Bagheera Box Office Day 2: 2ನೇ ದಿನ ಬಾಕ್ಸಾಫೀಸ್‌ನಲ್ಲಿ 'ಬಘೀರ' ಬಂಪರ್; ಕಲೆಕ್ಷನ್ ಎಷ್ಟು ಗೊತ್ತಾ?

ಕನ್ನಡದಲ್ಲಿ ಸೂಪರ್‌ ಹೀರೋ ಸಿನಿಮಾಗಳು ಗೆಲ್ಲುತ್ತವೆಯೇ? ಕನ್ನಡಿಗರು ಇಂತಹ ಸಿನಿಮಾಗಳನ್ನು ಇಷ್ಟ ಪಡುತ್ತಾರಾ? ಅನ್ನುವ ಗೊಂದಲ ಆರಂಭದ ದಿನಗಳಲ್ಲಿ ಚಿತ್ರತಂಡವನ್ನು ಕಾಡಿರುತ್ತೆ. 'ಬಘೀರ' ಕನ್ನಡದ ಮೊದಲ ಸೂಪರ್‌ ಹೀರೋ ಸಿನಿಮಾ. ಹೀಗಾಗಿ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ನಿಜಕ್ಕೂ ಕುತೂಹಲ ಮೂಡಿಸಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪ್ರಶಾಂತ್ ನೀಲ್ ಕಥೆ ಆಗಿರುವುದರಿಂದ ಸಿನಿಪ್ರಿಯರು 'ಬಘೀರ' ಮೇಲೆ ಒಂದು ಕಣ್ಣಿಟ್ಟಿದ್ದರು. ಅದರಲ್ಲೂ ರೋರಿಂಗ್ ಸ್ಟಾರ್ ಶ್ರೀಮುರಳಿ ಸೂಪರ್ ಹೀರೋ ಅಂತ ಗೊತ್ತಾಗುತ್ತಿದ್ದಂತೆ ಥಿಯೇಟರ್‌ಗೆ ಜನರು ನುಗ್ಗುತ್ತಿದ್ದಾರೆ. ಮೊದಲ ದಿನ ಈ ಸಿನಿಮಾ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. ಹಾಗೇ ಎರಡನೇ ದಿನದ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು.

Sriimurali Prashanth Neel movie Bagheera Karnataka Box office collection day 2 report

'ಬಘೀರ'ಗೆ ಮೌತ್ ಪಬ್ಲಿಸಿಟಿಯ ಅಗತ್ಯವಿದೆ. ಮೊದಲ ದಿನ ಸಿನಿಮಾ ನೋಡಿದವರು ಪಾಸಿಟಿವ್ ಆಗಿ ಮಾತಾಡುತ್ತಿದ್ದಾರೆ. ಸದ್ಯ ಹಬ್ಬ ಮೂಡಿನಲ್ಲಿರುವ ಜನರು ನಿನ್ನೆಯಿಂದ (ನವೆಂಬರ್ 1) 'ಬಘೀರ' ನೋಡುವುದಕ್ಕೆ ಇನ್ನೂ ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರೆ. ಮೂಲಗಳ ಪ್ರಕಾರ, 2ನೇ ದಿನ 'ಬಘೀರ' ಕಲೆಕ್ಷನ್‌ನಲ್ಲಿ ಏರಿಕೆ ಆಗಿದೆ.

'ಬಘೀರ' 2ನೇ ದಿನ ಕಲೆಕ್ಷನ್ ಎಷ್ಟು?

