Bagheera Box Office Day 3: 3ನೇ ದಿನವೂ ನಿಲ್ಲದ 'ಬಘೀರ'ನ ಅಬ್ಬರ; ಬಾಕ್ಸಾಫೀಸ್‌ನಲ್ಲಿ ಶ್ರೀಮುರಳಿ ರೋರಿಂಗ್

'ಮದಗಜ' ಬಳಿಕ ಶ್ರೀಮುರಳಿ ಮತ್ತೊಂದು ಸಿನಿಮಾ ರಿಲೀಸ್ ಆಗಿರಲಿಲ್ಲ. ಜಾಗರೂಕತೆಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರೋರಿಂಗ್ ಸ್ಟಾರ್ 'ಬಘೀರ' ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಒಂದಿಷ್ಟು ಸಮಯವನ್ನೇ ತೆಗೆದುಕೊಂಡಿದ್ದರು. ಅದರಲ್ಲೂ ಪ್ರಶಾಂತ್ ನೀಲ್ ಕಥೆ ಬರೆದಿದ್ದು ಶ್ರೀಮುರಳಿಗೆ ಧೈರ್ಯ ಬಂದಂತೆ ಆಗಿತ್ತು. ಸುಮಾರು ಮೂರು ವರ್ಷಗಳ ಕಾಲ 'ಬಘೀರ' ಬಿಟ್ಟು ಬೇರೆ ಸಿನಿಮಾಗಳ ಕಡೆಗೆ ಮುಖವನ್ನೇ ಮಾಡಿರಲಿಲ್ಲ.

ನಿರೀಕ್ಷೆಯಂತೆ 'ಬಘೀರ' ಅಕ್ಟೋಬರ್ 31ಕ್ಕೆ ರಿಲೀಸ್ ಆಗಿದೆ. ಮೊದಲ ದಿನದಿಂದಲೇ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಸುಮಾರು 210 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಬಹುತೇಕ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Sriimurali Prashanth Neel movie Bagheera Karnataka Box office collection day 3 report

ಕರ್ನಾಟಕದ ವಿತರಕರ ವಲಯದ ಮಾಹಿತಿ ಪ್ರಕಾರ, 'ಬಘೀರ' ಸಿನಿಮಾವನ್ನು 210 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿದೆ. ಮೊದಲ ವಾರ ಸಿನಿಮಾದ ರೆಸ್ಪಾನ್ಸ್ ನೋಡಿ ಇನ್ನಷ್ಟು ಸ್ಕ್ರೀನ್‌ಗಳನ್ನು ಏರಿಕೆ ಮಾಡುವ ಸಾಧ್ಯತೆಯಿದೆ. ಇನ್ನು ಬಾಕ್ಸಾಫೀಸ್‌ನಲ್ಲಿ ಮೂರನೇ ದಿನವಾದ ನಿನ್ನೆ (ನವೆಂಬರ್ 2) ಕೂಡ ಕಲೆಕ್ಷನ್ ಚೆನ್ನಾಗಿದೆ. ಅಷ್ಟಕ್ಕೂ ಮೂರು ದಿನಗಳಲ್ಲಿ ಒಟ್ಟು ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.

'ಬಘೀರ' 3ನೇ ದಿನದ ಕಲೆಕ್ಷನ್ ಎಷ್ಟು?

ರೋರಿಂಗ್ ಸ್ಟಾರ್ ಶ್ರೀಮುರಳಿ 'ಬಘೀರ'ಗೆ ಒಳ್ಳೆಯ ಅಭಿಪ್ರಾಯ ಸಿಕ್ಕಿದೆ. ಕನ್ನಡದ ಮೊದಲ ಸೂಪರ್ ಹೀರೋ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ 'ಬಘೀರ' ಕಲೆಕ್ಷನ್ ಚೆನ್ನಾಗಿ ಆಗಿದೆ. 3ನೇ ದಿನವೂ ಸಿನಿಮಾಗೆ ಕಲೆಕ್ಷನ್ ಚೆನ್ನಾಗಿ ಆಗಿದ್ದು 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ sacnilk ವರದಿ ಮಾಡಿದೆ. ಇನ್ನು ವಿತರಕರ ವಲಯದಲ್ಲೂ 'ಬಘೀರ' ಮೂರನೇ ದಿನ ಕಲೆಕ್ಷನ್ ಮೂರುವರೆ ಕೋಟಿಯಿಂದ ನಾಲ್ಕು ಕೋಟಿ ಆಗಿದೆ ಎಂದು ಹೇಳುತ್ತಿದ್ದಾರೆ.

