Bagheera Box Office Day 4: 4ನೇ ದಿನ ಬಾಕ್ಸಾಫೀಸ್‌ನಲ್ಲಿ 'ಬಫೀರ'ನಿಗೆ ಬಂಪರ್; ಕೈ ಹಿಡಿದ ಕನ್ನಡಿಗರು
ರೋರಿಂಗ್ ಸ್ಟಾರ್ ಶ್ರೀಮುರಳಿ ಮೂರು ವರ್ಷ ಕಾದಿದ್ದಕ್ಕೂ ಒಳ್ಳೆಯ ರಿಸಲ್ಟ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 'ಬಘೀರ' ಸಿನಿಮಾಗೆ ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಪಾಸಿಟಿವ್ ರೆಸಲ್ಟ್ ಸಿಗುತ್ತಿದೆ. ನಾಲ್ಕು ದಿನಗಳ ರಜೆಯನ್ನು ಈ ಸಿನಿಮಾ ಸರಿಯಾಗಿ ಬಳಸಿಕೊಂಡಿದ್ದು, ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಮೊತ್ತವನ್ನು ಕಲೆ ಹಾಕಿದೆ.
ಬೆಳಕಿನ ಹಬ್ಬ ದೀಪಾವಳಿಗೆ ಬೇರೆ ಭಾಷೆಯ ಸಿನಿಮಾಗಳು ರಿಲೀಸ್ ಆಗಿದ್ದವು. ಈ ಮಧ್ಯೆ 'ಬಘೀರ' ಕೂಡ ರಿಲೀಸ್ ಆಗಿದೆ. ಆದರೆ, ಬೇರೆ ಯಾವುದೇ ಭಾಷೆಯ ಸಿನಿಮಾ ರಿಲೀಸ್ ಆದರೂ ಕರ್ನಾಟಕದಲ್ಲಿ 'ಬಘೀರ'ನದ್ದೇ ಹವಾ. ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿಯನ್ನು ಪ್ರೇಕ್ಷಕರು ಇಷ್ಟ ಪಡುತ್ತಿದ್ದಾರೆ. ಈ ಜೋಡಿಯನ್ನು ಕನ್ನಡಿಗರು ಇಷ್ಟ ಪಟ್ಟಿದ್ದಾರೆ.

'ಬಘೀರ' ಕನ್ನಡ ಸಿನಿಮಾದ ಮಟ್ಟಿಗೆ ಹೊಸ ಪ್ರಯೋಗ. ರೆಗ್ಯೂಲರ್ ಸಿನಿಮಾಗಳ ಮಧ್ಯೆ ಸೂಪರ್ ಹೀರೋ ಕಾನ್ಸೆಪ್ಟ್ ಕ್ಲಿಕ್ ಆಗುತ್ತಿದೆ. ಕಥೆ ಹಾಗೂ ಸ್ಕ್ರೀನ್‌ಪ್ಲೇಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಶ್ರೀಮುರಳಿ ಮ್ಯಾನರಿಸಂ, ಎರಡೆರಡು ಶೇಡ್‌ಗಳು ನೋಡುಗರಿಗೆ ಕಿಕ್ ಕೊಡುತ್ತಿದೆ. ಹಾಗಿದ್ದರೆ, ನಾಲ್ಕನೇ ದಿನದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬಘೀರ' 4ನೇ ದಿನ ಹೇಗಿದೆ ಕಲೆಕ್ಷನ್?
ಈ ವರ್ಷವೂ ಕನ್ನಡ ಚಿತ್ರರಂಗ ಹೆವಿ ಲಾಸ್‌ನಲ್ಲಿದೆ. ಕನ್ನಡದಲ್ಲಿ ಸ್ಟಾರ್‌ಗಳು ಅಪರೂಪಕ್ಕೆ ರಿಲೀಸ್ ಆಗುತ್ತಿವೆ. ಇನ್ನೊಂದು ಕಡೆ ಹೊಸ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಇಷ್ಟೊಂದು ಗೊಂದಲಗಳ ಮಧ್ಯೆ 'ಬಘೀರ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಹೊಸ ಕಾನ್ಸೆಪ್ಟ್‌ಗೆ ಕನ್ನಡಿಗರು ಮನಸೋತಿರುವ ಹಾಗಿದೆ. 4ನೇ ದಿನವೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಇಂಡಸ್ಟ್ರೀ ಟ್ರ್ಯಾಕರ್ sacnilk ಪ್ರಕಾರ, 3.15 ಕೋಟಿ ರೂಪಾಯಿ (early estimates) ಕಲೆಕ್ಷನ್ ಮಾಡಿದೆ. ವಿತರಕರ ವಲಯದಲ್ಲೂ 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿರುಬ ಬಗ್ಗೆ ಲೆಕ್ಕ ಹಾಕಲಾಗಿದೆ.
4 ದಿನಗಳ ಒಟ್ಟು ಕಲೆಕ್ಷನ್
ಪ್ರಶಾಂತ್ ನೀಲ್ ಕಥೆ ಬರೆದಿದ್ದರಿಂದ 'ಬಘೀರ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅದರಲ್ಲೂ ಕನ್ನಡದ ಮೊದಲ ಸೂಪರ್ ಹೀರೋ ಸಿನಿಮಾ ಅನ್ನೋ ವಿಷಯ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಬ್ಯಾಕ್ ಟು ಬ್ಯಾಕ್ ರಜೆಗಳು ಬಂದಿದ್ದರಿಂದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ನಾಲ್ಕು ದಿನಗಳು ಕೂಡ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಒಟ್ಟು 4 ದಿನಗಳು 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
'ಬಘೀರ' 4 ದಿನಗಳ ಕಲೆಕ್ಷನ್ ಹೀಗಿದೆ
ಮೊದಲ ದಿನ 3.25 ಕೋಟಿ ರೂ.
ಎರಡನೇ ದಿನ 3.30 ಕೋಟಿ ರೂ.
ಮೂರನೇ ದಿನ 3.50 ಕೋಟಿ ರೂ.
ನಾಲ್ಕನೇ ದಿನ 3.15 ಕೋಟಿ ರೂ.
ಒಟ್ಟು 13.15 ಕೋಟಿ ರೂ.
ತೆಲುಗು ವರ್ಷನ್ ಕಲೆಕ್ಷನ್ ಎಷ್ಟು?
'ಬಘೀರ' ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ. ತೆಲುಗಿನಲ್ಲೂ ರಿಲೀಸ್ ಆಗಿತ್ತು. ಪ್ರಶಾಂತ್ ನೀಲ್ ಈಗಾಗಲೇ ತೆಲುಗಿನಲ್ಲೂ ಪರಿಚಯವಿರುವ ನಿರ್ದೇಶಕರಾಗಿದ್ದರಿಂದ ಆ ಭಾಷೆಗೆ ಡಬ್ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ತೆಲುಗು ವರ್ಷನ್‌ನಿಂದ ಸುಮಾರು 1.25 ರಿಂದ 1.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾ 'ಬಘೀರ' ನಾಲ್ಕು ದಿನಗಳಲ್ಲಿ ತೆಲುಗಿನಲ್ಲೂ ಸಮಾಧಾನಕರ ಕಲೆಕ್ಷನ್ ಮಾಡಿದೆ.
ಸೋಮವಾರದ ಪರೀಕ್ಷೆಯಲ್ಲಿ ಗೆಲ್ಲುತ್ತಾ?
'ಬಘೀರ' ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನೇ ಕಂಡಿದೆ. ಆದರೆ, ಎಲ್ಲಾ ಸಿನಿಮಾಗಳಿಗೂ ಮೊದಲ ಸೋಮವಾರ ಚಾಲೆಂಜಿಂಗ್ ಆಗಿರುತ್ತೆ. ಸೋಮವಾರದ ಪರೀಕ್ಷೆ ಗೆದ್ದರೆ, ಮುಂದಿನ ದಿನಗಳಲ್ಲೂ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಮೋಸ ಆಗಲ್ಲ. ಹೀಗಾಗಿ ಇಂದು( ನವೆಂಬರ್ 4) ಸಿನಿಮಾ ಗಳಿಕೆ ಹೇಗಿರುತ್ತೆ? ಅನ್ನೋದರ ಮೇಲೆ 'ಬಘೀರ' ಭವಿಷ್ಯ ನಿರ್ಧಾರ ಆಗುತ್ತೆ. ಅಂದ್ಹಾಗೆ, ಬಾಕ್ಸಾಫೀಸ್ ಗಳಿಕೆಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಅಧಿಕೃತವಾಗಿ ನಿರ್ಮಾಣ ಸಂಸ್ಥೆ ಮಾಹಿತಿಯನ್ನು ನೀಡಿಲ್ಲ.


Click it and Unblock the Notifications











