹಾರ ಹಾಕುತ್ತಾರೆ. ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಚಿತ್ರಮಂದಿರ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸುತ್ತಾರೆ. ಮದಗಜ ಸಿನಿಮಾಗೂ ಇದೆಲ್ಲಾ ತಯಾರಿ ನಡೆಯುತ್ತಿದೆ. ಆದರೆ, ಅದಕ್ಕಿಂತ ಮುಖ್ಯವಾಗಿ ತಮ್ಮ ನೆಚ್ಚಿನ ನಟನಿಗೆ 450 ಕೆಜಿಯ ಬೃಹತ್ ಸೇಬು ಹಣ್ಣಿನ ಹಾರ ಹಾಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಶ್ರೀಮುರಳಿಗೆ 450 ಕೆಜಿ ಸೇಬು ಹಣ್ಣಿನ ಹಾರ
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಮಾನಿಗಳು ಮದಗಜ ರಿಲೀಸ್ ಆಗುತ್ತಿರುವುದಕ್ಕೆ ಥ್ರಿಲ್ಲಿಂಗ್ ಆಗಿದ್ದಾರೆ. ಚಿತ್ರಮಂದಿರದ ಮುಂದೆ ಹಬ್ಬ ಮಾಡುವುದಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ, ಹೂವು, ಹಣ್ಣು, ಹಾರ ಎಲ್ಲವೂ ಸಿದ್ಧವಾಗಿದೆ. ವಿಶೇಷ ಅಂದರೆ, ಚಿತ್ರಮಂದಿರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬರೋಬ್ಬರಿ 450 ಕೆಜಿ ತೂಕವಿರುವ ಸೇಬು ಹಣ್ಣಿನ ಹಾರವನ್ನು ಹಾಕಲಿದ್ದಾರೆ. ಪ್ರಮುಖ ಚಿತ್ರಮಂದಿರ ಅನುಪಮದಲ್ಲಿ ಇದಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಅಭಿಮಾನಿಗಳು ಈಗಾಗಲೇ ಸೇಬುಹಣ್ಣಿನ ಹಾರವನ್ನು ಪೋಣಿಸುತ್ತಿದ್ದಾರೆ.

ಸೇಬು ಹಣ್ಣಿನ ಹಾರದ ಬೆಲೆ ಎಷ್ಟು?
ಶ್ರೀಮುರಳಿಗೆ ಬಿಡುಗಡೆ ದಿನ ತೊಡಿಸಲಿರುವ ಈ ಸೇಬು ಹಣ್ಣಿನ ಹಾರದ ಬೆಲೆ ಬರೋಬ್ಬರಿ 80 ಸಾವಿರ ರೂಪಾಯಿ. ರೋರಿಂಗ್ ಸ್ಟಾರ್ ಅಭಿಮಾನಿಗಳಾದ ಮಹೇಶ್ ಬಾಬು ಹಾಗೂ ರವಿ ಎಂಬುವವರು ಈ ಹಾರವನ್ನು ಸಿದ್ಧಪಡಿಸುತ್ತಿದ್ದಾರೆ. ಬೆಳಗ್ಗೆ ಸರಿಯಾಗಿ 9 ಗಂಟೆಗೆ ಅನುಪಮಾ ಚಿತ್ರಮಂದಿರದ ಮುಂದೆ ಶ್ರೀಮುರಳಿಗೆ ಸೇಬು ಹಣ್ಣಿನ ಮಾಲೆ ಹಾಕಿ ಸಂಭ್ರಮಿಸಲಿದ್ದಾರೆ. ಬಹಳ ದಿನಗಳ ಬಳಿಕ ಚಿತ್ರಮಂದಿರದಲ್ಲಿ ಇಂತಹದ್ದೊಂದು ಸಂಭ್ರಮ ನಡೆಯುತ್ತಿದೆ.

ಶ್ರೀಮುರಳಿಗೆ ಕ್ರೈನ್ ಮೂಲಕ ಸೇಬು ಹಣ್ಣಿನ ಹಾರ
" ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳು ಅನುಪಮಾ ಥಿಯೇಟರ್‌ನಲ್ಲಿ ಬೆಳಗ್ಗೆಯಿಂದಲೇ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅದರಲ್ಲೂ ಈ 450 ಕೆಜಿ ಸೇಬು ಹಣ್ಣಿನ ಹಾರವನ್ನು ಶ್ರೀಮುರಳಿ ಅವರಿಗೆ ಹಾಕಲಾಗುತ್ತದೆ. ವಿಶೇಷ ಅಂದರೆ, ಥಿಯೇಟರ್ ಮುಂದೆ ಅಭಿಮಾನಿಗಳು ಕ್ರೇನ್ ತಂದು ಅದರ ಮೂಲಕ ಸೇಬು ಹಣ್ಣಿನ ಹಾರವನ್ನು ಹಾಕಲಿದ್ದಾರೆ. ಇದು ರಿಲೀಸ್ ಡೇ ಹೈಲೈಟ್" ಅಂತಾರೆ ನಿರ್ದೇಶಕ ಶ್ರೀಮುರಳಿ.

'ಮದಗಜ' ಫಸ್ಟ್ ಡೇ ಕಲೆಕ್ಷನ್ ಹೇಗಿರುತ್ತೆ?
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಸುಮಾರು 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆಕಾಣುತ್ತಿದೆ. ಹೀಗಾಗಿ ಸಿನಿಮಾದ ಗಳಿಕೆ ಮೇಲೆ ಎಲ್ಲರ ಕಣ್ಣಿದೆ. ಮೊದಲ ದಿನ ಗಳಿಕೆ ದಾಖಲೆ ಬರೆದರೆ, ಈ ವಾರ ಭರ್ಜರಿ ಕಲೆಕ್ಷನ್ ಮಾಡುವುದು ಗ್ರಾರಂಟಿ. ವಿತರಕರ ಪ್ರಕಾರ, ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ 8 ರಿಂದ 10 ಕೋಟಿವರೆಗೂ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications











