Bagheera Box Office Day 1: 'ಬಘೀರ' ಮೊದಲ ದಿನದ ಕಲೆಕ್ಷನ್ ಎಷ್ಟು? ಶ್ರೀಮುರಳಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ತಾ?
ಕನ್ನಡದ ಮೊದಲ ಸೂಪರ್ ಹೀರೋ ಸಿನಿಮಾ 'ಬಘೀರ' ನಿನ್ನೆ (ಅಕ್ಟೋಬರ್ 31) ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಅದರಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ. ಹಾಗೇ ಕನ್ನಡದ ಫಿಲ್ಮ್ ಮೇಕರ್ಸ್ ಸೂಪರ್ ಹೀರೋ ಸಿನಿಮಾವನ್ನು ಹೇಗೆ ಚಿತ್ರೀಕರಿಸಿದ್ದಾರೆ ಅನ್ನೋದು ಕುತೂಹಲವೂ ಇತ್ತು.
ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಇದೇ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ಕೂಡ ವರ್ಕ್ ಔಟ್ ಆಗಿದೆ. ಪ್ರಶಾಂತ್ ನೀಲ್ ಕಥೆ ಬರೆದಿರುವುದು 'ಬಘೀರ' ಸಿನಿಮಾದ ಮತ್ತೊಂದು ಹೈಲೈಟ್. ಇನ್ನೊಂದು ಕಡೆ 'ಕೆಜಿಎಫ್', 'ಸಲಾರ್' ಅಂತಹ ಸಿನಿಮಾಗಳಿಗೆ ರೈಟರ್ ಆಗಿ ಕೆಲಸ ಮಾಡಿರುವ ಡಾ. ಸೂರಿ ಈ ಆಕ್ಷನ್ ಕಟ್ ಹೇಳಿದ್ದು ಮತ್ತೊಂದು ಹೈಲೈಟ್.

'ಬಘೀರ' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಬ್ಯುಸಿನೆಸ್ ಮಾಡಿದ್ದಾಗಿ ಚಿತ್ರರಂಗದಲ್ಲಿ ಟಾಕ್ ಇದೆ. ಸೂಪರ್ ಹೀರೋ ಸಿನಿಮಾ ಆಗಿದ್ದರಿಂದ ಕನ್ನಡಿಗರು ನಿಧಾನವಾಗಿ ಥಿಯೇಟರ್ ಕಡೆ ಬರಬಹುದು ಎಂಬ ನಿರೀಕ್ಷೆಯಿದೆ. ಸದ್ಯ ಮೊದಲ ದಿನ ಕರ್ನಾಟಕದಲ್ಲಿ 'ಬಘೀರ' ಸಿನಿಮಾ ಗಳಿಸಿದ್ದು ಎಷ್ಟು? ತೆಲುಗಿನಲ್ಲಿ ಹೇಗಿದೆ ರೆಸ್ಪಾನ್ಸ್? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬಘೀರ' ಮೊದಲ ದಿನದ ಗಳಿಕೆ ಎಷ್ಟು?
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ 'ಬಘೀರ'ಗೆ ಬಾಕ್ಸಾಫೀಸ್ ಉತ್ತಮ ಓಪನಿಂಗ್ ಸಿಕ್ಕಿದೆ. ದಾಖಲೆ ಲೆಕ್ಕದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡದೇ ಹೋದರೂ, ಮೊದಲ ದಿನದ ಗಳಿಕೆ ಚಿತ್ರತಂಡಕ್ಕೆ ಸಮಾಧಾನ ಕೊಟ್ಟಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಇಂಡಸ್ಟ್ರಿ ಟ್ರೇಡಿಂಗ್ ಪೋರ್ಟಲ್ Sacnilk ಪ್ರಕಾರ, ಮೊದಲ ದಿನ 'ಬಘೀರ' ಸಿನಿಮಾದ ಕಲೆಕ್ಷನ್ 2.80 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಕರ್ನಾಟಕದ ವಿತರಕರ ವಲಯದಲ್ಲಿ 3 ಕೋಟಿಯಿಂದ 3.5 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಚರ್ಚೆಯಾಗುತ್ತಿದೆ.