Sriimurali Prashanth Neel movie Bagheera Karnataka Box office collection day 3 report

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಬಘೀರ' ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ಮೂರು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 10 ಕೋಟಿ ರೂಪಾಯಿವರೆಗೂ ಆಗಿದೆ. ಶ್ರೀಮುರಳಿಯನ್ನು ಎರಡು ಶೇಡ್‌ಗಳಲ್ಲಿ ನೋಡಿ ಸಿನಿಪ್ರಿಯರು ಇಷ್ಟ ಪಟ್ಟಿದ್ದಾರೆ. ಹಾಗೇ ಸೂಪರ್ ಹೀರೋ ಲುಕ್‌ಗೂ ಕಿಕ್ ಕೊಟ್ಟಿದೆ. ಮೂರು ದಿನಗಳ ಕಲೆಕ್ಷನ್ ಹೀಗಿದೆ.

'ಬಘೀರ' 3 ದಿನಗಳ ಕಲೆಕ್ಷನ್ ಹೀಗಿದೆ

ಮೊದಲ ದಿನ - 3.25 ಕೋಟಿ ರೂ.
ಎರಡನೇ ದಿನ - 3.30 ಕೋಟಿ ರೂ.
ಮೂರನೇ ದಿನ - 3.50 ಕೋಟಿ ರೂ.
ಒಟ್ಟು - 10.05 ಕೋಟಿ ರೂ.

ತೆಲುಗಿನ ಗಳಿಕೆ ಎಷ್ಟು?

ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾಗೆ ತೆಲುಗು ರೆಸ್ಪಾನ್ಸ್ ಚೆನ್ನಾಗಿದೆ. ನೆಗೆಟಿವ್ ಕ್ಯಾಂಪೇನ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದರೂ, ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದೆ. sacnilk ಪ್ರಕಾರ, 'ಬಘೀರ' ತೆಲುಗು ಅವತರಣಿಕೆ ಮೊದಲ ದಿನ 50 ಲಕ್ಷ ರೂಪಾಯಿ, ಎರಡನೇ ದಿನ 40 ಲಕ್ಷ ರೂಪಾಯಿ, ಮೂರನೇ ದಿನ 30 ಲಕ್ಷ ರೂಪಾಯಿ ಕಳಿಸಿದ್ದು ಒಟ್ಟು ಮೂರು ದಿನಗಳಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ನಾಲ್ಕನೇ ದಿನ ಹೇಗಿರುತ್ತೆ ಕಲೆಕ್ಷನ್?

'ಬಘೀರ' ಸಿನಿಮಾ ನೋಡುವುದಕ್ಕೆ ನಾಲ್ಕನೇ ದಿನವೂ ಪ್ರೇಕ್ಷಕರು ಥಿಯೇಟರ್‌ ಕಡೆಗೆ ಮುಖ ಮಾಡುತ್ತಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್‌ ಖರೀದಿ ಚೆನ್ನಾಗಿ ಆಗುತ್ತಿದೆ. ಹೀಗಾಗಿ ನಾಲ್ಕನೇ ದಿನ ಕಲೆಕ್ಷನ್ ಕೂಡ ಚೆನ್ನಾಗಿಯೇ ಆಗಬಹುದು ಎನ್ನಲಾಗಿದೆ. ಮೂರು ದಿನಗಳಲ್ಲಿ 10 ಕೋಟಿ ರೂಪಾಯಿ ಗಳಿಕೆ ಕಂಡಿರುವ ಸಿನಿಮಾ 4ನೇ ದಿನ ಎಷ್ಟಾಗುತ್ತೆ ಅನ್ನೋ ಕುತೂಹಲವಿದೆ. ಹೀಗಾಗಿ ಮೊದಲನೇ ವಾರ 20 ರಿಂದ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನಲಾಗಿದೆ.

More from Filmibeat

English summary
Sriimurali, Rukmini Vasanth movie Bagheera Karnataka Box office collection day 3 report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X