ರೋರಿಂಗ್ ಸ್ಟಾರ್ ಶ್ರೀಮುರಳಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಕಪ್ಪು ಕಾಸ್ಟ್ಯೂಮ್‌ ತೊಟ್ಟು ಸೂಪರ್ ಹೀರೋ ಆಗಿದ್ದಾರೆ. ಎರಡೂ ಶೇಡ್‌ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಮೊದಲ ದಿನ ಈ ಸಿನಿಮಾದ 3 ರಿಂದ 3.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಕೊಂಚ ಏರಿಕೆ ಕಂಡಿದೆ. ಇಂಡಸ್ಟ್ರಿ ಟ್ರ್ಯಾಕರ್ sacnilk ಪ್ರಕಾರ ಈ ಸಿನಿಮಾ 2ನೇ ದಿನ 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವಿತರಕರ ವಲಯದಲ್ಲೇನಿದೆ ಲೆಕ್ಕ?

ಎರಡು ದಿನಗಳ ಕಲೆಕ್ಷನ್‌ನಿಂದ ಕರ್ನಾಟಕದ ವಿತರಕರು ಖುಷಿಯಾದಂತೆ ಇದೆ. 'ಬಘೀರ' ಮೇಲೆ ಇಟ್ಟಿದ್ದ ನಿರೀಕ್ಷೆ ಆಶಾಭಾವನೆ ಮೂಡಿಸುತ್ತಿದೆ. ಮೊದಲ ದಿನ 3 ರಿಂದ 3.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಲೆಕ್ಕ ಕೊಟ್ಟಿದ್ದರು. ಅದೇ ರೀತಿ ಎರಡನೇ ದಿನ 3.5 ರಿಂದ 4 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿರಬಹುದೆಂಬು ಇವರ ಲೆಕ್ಕ. ಈ ಮೂಲಕ ಮೊದಲನೇ ದಿನಕ್ಕಿಂತ ಎರಡನೇ ದಿನದ ಕಲೆಕ್ಷನ್ ಏರಿಕೆಯಾಗಿದೆ.

Sriimurali Prashanth Neel movie Bagheera Karnataka Box office collection day 2 report

ತೆಲುಗು ಕಲೆಕ್ಷನ್ ಹೇಗಿದೆ?

'ಬಘೀರ' ಸಿನಿಮಾ ಬಗ್ಗೆ ಕೆಲವು ಕಿಡಿಗೇಡಿಗಳು ನೆಗೆಟಿವ್ ಒಪಿನಿಯನ್ ಹರಡುತ್ತಿದ್ದಾರೆ. ಹೀಗಿದ್ದರೂ, ಲಿಮಿಟೆಡ್ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದರೂ, ಮೊದಲ ದಿನ 50 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಕೊಂಚ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 50 ಲಕ್ಷ ರೂಪಾಯಿಯಿಂದ 75 ಲಕ್ಷದವರೆಗೂ ಕಲೆಕ್ಷನ್ ಆಗಿರಬಹುದೆಂದು ಹೇಳಲಾಗಿತ್ತಿದೆ. ಇನ್ನೂ ಖಚಿತ ಮಾಹಿತಿ ಹೊರ ಬೀಳಬೇಕಿದೆ.

ವೀಕೆಂಡ್ ಕಲೆಕ್ಷನ್ ಏನಾಗುತ್ತೆ?

ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಬ್ಯಾಕ್ ಟು ಬ್ಯಾಕ್ ರಜೆಗಳಿವೆ. ಕನ್ನಡ ರಾಜ್ಯೋತ್ಸವ 'ಬಘೀರ' ಸಿನಿಮಾಗೆ ಪಾಸಿಟಿವ್ ಆಗಿ ಸಾಬೀತಾಗಿದೆ. ಇನ್ನು ವೀಕೆಂಡ್‌ನಲ್ಲೂ ನಾಲ್ಕರಿಂದ ಐದು ಕೋಟಿ ಕಲೆಕ್ಷನ್ ಆದರೆ, ಮೊದಲ ನಾಲ್ಕು ದಿನ ಕಮ್ಮಿ ಅಂದರೂ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು. ಒಂದು ವಾರದಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ.

More from Filmibeat

English summary
Sriimurali, Rukmini Vasanth movie Bagheera Karnataka Box office collection day 2 report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X