ಕರ್ನಾಟಕದಲ್ಲಿ ಹೇಗಿದೆ ರೆಸ್ಪಾನ್ಸ್?
'ಬಘೀರ' ಸಿನಿಮಾ ಕ್ಲಾಸ್‌ಗೆ ಕ್ಲಾಸ್. ಮಾಸ್‌ಗೆ ಮಾಸ್. ಎರಡೂ ಪ್ರಕಾರದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡೂ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಇದಾಗಿದೆ. ಬೆಂಗಳೂರಿನಲ್ಲಿ ಶೇ 45.25ರಷ್ಟು, ಕಲಬುರ್ಗಿಯಲ್ಲಿ ಶೇ.61.50ರಷ್ಟು, ಮೈಸೂರು 64.75ರಷ್ಟು, ಶಿವಮೊಗ್ಗ ಶೇ.50.75ರಷ್ಟು, ಕುಂದಾಪುರ ಶೇ.54ರಷ್ಟು, ತುಮಕೂರು ಶೇ.59ರಷ್ಟು, ರಾಯಚೂರು ಶೇ.55ರಷ್ಟು ಚಿತ್ರಮಂದಿರಗಳು ತುಂಬಿವೆ. ಮೊದಲ ದಿನ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ತೆಲುಗಿನ ಹೇಗಿದೆ ರೆಸ್ಪಾನ್ಸ್?
'ಬಘೀರ' ಸಿನಿಮಾ ಜೊತೆ ಪ್ರಶಾಂತ್ ನೀಲ್ ಹೆಸರು ಸೇರಿಕೊಂಡಿದೆ. ಹೀಗಾಗಿ ತೆಲುಗು ಮಂದಿಗೂ ಈ ಸಿನಿಮಾಗೂ ಮೇಲೆ ಆಸಕ್ತಿ ಇತ್ತು. ತೆಲುಗಿನಲ್ಲಿ ಲಿಮಿಟೆಡ್ ಥಿಯೇಟರ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ತೆಲುಗಿನಲ್ಲೂ ರೆಸ್ಪಾನ್ಸ್ ಉತ್ತಮವಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಈ ಸಿನಿಮಾ ಮೊದಲ ದಿನ ತೆಲುಗಿನಲ್ಲಿ 50 ಲಕ್ಷ ರೂಪಾಯಿ ಆಸು ಪಾಸಿನಲ್ಲಿ ಗಳಿಕೆ ಮಾಡಿದೆ ಎನ್ನಲಾಗಿದೆ. ನಿಜಾಮಬಾದ್ ಹಾಗೂ ವಿಜಯವಾಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
2ನೇ ದಿನ ಹೇಗಿದೆ ಕ್ರೇಜ್?
ಮೊದಲ ದಿನ 'ಬಘೀರ' ಕಲೆಕ್ಷನ್ ಉತ್ತಮವಾಗಿತ್ತು. ಎರಡನೇ ದಿನವೂ ಈ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರುತ್ತಿದ್ದಾರೆ. ಬಹುತೇಕ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳು ಈಗಾಗಲೇ ಫುಲ್ ಆಗುತ್ತಿವೆ. ಸಿಂಗಲ್ ಸ್ಕ್ರೀನ್‌ನಲ್ಲಿ ರೆಸ್ಪಾನ್ಸ್ ಕೊಂಚ ಕಡಿಮೆಯಿದೆ. ಸಂಜೆ ವೇಳೆಗೆ ಅದೂ ಕೂಡ ತುಂಬವ ಸಾಧ್ಯತೆಯಿದೆ. ಇಂದು ರಜೆ ದಿನವಾಗಿದ್ದರಿಂದ 2ನೇ ದಿನ ಹೆಚ್ಚು ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











